ಈ ದೊಡ್ಡ ಸಾಧನೆಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸ್ಪೂರ್ತಿ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಲಿದ ಮತ್ತೊಂದು ಮೆಡಲ್
ಎಂ.ಎಸ್ ಧೋನಿ ಬಗ್ಗೆ ಮಾಹಿತಿ ಹಂಚಿಕೊಂಡ ಸ್ವಪ್ನಿಲ್ ಕುಸಾಲೆ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. 50 ಮೀಟರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಸ್ವಪ್ನಿಲ್ ಕುಸಾಲೆಯ ಗೆಲುವಿನೊಂದಿಗೆ ಪ್ಯಾರೀಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 3ನೇ ಪದಕ ಒಲಿದಿದೆ. ಇಡೀ ಭಾರತವೇ ಸ್ವಪ್ನಿಲ್ ಸಾಧನೆಗೆ ಸೆಲ್ಯೂಟ್ ಅಂತಿದೆ.
ಇದನ್ನೂ ಓದಿ: ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್ಗೆ ಏನಾಯಿತು..?
ಇಂದು ಪ್ಯಾರಿಸ್ನಲ್ಲಿ ಭಾರತದ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಾಡುವಂತೆ ಮಾಡಿದ ಸ್ವಪ್ನಿಲ್ಗೆ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಸ್ಪೂರ್ತಿಯಂತೆ. ಧೋನಿಯ ಅಭಿಮಾನಿ ಎಂದು ಕೂಡ ಸ್ವಪ್ನಿಲ್ ಹೇಳಿಕೊಂಡಿದ್ದಾರೆ. ಬಹುತೇಕ ಇಬ್ಬರ ಕಥೆಯ ಕೂಡ ಒಂದೇ ತೆರನಾಗಿದೆ. ಟ್ರೈನ್ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ ಭಾರತಕ್ಕೆ 3 ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟಂತೆ, ಸ್ವಪ್ನಿಲ್ ಒಲಿಂಪಿಕ್ಸ್ ಪದಕ ಗೆದ್ದು ಕೊಟ್ಟಿದ್ದಾರೆ. ಸ್ವಪ್ನಿಲ್ ಕೂಡ 2015ರಿಂದ ಸೆಂಟ್ರಲ್ ರೈಲ್ವೆಯಲ್ಲಿ ಕೆಲಸ ಮಾಡ್ತಿದ್ದಾರೆ. ಆಗಿನಿಂದಲೇ ಧೋನಿ ಅವರನ್ನ ಸ್ಪೂರ್ತಿಯಾಗಿ ತೆಗೆದುಕೊಂಡಿದ್ದ ಸ್ವಪ್ನಿಲ್, ಭಾರತಕ್ಕೆ ಪದಕ ಗೆದ್ದು ಕೊಡುವ ಕನಸು ಕಂಡಿದ್ದರು.
ಇದನ್ನೂ ಓದಿ: ₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ.. ₹120 ಬಕೆಟ್ ಮೇಲೆ ಅವಲಂಬಿತ ಆಯ್ತಾವೆಂದು ವ್ಯಂಗ್ಯ
Swapnil Kusale yesterday to PTI:
“I admire MS Dhoni for the person that he is. My sport requires me to be as calm and patient as he is on the field. I also relate to his story as I am a ticket collector like he was”. pic.twitter.com/fxJyhJx16A
— Mufaddal Vohra (@mufaddal_vohra) August 1, 2024
ಶೂಟಿಂಗ್ನಲ್ಲಿ ಸ್ವಪ್ನಿಲ್ ಯಾರನ್ನೂ ಫಾಲೋ ಮಾಡಲ್ವಂತೆ. ಅದರ ಹೊರತಾಗಿ ಧೋನಿಯನ್ನ ಹೆಚ್ಚು ಫಾಲೋ ಮಾಡ್ತಾರಂತೆ. ಶೂಟಿಂಗ್ಗೆ ಏಕಾಗ್ರತೆ ಹಾಗೂ ತಾಳ್ಮೆ ತುಂಬಾ ಮುಖ್ಯ. ಜೊತೆಗೆ ನಾನು ಮತ್ತು ಇಬ್ಬರೂ ಟಿಕೆಟ್ ಕಲೆಕ್ಟರ್ ಆಗಿದ್ವಿ. ಹೀಗಾಗಿ ನಾನು ಅವರನ್ನ ಹೆಚ್ಚು ಫಾಲೋ ಮಾಡ್ತೀನಿ ಎಂದು ಸ್ವಪ್ನಿಲ್ ಹೇಳಿಕೊಂಡಿದ್ದಾರೆ. ಜೊತೆಗೆ ಎಂ.ಎಸ್ ಧೋನಿ ಅನ್ಟೋಲ್ಡ್ ಸ್ಟೋರಿ ಚಿತ್ರವನ್ನೂ ಹಲವು ಸಲ ನಾನು ನೋಡಿದ್ದೇನೆ ಎಂದು ಸ್ವಪ್ನಿಲ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ