newsfirstkannada.com

IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್​​ ಆಗಿ ಬರೋದು ಐಪಿಎಲ್​ನ ಈ ಸ್ಟಾರ್​..!

Share :

Published July 6, 2024 at 9:18am

Update July 6, 2024 at 9:33am

  ವಿಶ್ವ ಚಾಂಪಿಯನ್ನರಿಗೆ ಇವತ್ತು ಜಿಂಬಾಬ್ವೆ ಸವಾಲ್

  ಯಂಗ್ ಇಂಡಿಯಾ ಮುಂದೆ ಬಿಗ್ ಚಾಲೆಂಜ್

  ಹರಾರೆ ಸ್ಪೋರ್ಟ್ಸ್‌ ಕ್ಲಬ್​ನಲ್ಲಿ ಮೊದಲ ಪಂದ್ಯ

ವಿಶ್ವ ಗೆದ್ದ ಸಂಭ್ರಮದಲ್ಲೇ ಟೀಮ್ ಇಂಡಿಯಾ ತೇಲಾಡುತ್ತಿದೆ. ಇಡೀ ದೇಶವೇ ವಿಜಯೋತ್ಸವದ ಗುಂಗಿನಲ್ಲಿದೆ. ಈ ನಡುವೆ ಚಾಂಪಿಯನ್ ಟೀಮ್ ಇಂಡಿಯಾ, ಹೊಸ ಸವಾಲಿಗೆ ಸಜ್ಜಾಗಿದೆ. ಇಂದಿನಿಂದಲೇ ಟಿ20 ವಿಶ್ವ ಚಾಂಪಿಯನ್ನರ್ ಹೊಸ ಆಧ್ಯಾಯ ಆರಂಭವಾಗ್ತಿದ್ದು, ಶುಭಾರಂಭದ ಕನಸಿನಲ್ಲಿದೆ.

ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಹೊಸ ಸವಾಲಿಗೆ ಸಜ್ಜಾಗಿದೆ. ಹೊಸ ರೂಪ.. ಹೊಸ ಬದಲಾವಣೆ.. ಹೊಸ ನಾಯಕನ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ವಿಶ್ವ ಚಾಂಪಿಯನ್ನರು. ಇಂದಿನಿಂದಲೇ ಹೊಸ ಆಧ್ಯಾಯದ ಮುನ್ನುಡಿಗೆ ರೆಡಿಯಾಗಿದ್ದಾರೆ.
ಜಿಂಬಾಬ್ವೆ ಎದುರಿನ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಮೊದಲ ಟಿ20 ಪಂದ್ಯಕ್ಕೆ ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ವೇದಿಕೆಯಾಗಿದೆ. ಒಂದೆಡೆ ಆತಿಥೇಯ ಜಿಂಬಾಬ್ವೆ, ಚಾಂಪಿಯನ್ ಟೀಮ್ ಇಂಡಿಯಾಗೆ ಟಕ್ಕರ್ ನೀಡುವ ಲೆಕ್ಕಚಾರದಲ್ಲಿದ್ರೆ. ಇತ್ತ ಶುಭ್​ಮನ್​ ಗಿಲ್ ನೇತೃತ್ವದ ಯಂಗ್ ಇಂಡಿಯಾ ಇತಿಹಾಸ ಪುನಾರಾವರ್ತಿಸುವ ಕನಸು ಕಾಣುತ್ತಿದೆ. ಈ ನಡುವೆ ಯಂಗ್ ಇಂಡಿಯಾಗೆ ಮುಂದೆ ಬಿಗ್ ಚಾಲೆಂಜ್ ಇದೆ.

ಇದನ್ನೂ ಓದಿ:ಪ್ರಯಾಣಿಕರೇ ಹುಷಾರ್​.. ಚಾರ್ಮಾಡಿ ಘಾಟ್​​ನಲ್ಲಿ ಮತ್ತೆ ಬಿರುಕು.. ಭಾರೀ ಅನಾಹುತದ ಆತಂಕ..

ಗಿಲ್​ ಸಾಥ್​ ಕೊಡಲಿದ್ದಾರೆ ಅಭಿಷೇಕ್ ಶರ್ಮಾ
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕಱರು ಅನ್ನೋ ಪ್ರಶ್ನೆ ಅಭಿಮಾನಿಗಳ ಕಾಡ್ತಿತ್ತು. ಆ ಕೌತುಕತೆಗೆ ಕ್ಯಾಪ್ಟನ್​ ಶುಭ್​ಮನ್ ಗಿಲ್​ ತೆರೆ ಎಳೆದಿದ್ದಾರೆ. ಡಿಸ್ಟ್ರಕ್ಟಿವ್ ಯಂಗ್ ಬ್ಯಾಟರ್​ ಅಭಿಷೇಕ್ ಶರ್ಮಾ ಹಾಗೂ ತಾನು ಇನ್ನಿಂಗ್ಸ್ ಆರಂಭಿಸೋದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಋತುರಾಜ್ ಬ್ಯಾಟ್ ಬೀಸಲಿದ್ದು, 4ನೇ ಕ್ರಮಾಂಕದಲ್ಲಿ ರಿಯಾನ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಜಿತೇಶ್​ ಶರ್ಮಾಗಾ..? ಧೃವ್ ಜರೇಲ್​​ಗಾ ಲಕ್​..?
ವಿಕೆಟ್ ಕೀಪರ್ ಸ್ಥಾನದ ಕಗ್ಗಂಟು ಯಂಗ್ ಇಂಡಿಯಾಗೆ ಇದೆ. ಜಿತೇಶ್​ ಶರ್ಮಾ ಹಾಗೂ ಧೃವ್ ಜುರೇಲ್​ ಜೊತೆ ನೇರಾ ನೇರ ಫೈಟ್ ನಡೀತಿದ್ದು, ಈಗಾಗಲೇ ಟಿ20 ಕ್ರಿಕೆಟ್​ನಲ್ಲಿ ಆಡಿದ ಅನುಭವ ಹೊಂದಿರುವ ಜಿತೇಶ್​ ಶರ್ಮಾ ಫಸ್ಟ್ ಚಾಯ್ಸ್​ ಆಗೋ ಸಾಧ್ಯತೆ ಇದೆ. ವಿಶ್ವಕಪ್​​ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ರಿಂಕು ಸಿಂಗ್​ ಮೇಲೆ ಅಪಾರ ನಿರೀಕ್ಷೆ ಇದ್ದು, ಇಂದಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.

ಇದನ್ನೂ ಓದಿ:‘ಅವರು ಅಳುತ್ತಿದ್ದರು.. ಆಗ ನನ್ನ ಕಣ್ಣಲ್ಲೂ ನೀರು ಬಂತು..’ ರೋಹಿತ್​​ ಕಣ್ಣೀರಿಟ್ಟ ಕ್ಷಣ ವಿವರಿಸಿದ ಕೊಹ್ಲಿ

ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಆಲ್​ರೌಂಡರ್​ ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್‌ ಸ್ಥಾನ ಪಡೆಯೋದು ಬಹುತೇಕ ಕನ್ಫರ್ಮ್. ಇವರ ಜೊತೆ ವೇಗಿಗಳಾಗಿ ಮುಖೇಶ್ ಕುಮಾರ್, ಅವೇಶ್‌ ಖಾನ್‌ ಆ್ಯಂಡ್ ಖಲೀಲ್‌ ಅಹ್ಮದ್‌ ಕಮಾಲ್ ಮಾಡಲು ತುದಿಗಾಲಿನಲ್ಲೇ ನಿಂತಿದ್ದಾರೆ.

ಶುಭಾರಂಭದ ಕನಸಿನಲ್ಲಿ ಅತಿಥೇಯ ಜಿಂಬಾಬ್ವೆ..!
ಜಿಂಬಾಬ್ವೆ ತಂಡ ಸಿಕಂದರ್ ರಾಜಾ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಅನುಭವಿಗಳನ್ನ ಕೈಬಿಟ್ಟರೂ, ತಂಡದಲ್ಲಿರುವ ಬ್ರಿಯಾನ್‌ ಬೆನೆಟ್‌, ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಮದಾಂಡೆ ಕ್ಲೈವ್‌ ಹಾಗೂ ವೇಗಿ ರಿಚರ್ಡ್‌ ಎನ್ಗವಾರ ಮ್ಯಾಚ್ ವಿನ್ನರ್ ಪ್ಲೇಯರ್​ಗಳಾಗಿದ್ದಾರೆ. ಹಿರಿಯ ಆಟಗಾರರ ಲಭ್ಯತೆಯನ್ನೇ ಎನ್​ಕ್ಯಾಶ್ ಮಾಡಿಕೊಂಡು ಮೊದಲ ಎರಡು ಪಂದ್ಯಗಳನ್ನ ಗೆಲ್ಲೋ ಲೆಕ್ಕಚಾರದಲ್ಲಿದೆ. ಹೀಗಾಗಿ ಟೀಮ್ ಇಂಡಿಯಾ ಎಚ್ಚರಿಕೆಯ ಆಟವಾಡಬೇಕಿದೆ.

ಇದನ್ನೂ ಓದಿ:ಇದು ವಿಶ್ವಕಪ್​ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!

ಇತಿಹಾಸ ಮುಂದುವರಿಸುತ್ತಾ ಯಂಗ್ ಇಂಡಿಯಾ..?
2022ರ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ತಿದೆ. ಕಳೆದ ಪ್ರವಾಸದಲ್ಲಿ ಶಿಖರ್ ಧವನ್​ ನೇತೃತ್ವದ ಭಾರತ ತಂಡ ಸರಣಿ ಜಯಿಸಿ ಕಮಾಲ್​ ಮಾಡಿತ್ತು. 1998ರ ಏಕೈಕ ಟೆಸ್ಟ್ ಬಿಟ್ಟರೆ, ಇದುವರೆಗೆ ಜಿಂಬಾಬ್ವೆಯಲ್ಲಿ ಸರಣಿ ಸೋತ ಉದಾಹರಣೆ ಇಲ್ಲ. ಹೀಗಾಗಿ ಗೆಲುವಿನ ಇತಿಹಾಸ ಮುಂದುವರಿಸುವ ಬಿಗ್ ಚಾಲೆಂಜ್ ಯಂಗ್ ಇಂಡಿಯಾ ಮುಂದಿದೆ.

ಒಟ್ನಲ್ಲಿ.. ಅನುಭವಿಗಳ ಅಲಭ್ಯತೆ ನಡುವೆಯೂ ಯಂಗ್ ಇಂಡಿಯಾ ಬಲಿಷ್ಠವಾಗಿ ಕಣ್ತಿದ್ದು, ಸರಣಿ ಜಯಿಸೋ ಹಾಟ್​ ಫೇವರಿಟ್ ಆಗಿದೆ. ಆದ್ರೆ, ತವರಿನ ಲಾಭದ ನಿರೀಕ್ಷೆಯಲ್ಲಿರುವ ಜಿಂಬಾಬ್ವೆಯನ್ನ ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ ಅನ್ನೋದು ಮರೆಯುವಂತಿಲ್ಲ.

ಇದನ್ನೂ ಓದಿ:ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್​​ ಆಗಿ ಬರೋದು ಐಪಿಎಲ್​ನ ಈ ಸ್ಟಾರ್​..!

https://newsfirstlive.com/wp-content/uploads/2024/04/Shubhman_Gill.jpg

Load More