Advertisment

ಅಭಿಷೇಕ್ ಶರ್ಮಾ ಭರ್ಜರಿ ಆಲ್​ರೌಂಡರ್ ಪ್ರದರ್ಶನ.. ಸೆಮಿಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

author-image
Bheemappa
Updated On
ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್.. ಶರವೇಗದ ಸೆಂಚುರಿ ಸಿಡಿಸಿದ ಯುವ ಬ್ಯಾಟರ್​
Advertisment
  • ಲೀಗ್​ನ ಕೊನೆ ಪಂದ್ಯ ಒಮಾನ್ ವಿರುದ್ಧ ಆಡಲಿರುವ ಭಾರತ
  • ತಿಲಕ್ ವರ್ಮಾ ನೇತೃತ್ವದ ಟೀಮ್ ಇಂಡಿಯಾಕ್ಕೆ ಭರ್ಜರಿ ಜಯ
  • ಪಂದ್ಯದ ಟಾಸ್ ಗೆದ್ರು ಪಂದ್ಯ ಗೆಲ್ಲಲಾಗಲಿಲ್ಲ ಎದುರಾಳಿ ತಂಡಕ್ಕೆ

ಉದಯೋನ್ಮುಖ ಟಿ20 ಏಷ್ಯಾ ಕಪ್ 2024 ಟೂರ್ನಿಯಲ್ಲಿ ಯುನಿಟೆಡ್ ಅರಬ್​ ಎಮಿರೈಟ್ಸ್​ ವಿರುದ್ಧ ಭಾರತ ಎ ತಂಡವು ಭರ್ಜರಿಯಾಗಿ ವಿಜಯ ಸಾಧಿಸಿ, ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ.

Advertisment

ಒಮಾನ್‌ನ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡ ಯುಎಇ ಕ್ಯಾಪ್ಟನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ಟೀಮ್ ಇಂಡಿಯಾ ಎ ತಂಡವನ್ನು ಫೀಲ್ಡಿಂಗ್​ಗೆ ಆಹ್ವಾನಿಸಿದರು. ಆಯ್ಕೆಯಂತೆ ಬ್ಯಾಟಿಂಗ್ ಮಾಡಿದ ಯುಎಇ ಅಲ್ಪಮೊತ್ತಕ್ಕೆ ಮುಗ್ಗರಿಸಿತು. ಭಾರತ ಬೌಲರ್​ಗಳ ಪರಾಕ್ರಮಕ್ಕೆ ಕೇವಲ 16.5 ಓವರ್​ಗೆ ಆಲೌಟ್ ಆಗಿ 107 ರನ್​ಗಳನ್ನು ಮಾತ್ರ ಗಳಿಸಿತು.

publive-image

ಇದನ್ನೂ ಓದಿ: ಭಾರತದ ಹಿತಕ್ಕಾಗಿ ದಂಪತಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು- CM

ಈ ಟಾರ್ಗೆಟ್ ಬೆನ್ನು ಹತ್ತಿದ್ದ ಟೀಮ್ ಇಂಡಿಯಾ ಕೇವಲ 10.5 ಓವರ್​ಗಳಲ್ಲೇ 3 ವಿಕೆಟ್​ಗೆ 111 ರನ್​ ಗಳಿಸಿ ವಿಜಯ ಪತಾಕೆ ಹಾರಿಸಿತು. ಓಪನರ್ ಅಭಿಷೇಕ್ ಶರ್ಮಾ ಅವರ ಭರ್ಜರಿ ಆಲ್​ರೌಂಡರ್ ಪ್ರದರ್ಶನದ ಮುಂದೆ ಯುಎಇ ಬೌಲರ್ಸ್​ ಆಟ ನಡೆಯಲಿಲ್ಲ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಒಂದು ವಿಕೆಟ್​​ ಜೊತೆಗೆ 5 ಬೌಂಡರಿ, 4 ಸಿಕ್ಸರ್ ಸಮೇತ 58 ರನ್​ಗಳನ್ನ ಬಾರಿಸಿದರು. ಇನ್ನು ಕ್ಯಾಪ್ಟನ್ ತಿಲಕ್ ವರ್ಮಾ 21 ರನ್ ಗಳಿಸಿ ಔಟ್ ಆದರು. ಇವರ ನಂತರ ಬಂದ ನೆಹಾಲ್ ಮತ್ತು ಆಯುಷ್ ಬದೋನಿ ತಂಡವನ್ನು ದಡ ಸೇರಿಸಿದರು.

ಇದನ್ನೂ ಓದಿ:25 ಸಾವಿರ ಸರ್ಕಾರಿ ಉದ್ಯೋಗಗಳಿಗೆ ಆಹ್ವಾನ.. ಇದಕ್ಕೆ ಇವರು ಮಾತ್ರ ಅಪ್ಲೇ ಮಾಡಬೇಕು; ಯಾಕೆ ಗೊತ್ತಾ? 

Advertisment

ಭಾರತ ಎ ತಂಡವು ಈ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಗ್ರೂಪ್​ ಬಿಯಲ್ಲಿ ಟೀಂ ಇಂಡಿಯಾ ಅಗ್ರ ಸ್ಥಾನ ಪಡೆದುಕೊಂಡಿದೆ. ಪಾಕಿಸ್ತಾನ, ಯುಎಇ ಹಾಗೂ ಒಮಾನ್ ಇದೇ ಗ್ರೂಪ್​ನಲ್ಲಿದ್ದು ತಿಲಕ್ ವರ್ಮಾ ಪಡೆ ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ. ಈ ಪಂದ್ಯದ ನಂತರ ಸೆಮಿಫೈನಲ್ ಪಂದ್ಯ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment