/newsfirstlive-kannada/media/post_attachments/wp-content/uploads/2024/08/MODI-TO-UKREIANE-1.jpg)
ಬ್ರಿಕ್ಸ್ ಸಮಾವೇಶಕ್ಕೂ ಮುನ್ನ ಭಾರತ-ಚೀನಾ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಗಡಿಯಲ್ಲಿ ಪರಸ್ಪರ ಸೇನೆ ಹಿಂತೆಗೆತಕ್ಕೆ ಉಭಯ ದೇಶಗಳು ಒಪ್ಪಿಕೊಂಡಿವೆ. ಅಲ್ಲದೇ ಎಲ್​ಎಸಿ (ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್) ಗಡಿಯುದ್ದಕ್ಕೂ ಗಸ್ತು ತಿರುಗಲು ಭಾರತ, ಚೀನಾ ನಿರ್ಧರಿಸಿವೆ.
ಅ.22-23 ರಂದು ರಷ್ಯಾದ ಕಜಾನ್​ನಲ್ಲಿ 16ನೇ ಬ್ರಿಕ್ಸ್​ ಶೃಂಗ ಸಭೆ ನಡೆಯಲಿದ್ದು ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ, ರಷ್ಯಾ ಪ್ರವಾಸಕ್ಕೆ ಮುನ್ನವೇ ಮಹತ್ವದ ಬೆಳವಣಿಗೆ ನಡೆದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಕೊನೆಗಾಣಿಸಲು ಭಾರತ, ಚೀನಾ ಒಪ್ಪಂದವೊಂದಕ್ಕೆ ಬಂದಿವೆ ಅಂತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2023/10/Indian-Army.jpg)
2020ರ ಜೂನ್​ನಲ್ಲಿ ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಭಾರತ, ಚೀನಿ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದು ಎರಡೂ ಕಡೆಯ ಸೇನೆಗೆ ಸಾಕಷ್ಟು ಹಾನಿಯಾಗಿತ್ತು. ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಚೀನಾದ 40ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು, ಆದರೆ ಚೀನಾದ ಪೀಪಲ್ಸ್​ ಲಿಬರೇಷನ್ ಆರ್ಮಿ ಅಂಕಿ-ಅಂಶ ಬಹಿರಂಗಪಡಿಸಿರಲಿಲ್ಲ.
ಇದನ್ನೂ ಓದಿ: TB Dam: ಕ್ರಸ್ಟ್ ಗೇಟ್ ಅಳವಡಿಸಿದವರನ್ನು ಮರೆಯಿತೇ ಸರ್ಕಾರ? ಆರ್ಥಿಕ ಸಂಕಷ್ಟದಲ್ಲಿ ಕನ್ನಯ್ಯ ನಾಯ್ಡು ತಂಡ
ಚೀನಾ ಸೈನಿಕರ ಆಕ್ರಮಣಕಾರಿ ನೀತಿಯಿಂದ ಭಾರತ, ಚೀನಾ ಸಂಬಂಧ ಹದಗೆಟ್ಟಿತ್ತು. ಆ ಬಳಿಕ ಚೀನಾ ಗಡಿಯಲ್ಲಿ ಉದ್ವಿಗ್ನತೆ ಏರ್ಪಟ್ಟು ಎರಡೂ ದೇಶಗಳು ಗಡಿಯಲ್ಲಿ ಸೇನೆ ನಿಯೋಜಿಸಿದ್ದವು. ಪೂರ್ವ ಲಡಾಖ್​ನ LAC ಉದ್ದಕ್ಕೂ ಘರ್ಷಣೆಗೆ ಅಂತ್ಯ ಹಾಡಲು ನಿರ್ಧರಿಸಿರುವ ಭಾರತ, ಚೀನಾ ಗಸ್ತು ವ್ಯವಸ್ಥೆ ಕುರಿತು ಒಪ್ಪಂದವೊಂದಕ್ಕೆ ಬಂದಿವೆ. ಒಪ್ಪಂದದ ಪ್ರಕಾರ ಡೆಪ್ಸಾಂಗ್, ಡೆಮ್ಚೋಕ್ ಪ್ರದೇಶಗಳಲ್ಲಿ ಭಾರತ, ಚೀನಾ ಸೈನಿಕರು ಗಸ್ತು ತಿರುಗಲಿದ್ದಾರೆ. ಇದನ್ನು ಮಿಲಿಟರಿ ಭಾಷೆಯಲ್ಲಿ ಡಿಎಂಗೇಜ್​ಮೆಂಟ್ ಅಂತ ಕರೆಯುತ್ತಾರೆ. ಈ ಒಪ್ಪಂದದಿಂದಾಗಿ ಪೂರ್ವ ಲಡಾಖ್​ನಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಕ್ರಮೇಣ ಕಡಿಮೆಯಾಗಲಿದೆ. ಈ ಕುರಿತಾಗಿ ಎರಡೂ ದೇಶಗಳ ಸೇನಾ ಕಮಾಂಡರ್​ಗಳ ಮಟ್ಟದಲ್ಲಿ 21 ಸುತ್ತಿನ ಮಾತುಕತೆ ನಡೆದಿತ್ತು. ಸದ್ಯ ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಉಭಯ ದೇಶಗಳು ಒಪ್ಪಿವೆ.
ಮೇ 2020ರ ಮೊದಲು ಇದ್ದ ಸ್ಥಿತಿಗೆ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಿದ ನಂತರವೇ ಚೀನಾದೊಂದಿಗೆ ಸಂಬಂಧ ಸಾಮಾನ್ಯವಾಗಿರುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ. ಒಪ್ಪಂದದಿಂದ ಗಡಿಯಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರಿಕ್ಸ್​ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/08/NARENDRA-MODI-2.jpg)
ಗಸ್ತು ಒಪ್ಪಂದ
ಭಾರತ, ಚೀನಾ ಗಡಿಯಲ್ಲಿ ಶಾಂತಿ ಮರು ಸ್ಥಾಪಿಸಲು ಪ್ರಮುಖ ಕಾರಣವೆಂದು ಪರಿಗಣಿಸಲಾದ ಪೂರ್ವ ಲಡಾಖ್​ನ LAC ಯಲ್ಲಿ ಗಸ್ತು ತಿರುಗುವ ಒಪ್ಪಂದಕ್ಕೆ ಭಾರತ, ಚೀನಾ ಮುಂದಾಗಿವೆ. ಡೆಪ್ಸಾಂಗ್ ಮತ್ತು ಡೆಮ್​ಚೋಕ್​ ಎರಡು ಪ್ರದೇಶಗಳಲ್ಲಿ ಗಸ್ತು ಒಪ್ಪಂದಕ್ಕೆ ಉಭಯ ದೇಶಗಳು ಸಮ್ಮತಿಸಿವೆ. ಈ ಒಪ್ಪಂದದಿಂದ 5ಕ್ಕೂ ಹೆಚ್ಚು ಗಸ್ತು ಕೇಂದ್ರಗಳು ಪುನಾರಂಭವಾಗಲಿವೆ.
ಈ ಒಪ್ಪಂದದಿಂದ ಚೀನಾದೊಂದಿಗೆ ಶಾಂತಿ ಸ್ಥಾಪನೆಯತ್ತ ಮಹತ್ವದ ಹೆಜ್ಜೆ ಇಡಲು ಸಹಾಯ ಆಗಲಿದೆ. ಭವಿಷ್ಯದಲ್ಲಿ ಸಂಘರ್ಷದ ಸಾಧ್ಯತೆ ಕಡಿಮೆ ಮಾಡಲಿದೆ ಅಂತ ವಿದೇಶಾಂಗ ಇಲಾಖೆ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us