/newsfirstlive-kannada/media/post_attachments/wp-content/uploads/2024/07/ABHI-PARAG.jpg)
ಜಿಂಬಾಬ್ವೆ ವಿರುದ್ಧದ ಟಿ-20 ಪಂದ್ಯದಲ್ಲಿ ಇವತ್ತು ಭಾರತದ ಮೂವರು ಆಟಗಾರರು ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಜಿಂಬಾಬ್ವೆ ಎದುರಿನ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಮೊದಲ ಟಿ20 ಪಂದ್ಯಕ್ಕೆ ಹರಾರೆ ಸ್ಪೋರ್ಟ್ಸ್ ಕ್ಲಬ್ ವೇದಿಕೆಯಾಗಿದೆ.
ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಹಾಗೂ ಸಾಯಿ ಸುದರ್ಶನ್ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕಱರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕ್ಯಾಪ್ಟನ್ ಶುಭ್ಮನ್ ಗಿಲ್ ಜೊತೆ ಅಭಿಷೇಕ್ ಶರ್ಮಾ ಬ್ಯಾಟಿಂಗ್ಗೆ ಬರಲಿದ್ದಾರೆ.
ಇದನ್ನೂ ಓದಿ:ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?
3ನೇ ಕ್ರಮಾಂಕದಲ್ಲಿ ಋತುರಾಜ್ ಬ್ಯಾಟ್ ಬೀಸಲಿದ್ದು, 4ನೇ ಕ್ರಮಾಂಕದಲ್ಲಿ ರಿಯಾನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಸ್ಥಾನದ ಕಗ್ಗಂಟು ಯಂಗ್ ಇಂಡಿಯಾಗೆ ಇದೆ. ಜಿತೇಶ್ ಶರ್ಮಾ ಹಾಗೂ ಧೃವ್ ಜುರೇಲ್ ಜೊತೆ ನೇರಾ ನೇರ ಫೈಟ್ ನಡೀತಿದೆ. ರಿಂಕು ಸಿಂಗ್ ಮೇಲೆ ಅಪಾರ ನಿರೀಕ್ಷೆ ಇದ್ದು, ಇಂದಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.
ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಸ್ಥಾನ ಪಡೆಯೋದು ಕನ್ಫರ್ಮ್. ಇವರ ಜೊತೆ ವೇಗಿಗಳಾಗಿ ಮುಖೇಶ್ ಕುಮಾರ್, ಅವೇಶ್ ಖಾನ್ ಅಂಡ್ ಖಲೀಲ್ ಅಹ್ಮದ್ ಕಮಾಲ್ ಮಾಡಲು ತುದಿಗಾಲಿನಲ್ಲೇ ನಿಂತಿದ್ದಾರೆ.
ಇದನ್ನೂ ಓದಿ:ವಿಶ್ವಕಪ್ ಗೆದ್ದ ಆಟಗಾರರಿಗೆ ನೀಡಿರುವ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ..?
ಟೀಂ ಇಂಡಿಯಾ: ಶುಬ್ಮನ್ ಗಿಲ್ (ಕ್ಯಾಪ್ಟನ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಧ್ರುವ್ ಜುರೇಲ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಆವೇಶ್ ಖಾನ್, ಮುಕೇಶ್ ಕುಮಾರ್, ಖಲೀಲ್ ಅಹ್ಮದ್, ರವಿ ಬಿಷ್ಣೋಯಿ, ಸಾಯಿ ಸುದರ್ಶನ್, ತುಷಾರ್ ದೇಶಪಾಂಡೆ, ಹರ್ಷಿತ್ ರಾಣಾ್
ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್ ಆಗಿ ಬರೋದು ಐಪಿಎಲ್ನ ಈ ಸ್ಟಾರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್