newsfirstkannada.com

ಸೌತ್ ಆಫ್ರಿಕಾಗೆ ಕೊನೆಯ 5 ಓವರ್​​ಗೆ 29 ರನ್ ಬೇಕಿತ್ತು ಅಷ್ಟೇ.. ಆಮೇಲೆ ನಡೆದ ಮ್ಯಾಜಿಕ್ ಹೇಗಿತ್ತು..!

Share :

Published June 30, 2024 at 5:20am

    ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸು ನನಸು

    17 ವರ್ಷಗಳ ಬಳಿಕ 2ನೇ ಬಾರಿ ಭಾರತಕ್ಕೆ T20 ಚಾಂಪಿಯನ್

    ಭಾರತದ ಬೌಲಿಂಗ್​ ದಾಳಿಗೆ ಮಂಡಿಯೂರಿದ ಹರಿಣಗಳು

17 ವರ್ಷಗಳ ಬಳಿಕ 2ನೇ ಬಾರಿ ಭಾರತಕ್ಕೆ T20 ಚಾಂಪಿಯನ್​ ಕಿರೀಟ ದಕ್ಕಿದೆ. ಭಾರತದ ಬೌಲಿಂಗ್​ ದಾಳಿಗೆ ಮಂಡಿಯೂರಿದ ಹರಿಣಗಳು ಫೈನಲ್ ಫೈಟ್​ನಲ್ಲಿ ಸೋಲನುಭವಿಸಿದೆ. ವಿಶ್ವಕಪ್​ ಗೆದ್ದ ಟೀಮ್ ಇಂಡಿಯಾ ಚುಟುಕು ಚಾಂಪಿಯನ್​ ಆಗಿ ಮೆರೆದಾಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ಮೊದಲ ಓವರ್​ನಲ್ಲೇ ಸಾಲಿಡ್ ಸ್ಟಾರ್ಟ್ ಸಿಕ್ತು. ಮೊದಲ ಓವರ್​ನಲ್ಲೇ ಮೂರು ಬೌಂಡರಿ ಬಾರಿಸಿದ ವಿರಾಟ್, ವೀರಾವೇಶದ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿದ್ರು. ಅತ್ತ ರೆಡ್​ ಹಾಟ್​​ ಫಾರ್ಮ್​ನಲ್ಲಿದ್ದ ರೋಹಿತ್ ಪಂತ್ ಹಾಗೂ ಸೂರ್ಯ ಕುಮಾರ್ ಯಾದವ್ , ಬಂದಷ್ಟೇ ವೇಗವಾಗಿ ಹಿಂತಿರುಗಿದ್ರು.

ಹೈಫ್ರೆಷರ್ ಗೇಮ್​ನಲ್ಲಿ ಕ್ಲಾಸಿ ಇನ್ನಿಂಗ್ಸ್​ ಕಟ್ಟಿದ ವಿರಾಟ್, 47 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ರು. ಅಷ್ಟೇ ಅಲ್ಲದೇ 76 ರನ್ ಸಿಡಿಸಿ ತಂಡಕ್ಕೆ ನೆರವಾದ್ರು. ನಿಗದಿತ 20 ಓವರ್​ಗಳಲ್ಲಿ ಟೀಮ್ ಇಂಡಿಯಾ 7 ವಿಕೆಟ್​ ನಷ್ಟಕ್ಕೆ 176 ರನ್ ದಾಖಲಿಸಿತು. ಆ ಮೂಲಕ ಸೌತ್ ಆಫ್ರಿಕಾಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಯ್ತು.

177 ರನ್​​ಗಳ ಟಾರ್ಗೆಟ್​.. ಚೊಚ್ಚಲ ವಿಶ್ವಕಪ್​​​​​​​​​ ಗೆಲ್ಲೋ ಕನಸಲ್ಲೇ ಕಣಕ್ಕಿಳಿದ ಸೌತ್ ಆಫ್ರಿಕಾ ಒಂದು ಹಂತದವರೆಗೆ ಟಫ್ ಫೈಟ್ ಕೊಡ್ತು. ಕ್ಲಾಸೆನ್, 23 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ರು. ಸೌತ್ ಆಫ್ರಿಕಾಗೆ ವಿಜಯದ ಮುಕುಟು ಧರಿಸುವ ಲೆಕ್ಕಚಾರದಲ್ಲಿದ್ರು. ಆ ಕೊನೆ ಐದು ಓವರ್​​​​​​​​​​​​​ನಲ್ಲಿ ಎಲ್ಲವೂ ಬದಲಾಯ್ತು. ಪಂದ್ಯ ಕೈಜಾರುವ ನಿರಾಸೆ ಸೃಷ್ಟಿಯಾಗ್ತಿದ್ದಂತೆ ಟೀಮ್ ಇಂಡಿಯಾ ಬೌಲರ್​ಗಳು ಕಮ್​ ಬ್ಯಾಕ್ ಮಾಡಿದ್ರು.

ಕೊನೆ 5 ಓವರ್​ಗಳಲ್ಲಿ ಸೌತ್ ಆಫ್ರಿಕಾ ಗೆಲುವಿಗೆ 29 ರನ್ ಬೇಕಿತ್ತು. ಹರಿಣಗಳನ್ನ ಕಟ್ಟಿಹಾಕಲು ರೋಹಿತ್ ಪಡೆ ಸಕ್ಸಸ್ ಆಗಿದೆ. ಪರಿಣಾಮ 20 ಓವರ್​ಗಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್​​​​​​​ಗಳಿಸಲಷ್ಟೇ ಶಕ್ತವಾಯ್ತು. 7 ರನ್​ಗಳ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತು. ಇದರೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ಕನಸು ನನಸು ಮಾಡ್ತು. ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು.

ಇದನ್ನೂ ಓದಿ:Breaking: ‘ನಿಮ್ಮ ಬಾಯಿಗೆ ಬೀಗ ಹಾಕಿ, ಇಲ್ಲದಿದ್ರೆ..’ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌತ್ ಆಫ್ರಿಕಾಗೆ ಕೊನೆಯ 5 ಓವರ್​​ಗೆ 29 ರನ್ ಬೇಕಿತ್ತು ಅಷ್ಟೇ.. ಆಮೇಲೆ ನಡೆದ ಮ್ಯಾಜಿಕ್ ಹೇಗಿತ್ತು..!

https://newsfirstlive.com/wp-content/uploads/2024/06/Champions-3.jpg

Load More