ಭಾರತೀಯ ರೈಲ್ವೆ ಸೇವೆಯ ಮೇಲೆ ಪರಿಣಾಮ ಬೀರದ BSOD
ಮೈಕ್ರೋಸಾಫ್ಟ್ನಿಂದಾಗಿ ವಿಶ್ವವೇ ನಡುಗಿದರು ಜಗ್ಗಲಿಲ್ಲ ನಮ್ಮ ರೈಲ್ವೆ
ಏನಿದು CRIS? ದೊಡ್ಡ ಅಡಚಣೆಯಿಂದ ಪಾರಾಗಿದ್ದು ಹೇಗೆ ಭಾರತೀಯ ರೈಲ್ವೆ?
ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ವಿಶ್ವದಾದ್ಯಂತ ಮೈಕ್ರಾಸಾಫ್ಟ್ ಬಳಕೆದಾರರು ಸಾಫ್ಟವೇರ್ನಲ್ಲಿ ಸೃಷ್ಟಿಯಾದ ಏಕಾಏಕಿ ತಾಂತ್ರಿಕ ದೋಷದಿಂದಾಗಿ ತೀವ್ರ ತೊಂದರೆಗೆ ಒಳಗಾಗಿದ್ದರು. ಹೆಚ್ಚು ಕಡಿಮೆ ಅನೇಕ ಕ್ಷೇತ್ರಗಳು ಕೆಲವು ಗಂಟೆಗಳ ಕಾಲ ತಟಸ್ಥವಾಗಿದ್ದವು. ಬ್ಲೂ ಸ್ಕ್ರೀನ್ ಡೆತ್ನಿಂದಾಗಿ ಇಡೀ ವಿಶ್ವದಲ್ಲಿ ಮೈಕ್ರೋಸಾಫ್ಟ್ ಬಳಕೆದಾರರು ತಾತ್ಕಾಲಿಕ ತೊಂದರೆಗೆ ಒಳಗಾಗಿದ್ರು.
ಮೈಕ್ರೋಸಾಫ್ಟ್ನಲ್ಲಿ ದಿಢೀರನೇ ಸೃಷ್ಟಿಯಾದ ತಾಂತ್ರಿಕ ದೋಷ ಹಲವು ಏರ್ಲೈನ್ಸ್ ಕಂಪನಿಗಳ, ಟೆಲಿಕಮ್ಯುನಿಕೇಷನ್ ಕಂಪನಿಗಳ ನಿತ್ಯ ಕಾರ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಿತ್ತು. ಬ್ಯಾಂಕ್ಗಳು, ಮಾಧ್ಯಮ ಸಂಸ್ಥೆಗಳು ಕೂಡ ಕೆಲವು ಗಂಟೆಗಳ ಮಟ್ಟಿಗೆ ತೊಂದರೆಯನ್ನು ಅನುಭವಿಸಬೇಕಾಯ್ತು. ನಂತರ ಹಲವು ಗಂಟೆಗಳ ಬಳಿಕ ಪರಿಸ್ಥಿತಿ ಯಥಾಸ್ಥಿತಿಗೆ ಬಂತು. ಇಷ್ಟೆಲ್ಲಾ ಸಮಸ್ಯೆಗಳನ್ನು, ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಕೂಡ ಭಾರತೀಯ ರೈಲುಗಳು ಮಾತ್ರ ಎಂದಿನಂತೆ ಸರಾಗವಾಗಿ ತಮ್ಮ ಹಳಿಯ ಮೇಲೆ ಸಾಗಿದವು. ಮೈಕ್ರಾಸಾಫ್ಟ್ನ ತಾಂತ್ರಿಕ ದೋಷ ಜಾಗತಿಕವಾಗಿ ತೊಂದರೆಯನ್ನು ನೀಡಿದರು ಸಹ, ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ಭಾರತೀಯ ರೈಲ್ವೆಗೆ ಮೈಕ್ರೋಸಾಫ್ಟ್ನಲ್ಲಿ ಉಂಟಾದ ಸಮಸ್ಯೆ ಯಾವುದೇ ಪರಿಣಾಮವನ್ನುಂಟು ಮಾಡಲಿಲ್ಲ. ಎಂದಿನಂತೆ ರೈಲುಗಳು ಹಳಿಗಳ ಮೇಲೆ ಓಡಿದವು. ಎಂದಿನಂತೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆದ್ವು, ಕ್ಯಾನ್ಸಲ್ ಆದ್ವು, ಎಂದಿನಂತೆ ಪ್ರಯಾಣಿಕರಿಗೆ ಅವರ ಪ್ರಯಾಣದ ವಿವರಗಳು ಮೇಲ್ ಹಾಗೂ ಮೆಸೇಜ್ ಮೂಲಕ ಅವರ ಮೊಬೈಲ್ ತಲುಪಿದವು. ಒಟ್ಟಾರೆಯಾಗಿ ಭಾರತೀಯ ರೈಲ್ವೆ ನಿರ್ವಿಘ್ನವಾಗಿ ತನ್ನ ಪ್ರಯಾಣಿಕರಿಗೆ ಎಂದಿನಂತೆ ಸೇವೆಯನ್ನು ಒದಗಿಸಿತು. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಸೌಂಡ್ ಮಾಡ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರು ಭಾರತೀಯ ರೈಲ್ವೆ ಇಲಾಖೆಯನ್ನು ಮೈಕ್ರೋಸಾಫ್ಟ್ ಕಾ ಬಾಪ್ ಎಂದೇ ಬಣ್ಣಿಸುತ್ತಿದ್ದಾರೆ. ವಿಶ್ವವೇ ಮೈಕ್ರೋಸಾಫ್ಟ್ನಿಂದಾಗಿ ಬೆಚ್ಚಿ ಬಿದ್ದರೆ ನಮ್ಮ ರೈಲ್ವೆ ಇಲಾಖೆ ಕೊಂಚವೂ ಅಲುಗಾಡಲಿಲ್ಲ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಏರ್ಲೈನ್ಸ್, ಟೆಲಿಕಮ್ಯೂನಿಕೇಷನ್ನಂತಹ ಸಂಸ್ಥೆಗಳೇ ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸಿದ್ರು ರೈಲ್ವೆ ಇಲಾಖೆಗೆ ಮಾತ್ರ ಯಾಕೆ ತನ್ನ ಸೇವೆಯನ್ನು ಅಷ್ಟು ಸರಾಗವಾಗಿ ನೀಡಲು ಸಾಧ್ಯವಾಯ್ತು ಅನ್ನೋ ಚರ್ಚೆಗಳು ಈಗ ಶುರುವಾಗಿವೆ. ಅದಕ್ಕೆ ಕಾರಣ ರೈಲ್ವೆ ಇಲಾಖೆ ಅಂಥಹದೊಂದು ಟೀಮ್ ಅಂಥಹದೊಂದು ವ್ಯವಸ್ಥೆಯನ್ನು ತನ್ನಲ್ಲಿ ತಾನು ಅಳವಡಿಸಿಕೊಂಡಿದೆ.
ಇದನ್ನೂ ಓದಿ: ರಣಬೀರ್, ಆಲಿಯಾ ದಾಂಪತ್ಯದಲ್ಲೂ ಬಿರುಕು.. ಅಂಬಾನಿ ಮಗನ ಮದುವೆಯಲ್ಲಿ ಇಬ್ಬರ ಮಧ್ಯೆ ನಡೆದಿದ್ದೇನು?
ಇಂಡಿಯನ್ ರೈಲ್ವೆ ಯಾವುದೇ ತೊಂದರೆ ಅನುಭವಿಸದೆ ಎಂದಿನಂತೆ ಸೇವೆ ಕೊಡಲು ಸಾಧ್ಯವಾಗಿದ್ದು ಪ್ರಮುಖವಾಗಿ ಕ್ರಿಸ್ (CRIS) ಅಂದ್ರೆ ಸೆಂಟರ್ ಆಫ್ ರೈಲ್ವೆ ಇನ್ಫಾರ್ಮೇಷನ್ ಸಿಸ್ಟಮ್. ಈ ವ್ಯವಸ್ಥೆ. ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದರಿಂದಲೇ ಭಾರತೀಯ ರೈಲ್ವೆಗೆ ಯಾವುದೇ ತೊಂದರೆ ಉಂಟಾಗಲಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಕ್ರಿಸ್ ವ್ಯವಸ್ಥೆಯ ಮೂಲಕವೇ ಮಾಹಿತಿ ತಂತ್ರಜ್ಞಾನ ಹಾಗೂ ಇ-ಗವರ್ನನ್ಸ್ನನ್ನು ನಿರ್ವಹಿಸುತ್ತದೆ. ರೈಲ್ವೆ ಮಂತ್ರಾಲಯದ ಪ್ರಮುಖ ಸಂಸ್ಥೆ ಇದು ಎಂದೇ ಕ್ರಿಸ್ನ್ನು ಬಣ್ಣಿಸಲಾಗುತ್ತದೆ. ಇದೇ ಕ್ರಿಸ್ ಸೆಂಟ್ರಲ್ ಆನ್ಲೈನ್ ಪ್ಲಾಟಫಾರ್ಮ್ ಅನ್ನು ಅಭಿವೃದ್ಧಿಪಡಿಸಿದ್ದು. ಪ್ಯಾಸೆಂಜರ್ಸ್ ರಿಸರ್ವೇಷನ್ ಸಿಸ್ಟಮ್(PRS)ನ್ನು ಒಳಗೊಂಡ ರೈಲ್ವೆ ಟಿಕೆಟ್ ಬುಕ್ಕಿಂಗ್, ಅನ್ ರಿಸರ್ವ್ಡ್ ಟಿಕೆಟ್ ಸಿಸ್ಟಮ್ (UTI) ಇವೆಲ್ಲವನ್ನೂ ನಿರ್ವಹಿಸುವುದೇ ಈ CRIS. ನಿತ್ಯ ಭಾರತೀಯ ರೈಲ್ವೆಯಲ್ಲಿ ಲಕ್ಷಾಂತರ ಜನರು ಟಿಕೆಟ್ ಬುಕ್ ಮಾಡುತ್ತಾರೆ, ಲಕ್ಷಾಂತರ ಜನರು ಟಿಕೆಟ್ ಕ್ಯಾನ್ಸಲ್ ಮಾಡುತ್ತಾರೆ ಅದ್ಯಾವುದಕ್ಕೂ ಧಕ್ಕೆ ಬರದಂತೆ ಸೇವೆಯನ್ನು ನಿರ್ವಹಿಸಲು ಸಾಧ್ಯವಾಗಿದ್ದು ಇದೇ ಕ್ರಿಸ್ನಿಂದಾಗಿ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ತರುಣ್ ಸುಧೀರ್.. ಮದುವೆ ಆಗೋ ಹುಡುಗಿ ಬಗ್ಗೆ ನಾಳೆಯೇ ಅನೌನ್ಸ್!
ಇದಿಷ್ಟೇ ಮಾತ್ರವಲ್ಲ CRIS ರೈಲ್ವೆ ಆಪರೇಷನ್ ಸಿಸ್ಟಮ್ (ROS)ನ್ನು ಕೂಡ ಅಭಿವೃದ್ಧಿಪಡಿಸಿದೆ ಹಾಗೂ ಇದೇ ಅದರ ನಿರ್ವಹಣೆಯನ್ನೂ ಕೂಡ ಮಾಡುತ್ತದೆ. ರೈಲ್ವೆ ಸಿಬ್ಬಂದಿಗಳಿಗೆ ಟ್ರೇನ್ಗಳ ಸಮಯದ ಸಂಪೂರ್ಣ ಮಾಹಿತಿಯನ್ನು ನೀಡುವುದು ಸಿಗ್ನಲ್ಗಳಿಗೆ ಸಹಾಯ ನೀಡುವುದು ಇವೆಲ್ಲವನ್ನೂ ಇದೇ ಕ್ರಿಸ್ ಮಾಡುವುವದರಿಂದಾಗಿ ಇಷ್ಟು ಸಮರ್ಥವಾಗಿ ಭಾರತೀಯ ರೇಲ್ವೆ ಇಲಾಖೆಗೆ ಸೇವೆ ನೀಡಲು ಸಾಧ್ಯವಾಗಿದೆ. ಕ್ರಿಸ್ ಸಂಸ್ಥೆಯ ಸಮರ್ಥ ಕಾರ್ಯನಿರ್ವಹಣೆಯಿಂದಾಗಿಯೇ ಜಾಗತಿಕ ಸಮಸ್ಯೆಯೊಂದು ಭಾರತೀಯ ರೈಲ್ವೆ ಇಲಾಖೆಗೆ ಕೊಂಚವೂ ಸೋಕದೆ ನಿರಾಳವಾಗಿ ಸೇವೆ ನೀಡಲು ಸಾಧ್ಯವಾಗಿದ್ದು ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಭಾರತೀಯ ರೈಲ್ವೆ ಇಲಾಖೆಯನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ಅದೆಲ್ಲದ ಶ್ರೇಯ ನಿಜಕ್ಕೂ ರೇಲ್ವೆ ಮಾಹಿತಿ ವ್ಯವಸ್ಥೆಯ ಕೇಂದ್ರಕ್ಕೆ (CRIS) ಸಲ್ಲಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ