543 ಕ್ಷೇತ್ರಗಳ ಪೈಕಿಯಲ್ಲಿ NDAಗೆ ಎಷ್ಟು ಸ್ಥಾನ ಸಿಕ್ಕಿದೆ..?
ಕಳೆದ ಬಾರಿಗಿಂತ ಕಾಂಗ್ರೆಸ್ ಪ್ರದರ್ಶನದಲ್ಲಿ ಬೆಳವಣಿಗೆ
ದೇಶದ ಅತೀದೊಡ್ಡ 4ನೇ ಪಕ್ಷವಾಗಿ ಹೊರಹೊಮ್ಮಲಿದೆ YSR
2024ರ ಲೋಕಸಭೆ ಚುನಾವಣೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಈ ಬಾರಿ ಯಾವ ಸರ್ಕಾರ ಬರುತ್ತೆ? ಎನ್ಡಿಎನಾ? ಇಂಡಿಯಾನಾ? ಎಂಬ ಮಾತುಗಳು ಶುರುವಾಗಿವೆ. ಇದರ ಮಧ್ಯೆ India TV-CNX ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು, NDAಗೆ ಫುಲ್ ಮಾರ್ಕ್ಸ್ ನೀಡಿದೆ.
ಸಮೀಕ್ಷೆ ಪ್ರಕಾರ, 543 ಲೋಕಸಭೆ ಕ್ಷೇತ್ರಗಳ ಪೈಕಿಯಲ್ಲಿ 318 ಸ್ಥಾನಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಒಕ್ಕೂಟ ಪಡೆಯಲಿದೆ ಎಂದು ಹೇಳಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೇವಲ 175 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆಯಂತೆ. ಬಿಜೆಪಿ ಕಳೆದ ಬಾರಿಗಿಂತ ಈ ಸಲ ಕಡಿಮೆ ಸ್ಥಾನವನ್ನು ಪಡೆಯಲಿದ್ದು, 303 ಕ್ಷೇತ್ರಗಳಲ್ಲಿದ್ದ ಹಿಡಿತ 290ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಆದರೂ ಗೆಲುವಿನ ನಾಗಲೋಟದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ.
ಇನ್ನು ಕಾಂಗ್ರೆಸ್ 52 ಕ್ಷೇತ್ರದಿಂದ 66 ಸ್ಥಾನಗಳವರೆಗೆ ಹೆಚ್ಚಿಸಿಕೊಂಡು ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಇನ್ನು ಆಂಧ್ರದ ಆಡಳಿತ ಪಕ್ಷ ವೈಎಸ್ಆರ್, 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ಯಂತೆ. ಆದರೆ 4 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT), ಒಟ್ಟು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ಯಂತೆ. ಇನ್ನು ಕಳೆದ ಬಾರಿ ಶಿವಸೇನೆ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯೂ ಕೂಡ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.
ಯಾವ ರಾಜ್ಯದಲ್ಲಿ ಯಾರಿಗೆ ಮತ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ