/newsfirstlive-kannada/media/post_attachments/wp-content/uploads/2024/04/T20-World-cup.jpg)
ಟಿ-20 ವಿಶ್ವಕಪ್ ಎದುರು ನೋಡುತ್ತಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳಿಗೆ ಇವತ್ತು ತೆರೆ ಬೀಳಲಿದೆ. ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಯಾವೆಲ್ಲ ಆಟಗಾರರು ಪ್ರತಿನಿಧಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಇಂದು ಸಂಜೆ ವೇಳೆಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟ ಮಾಡಲಿದೆ. ಎಲ್ಲವೂ ಅಂದುಕೊಂಡಂತೆ ಇವತ್ತು ಸಾಧ್ಯವಾಗದಿದ್ದಲ್ಲಿ, ನಾಳೆ ಟೀಂ ಇಂಡಿಯಾ ಪ್ರಕಟವಾಗಲಿದೆ. ವರದಿಗಳ ಪ್ರಕಾರ ಇಂದು ಸಂಜೆ ವೇಳೆಗೆ 15 ಆಟಗಾರರ ಹೆಸರನ್ನು ಬಿಸಿಸಿಐ ರಿವೀಲ್ ಮಾಡಲಿದೆ.
ಇದನ್ನೂ ಓದಿ: ಪ್ರಿಯತಮೆ ತಾಯಿಯ ಎದೆಗೆ ಗುಂಡಿಟ್ಟು ಕೊಂದ 17 ವರ್ಷದ ಪಾಪಿ ಪ್ರಿಯಕರ.. ಕಾರಣ?
/newsfirstlive-kannada/media/post_attachments/wp-content/uploads/2024/02/Team-India.jpg)
ಭಾರತ ಸಂಭವನೀಯ ತಂಡ
ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಶುಭ್​​ಮನ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಪಕ್ಕಾ ಆಗಿದೆ ಎನ್ನಲಾಗ್ತಿದೆ. ಬ್ಯಾಕ್​ಅಪ್​​ ಓಪನರ್​​​ ಆಗಿ ಯಶಸ್ವಿ ಜೈಸ್ವಾಲ್​​​ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್​​​​​​​ ಹಾಗೂ ಕೆ.ಎಲ್.ರಾಹುಲ್​​​​​​ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ವಿಕೆಟ್ ಕೀಪರ್​​ ಆಗಿ ರಿಷಬ್​​​​ ಪಂತ್​​​, ಫಿನಿಶರ್​ಗಳಾಗಿ ರಿಂಕು ಸಿಂಗ್ ಸ್ಥಾನ ಪಡೆಯಬಹುದು. ಆಲ್​ರೌಂಡರ್ ಸ್ಥಾನದ ಮೇಲೆ ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಕಣ್ಣಿಟ್ಟಿದ್ದಾರೆ. ಯುಜುವೇಂದ್ರ ಚಹಲ್​, ಕುಲ್​ದೀಪ್​​ ಯಾದವ್ ಸ್ಪಿನ್ ಕೋಟಾದಲ್ಲಿ ಸ್ಥಾನ ಪಡೆದ್ರೆ, ವೇಗಿಗಳಾಗಿ ಜಸ್​ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್​​​ ಹಾಗೂ ಅರ್ಷ್​ದೀಪ್​​​​ ಸಿಂಗ್​​ ಆಯ್ಕೆ ದಟ್ಟವಾಗಿದೆ. 15 ಆಟಗಾರರ ಪ್ರಮುಖ ತಂಡದ ಜೊತೆ 5 ಸ್ಟ್ಯಾಂಡ್​​ಬೈ ಆಟಗಾರರಿಗೂ ಫ್ಲೈಟ್ ಏರಲಿದ್ದಾರೆ.
ಇದನ್ನೂ ಓದಿ:‘ಬಾರೋ ಬಾರೋ ಮಳೆರಾಯ..’ 48 ಗಂಟೆಯಲ್ಲಿ ತಂಪೆರೆಯಲಿದೆ ಮಳೆ..! ಎಲ್ಲೆಲ್ಲಿ..?
ವಿಕೆಟ್ ಕೀಪರ್​​​​​​​​ ಸಂಜು ಸ್ಯಾಮ್ಸನ್​​​, ಆಲ್​​​ರೌಂಡರ್​​ ಶಿವಂ ದುಬೆ ಹಾಗೂ ಸ್ಪಿನ್ನರ್​​​ ರವಿ ಬಿಷ್ನೋಯಿ ಸ್ಟ್ಯಾಂಡ್​​​​ ಬೈ ಆಟಗಾರರಾಗಿ ಆಯ್ಕೆಯಾಗೋ ಸಾಧ್ಯತೆಯಿದೆ. ಜೊತೆಗೆ ಯುವ ವೇಗಿ ಮಯಂಕ್​ ಯಾದವ್ ಹಾಗೂ ಮುಖೇಶ್​ ಕುಮಾರ್​ ಕೂಡ ರೋಹಿತ್​​​​ ಶರ್ಮಾ ಅಂಡ್ ಟೀಮ್​​​​ ಜೊತೆ ಪ್ರಯಾಣ ಬೆಳೆಸುವ ನಿರೀಕ್ಷೆ ಹೊಂದಲಾಗಿದೆ.
2008ರ ಬಳಿಕ ಭಾರತ ಟಿ20 ವಿಶ್ವಕಪ್​ ಗೆದ್ದಿಲ್ಲ. 16 ವರ್ಷದಿಂದ ಟೀಮ್ ಇಂಡಿಯಾಗೆ ಕಪ್​​ ಮರೀಚಿಕೆ ಆಗಿದೆ. ಹಾಗಾಗಿ 2024ರ ಟಿ20 ವಿಶ್ವಕಪ್​​ವನ್ನ ಗೆಲ್ಲಲೇಬೇಕೆಂದು ಬಿಗ್​​ಬಾಸ್​ಗಳು ಶಪಥಗೈದಿದ್ದು, ಅಳೆದು ತೂಗಿ ಬಲಿಷ್ಠ ತಂಡವನ್ನ ಕೆರಿಬಿಯನ್ನರ ನಾಡಿಗೆ ಕಳುಹಿಸಲು ತೆರೆಮರೆಯಲ್ಲೆ ಪ್ಲಾನ್ ಮಾಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us