/newsfirstlive-kannada/media/post_attachments/wp-content/uploads/2024/07/Falls.jpg)
ಮುಂಗಾರು ಮಳೆ ನಿಧಾನಕ್ಕೆ ಸುರಿದರೆ ಸಂತಸ. ಬೇಕಾದಷ್ಟು ಬಂದ್ರೆ ಸಂಭ್ರಮ. ಹೆಚ್ಚಾದ್ರೆ ಸಂಕಷ್ಟ. ಮಳೆಯ ಜೊತೆ ಆಟ ಆಡೋದಕ್ಕೆ ನಿಂತ್ರೆ ಪ್ರಾಣ ಸಂಕಟ. ಬಿಸಿಲಿನ ಬೇಗೆಗೆ ಬೆಂಡಾಗಿದ್ದ ಜನರು, ಕಾಣದ ಕಡಲಿಗೆ ಹಂಬಲಿಸ್ತಾ ಮಳೆಗಾಗಿ ಪ್ರಾರ್ಥಿಸ್ತಿದ್ರು. ಹೀಗೆ ಬಂದ ವರುಣ ಪ್ರಾಣಕ್ಕೂ ಸಂಚಕಾರ ತರ್ತಿದ್ದಾನೆ.
ನಾಲ್ವರು ಮಕ್ಕಳು, ಓರ್ವ ಮಹಿಳೆ ನೀರುಪಾಲು
महाराष्ट्र के लोनावाला में बड़ा हादसा..
पिकनिक मानना गया पूरा परिवार बुशी डेम में डूबा..
परिवार में महिला समेत छोटे बच्चे भी पानी के तेज बहाव में बहे..
सर्च ऑपरेशन जारी है.#Maharashtrapic.twitter.com/a0cAskXmwS
— Vivek Gupta (@imvivekgupta)
महाराष्ट्र के लोनावाला में बड़ा हादसा..
पिकनिक मानना गया पूरा परिवार बुशी डेम में डूबा..
परिवार में महिला समेत छोटे बच्चे भी पानी के तेज बहाव में बहे..
सर्च ऑपरेशन जारी है.#Maharashtrapic.twitter.com/a0cAskXmwS— Vivek Gupta (@imvivekgupta) June 30, 2024
">June 30, 2024
ಎಂಥಾ ಭಯಾನಕ ದೃಶ್ಯ ನೋಡಿ ಇದು.. ರಜೆ ಇದೆ ಎಂಜಾಯ್ ಮಾಡೋಣ ಅಂತಾ ಪ್ರವಾಸಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದವರು ಜಲಾಘಾತಕ್ಕೆ ಸಿಲುಕಿದ್ದಾರೆ. ಮಹಾರಾಷ್ಟ್ರದ ಲೋನವಾಲದಲ್ಲಿರೋ ಭುಶಿ ಡ್ಯಾಮ್ ಪಕ್ಕದ ಜಲಪಾತ ವೀಕ್ಷಣೆಗೆ ಕುಟುಂಬವೊಂದು ಹೋಗಿತ್ತು. ಏಕಾಏಕಿ ಡ್ಯಾಮ್ ನೀರು ತುಂಬಿ ಹರಿದಿದೆ. ಇದರ ಪರಿಣಾಮ ಮಹಿಳೆ ಹಾಗೂ ನಾಲ್ವರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ವರುಣನಿಗೂ ಎದೆನಡುಗಿಸುವಂತಿದೆ.
ನೋಡನೋಡ್ತಿದ್ದಂತೆ ಕುಸಿದೇ ಬಿಡ್ತು ರಸ್ತೆ
ಗುಜರಾತ್ನ ಅಹಮದಾಬಾದ್ ಭಾರೀ ಮಳೆಯಿಂದಾಗಿ ನೋಡನೋಡ್ತಿದ್ದಂತೆ ರಸ್ತೆಯೊಂದು ಕುಸಿದು ಬಿಟ್ಟಿದೆ. ದೊಡ್ಡ ರಂಧ್ರವೇ ನಡುರೋಡಲ್ಲಿ ಬಿದ್ದು ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ನಡುರಸ್ತೆಯಲ್ಲಿ ಮಿನಿ ಜಲಪಾತ ಸೃಷ್ಟಿಯಾದಂತಿತ್ತು.
Oh My #Ahmedabad !!
What happened to your WORLD CLASSS Road?
?Orchid Sky City Complex on O7 Road pic.twitter.com/E8elfQpHrR
— Mahua Moitra Fans (@MahuaMoitraFans)
Oh My #Ahmedabad !!
What happened to your WORLD CLASSS Road?
📌Orchid Sky City Complex on O7 Road pic.twitter.com/E8elfQpHrR— Mahua Moitra Fans (@MahuaMoitraFans) June 30, 2024
">June 30, 2024
ಕುಸಿದ ರಸ್ತೆಯಲ್ಲಿ ಸಿಲುಕಿದ ಕಾರು
ಇದೇ ಗುಜರಾತ್ನ ಗಾಂಧಿನಗರದಲ್ಲಿಯೂ ರಸ್ತೆಯೊಂದು ಮಳೆಯ ಹೊಡೆತಕ್ಕೆ ಬಾಯ್ಬಿಟ್ಟಿದೆ. ಕಾರೊಂದು ಸಿಲುಕಿಹಾಕಿಕೊಂಡಿದ್ದು, ಪರದಾಟಕ್ಕೆ ಕಾರಣವಾಯ್ತು
State of the art roads of Gujarat's capital city of Gandhinagar!
Christopher Nolan must visit Gujarat for inspiration for his coming sci-fi projects.
Gujarat is truly living in the future.
We got roads that can eat cars as well as pedestrians when hunger strikes!#Gujarat… pic.twitter.com/3T0TzlAc3I
— Achal Shah (@achalshah06) June 30, 2024
ಸೋರುತಿಹುದು ರೇಲ್ವೇ ನಿಲ್ದಾಣದ ಮಾಳಿಗೆ
ಗುಜರಾತ್ನ ಆನಂದ್ ನಗರದಲ್ಲಿರೋ ರೇಲ್ವೇ ನಿಲ್ದಾಣ ಮಳೆಗೆ ಸೋರಲು ಪ್ರಾಂರಂಭಿಸಿತ್ತು. ಪ್ರಯಾಣಿಕರಿಗೆ ಪರದಾಟ ಅನಿವಾರ್ಯವಾಗಿತ್ತು.
ಇದನ್ನೂ ಓದಿ: ಭಾರತದ ಬಾಲಕಿ ಪ್ರತಿಭೆಗೆ ಹುಚ್ಚೆದ್ದು ಕುಣಿದ ಅಮೆರಿಕನ್ಸ್.. ಈಕೆ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರಾ!
ಅವ್ಯವಸ್ಥೆಯಿಂದ ಸಂಚಾರಕ್ಕೆ ಸಂಚಕಾರ
ದೆಹಲಿಯಲ್ಲಿ ವರುಣನಬ್ಬರ ಜೋರಾಗಿದೆ. ಈ ನಡುವೆ ಫರಿದಾಬಾದ್ನ ಗ್ರೀನ್ಫೀಲ್ಡ್ ಕಾಲೋನಿಯಲ್ಲಿ ಮಳೆನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಿರೋದ್ರಿಂದ ಕಾರೊಂದು ಸಿಕ್ಕಿಬಿದ್ದಿತ್ತು. ಪಾಪ ಆ ಲೇಡಿ ಓನರ್ ಗೋಳು ಈ ಕಣ್ಣಲ್ಲಿ ನೋಡೋಕೆ ಆಗ್ತಿಲ್ಲ
वीडियो फरीदाबाद की ग्रीनफील्ड कॉलोनी का बताया जा रहा है, हरियाणा में दस साल से BJP सरकार है, लेकिन ये शिवर शायद भूपिंदर सिंह हुड्डा ने बनवाए थे, इसलिए इसमें भाजपा को कोई दोष ना दें।
??? pic.twitter.com/nF1PJpKmiJ— Inderjeet Barak? (@inderjeetbarak)
वीडियो फरीदाबाद की ग्रीनफील्ड कॉलोनी का बताया जा रहा है, हरियाणा में दस साल से BJP सरकार है, लेकिन ये शिवर शायद भूपिंदर सिंह हुड्डा ने बनवाए थे, इसलिए इसमें भाजपा को कोई दोष ना दें।
😂😂😂 pic.twitter.com/nF1PJpKmiJ— Inderjeet Barak🌾 (@inderjeetbarak) June 29, 2024
">June 29, 2024
ಕಾರುಗಳನ್ನ ಕೊಚ್ಚಿ ಕೊಂಡೊಯ್ತಿದೆ ನದಿ
ಉತ್ತರಾಖಂಡ್ನ ಹರಿದ್ವಾರದಲ್ಲಿ ಮಳೆದ್ವಾರ ಓಪನ್ ಆದಂತಿದೆ. ಶುಖಿ ನದಿ ಅಬ್ಬರದ ಹರಿವಿನಲ್ಲಿ ಕಾರುಗಳು ತರೆಗೆಲೆಗಳಾಗಿವೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಹತ್ತಾರು ಕಾರುಗಳು, ಬೈಕ್ಗಳು ಕೊಚ್ಚಿ ಹೋಗ್ತಿವೆ. ಸುಖಿ ನದಿ ಸಾಮಾನ್ಯವಾಗಿ ಬತ್ತಿದ ಸ್ಥಿತಿಯಲ್ಲೇ ಇರುತ್ತಿತ್ತು. ನೀರಿಲ್ಲದ ಕಾರಣ ಅನೇಕರು ಎಂದಿನಂತೆ ಅಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರು. ಆದ್ರೆ ಏಕಾಏಕಿ ಸುರಿದ ಭಾರೀ ಮಳೆಗೆ ಸುಖಿ ನದಿ ಉಕ್ಕಿ ಹರಿದಿದೆ. ಇದರಿಂದ ಹಲವು ಕಾರು, ಬಸ್‌ಗಳು ಕೊಚ್ಚಿ ಹೋಗಿವೆ.
#haridwar में हरकी पैड़ी पर बहकर पहुंचे वाहन…. #haridwarfloodpic.twitter.com/F1FAgk6XRz
— Neha Bohra (@neha_suyal)
#haridwar में हरकी पैड़ी पर बहकर पहुंचे वाहन…. #haridwarfloodpic.twitter.com/F1FAgk6XRz
— Neha Bohra (@neha_suyal) June 30, 2024
">June 30, 2024
ಕಾರಿನ ಮೇಲೆ ಬಿದ್ದ ಬೃಹತ್ ಮರ
ಅತ್ತ ಗುಜರಾತ್ನಲ್ಲಿ ಗಾಳಿ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಅಲ್ಲೇ ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ರಿಂದ ಫುಲ್ ಜಖಂ ಆಗಿವೆ. ಎರಡು ಕಾರುಗಳ ಸೌಂದರ್ಯವನ್ನ ಮರ ಕೆಡಿಸಿದೆ. ಅತ್ತ ನಿಂತಿದ್ದ ಕಾರುಗಳಾಗಿದ್ರಿಂದ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಸ್ಯಾಂಡಲ್ವುಡ್ ಮತ್ತೋರ್ವ ನಟಿಗೂ ಅಶ್ಲೀಲ ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿ.. ಏನಿದು ಹೊಸ ಟ್ವಿಸ್ಟ್?
ಮಳೆಗೆ ಮುಳುಗಿದ ಅಲ್ಕಾಪುರ ಸೊಸೈಟಿ
ಇನ್ನು, ಮಳೆಗೆ ಅಲ್ಕಾಪುರ ಸೊಸೈಟಿಯಲ್ಲಿರೋ ಮನೆಗಳು ಜಲಾವೃತಗೊಂಡಿವೆ. ಮಂಡಿವರೆಗೆ ನಿಂತ ನೀರಲ್ಲೇ ಓಡಾಡೋ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿತ್ತು.
ದೆಹಲಿಯಲ್ಲಿ 11, ಅಸ್ಸಾಂನಲ್ಲಿ ಇಬ್ಬರು ಸಾವು
ಮಳೆ ಸಂಬಂಧಿತ ಅವಘಡದಲ್ಲಿ ಈವರೆಗೆ ದೆಹಲಿಯಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು, ಅಸ್ಸಾಂನಲ್ಲೂ ವರುಣನ ಅವಾಂತರ ಜೋರಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ‘ದರ್ಶನ್ ನನ್ನ ಮಗು, ಅವನಷ್ಟೇ ನೋವು ತಿಂದಿದೀನಿ’- ಕೊಲೆ ಕೇಸ್ ಬಗ್ಗೆ ಹಂಸಲೇಖ ಬೇಸರ!
ಒಟ್ಟಿನಲ್ಲಿ ಮಳೆ ಹಳ್ಳಕೊಳ್ಳ, ನದಿ, ತೊರೆ, ಜಲಪಾತಗಳಿಗೆ ಜೀವಕಳೆ ನೀಡಿದ್ರೆ, ಇನ್ನೂ ಕೆಲವೆಡೆ ಅಪಾಯಕ್ಕೂ ಆಹ್ವಾನಕೊಟ್ಟಿದೆ. ಜನರ ಜೀವವನ್ನೂ ಬಲಿ ತೆಗೆದುಕೊಳ್ಳೋದಕ್ಕೆ ಶುರುಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ