/newsfirstlive-kannada/media/post_attachments/wp-content/uploads/2024/06/TEM-INDIA-2.jpg)
ಭಾರತ ತಂಡವು 68 ರನ್‌ಗಳಿಂದ ಇಂಗ್ಲೆಂಡ್ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಈ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ಬಾರ್ಬಡೋಸ್‌ನ ಬ್ರಿಜ್‌ಟೌನ್‌ನಲ್ಲಿ ರಾತ್ರಿ 8 ಗಂಟೆಯಿಂದ ಫೈನಲ್ ಪಂದ್ಯವನ್ನು ಆಡಲಿದೆ.
T20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಉಭಯ ತಂಡಗಳು ಇದುವರೆಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಒಂದೂ ಪಂದ್ಯವನ್ನೂ ಸೋತಿಲ್ಲ. ಇದೀಗ ಫೈನಲ್ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ.
ಇದನ್ನೂ ಓದಿ:ನಿನ್ನೆ ಹಾವೇರಿಯಲ್ಲಿ.. ಇವತ್ತು ಶಿಕಾರಿಪುರದಲ್ಲಿ.. ಭೀಕರ ಅಪಘಾತಕ್ಕೆ ಮೂವರು ಯುವಕರು ಸಾವು
/newsfirstlive-kannada/media/post_attachments/wp-content/uploads/2024/06/ROHIT-SHARMA-12.jpg)
ಹವಾಮಾನ ಇಲಾಖೆ ಏನ್ ಹೇಳ್ತಿದೆ..?
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಇಂದು ಹಗಲಿನಲ್ಲಿ ಮಳೆಯ ಸಂಭವ ಇದೆ. ಪ್ರತಿಶತ 78 ಮಳೆ ಬರುವ ಸಾಧ್ಯತೆ ಇದೆ. ಜೋರಾದ ಗಾಳಿ ಕೂಡ ಇರಲಿದೆ. ಕೊನೆಯವರೆಗೂ ಮೋಡ ಕವಿದ ವಾತಾವರಣ ಇರಲಿದೆ. ರಾತ್ರಿ ವೇಳೆ ಶೇ.87ರಷ್ಟು ಮಳೆ ಬರುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೂನ್ 30 ಅಂತಿಮ ಪಂದ್ಯಕ್ಕೆ ಮೀಸಲು ದಿನ ನಿಗಧಿ ಆಗಿದೆ. ಆದರೆ ಜೂನ್ 30 ರಂದು ಕೂಡ ಮಳೆ ಬೀಳುವ ಅಪಾಯ ಇದೆ. ಜೂನ್ 30 ರಂದು ಶೇ.61 ರಷ್ಟು ಮಳೆಯಾಗುವ ಸಂಭವವಿದ್ದು, ರಾತ್ರಿ ವೇಳೆ ಶೇ.49 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೀಸಲು ದಿನವೂ ಪಂದ್ಯ ನಡೆಯುವ ಸಾಧ್ಯತೆ ಇಲ್ಲ.
/newsfirstlive-kannada/media/post_attachments/wp-content/uploads/2024/06/VIRAT-KOHLI-14.jpg)
ಎರಡೂ ತಂಡಗಳು ವಿಜೇತರಾಗಬಹುದು
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಪಂದ್ಯಕ್ಕೆ ಐಸಿಸಿ ಜೂನ್ 30 ರಂದು ಮೀಸಲು ದಿನವನ್ನಾಗಿ ಇರಿಸಿದೆ. ಜೂನ್ 29 ರಂದು ಪಂದ್ಯವನ್ನು ನಡೆಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಅದು ಸಾಧ್ಯವಾಗದಿದ್ದಾಗ ನಾಳೆ ಆಡಿಸಲಾಗುತ್ತದೆ. ನಾಳೆಯೂ ಕೂಡ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಭಾರತ ಒಮ್ಮೆ ಪ್ರಶಸ್ತಿ ಗೆದ್ದಿದೆ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸತತ 7 ಪಂದ್ಯಗಳನ್ನು ಗೆದ್ದಿದೆ. ಇದಕ್ಕೂ ಮೊದಲು ಯಾವುದೇ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಟೀಂ ಇಂಡಿಯಾ ಇಷ್ಟು ಪಂದ್ಯಗಳನ್ನು ಗೆದ್ದಿರಲಿಲ್ಲ. 2007 ಮತ್ತು 2014ರ ಟಿ20 ವಿಶ್ವಕಪ್‌ನಲ್ಲಿಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. 2007ರ T20 ವಿಶ್ವಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತ್ತು.
ಇದನ್ನೂ ಓದಿ: ಕೊಹ್ಲಿ ವಿರುದ್ಧ ಜನ ಭಾರೀ ಆಕ್ರೋಶ.. ಆದರೂ ಸ್ನೇಹಿತನ ಬಿಟ್ಟು ಕೊಡದ ಕ್ಯಾಪ್ಟನ್ ರೋಹಿತ್ ಶರ್ಮಾ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us