/newsfirstlive-kannada/media/post_attachments/wp-content/uploads/2024/06/ROHIT-RASHID.jpg)
ಭಾರತ-ಅಫ್ಘಾನಿಸ್ತಾನ ನಡುವಿನ ಸೂಪರ್-8 ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಬಾರ್ಬಡೋಸ್ ವಾರ್ ಗೆಲ್ಲಲು ಉಭಯ ತಂಡಗಳು ತೆರೆಮರೆಯಲ್ಲೆ ಭಾರಿ ತಂತ್ರ-ಪ್ರತಿತಂತ್ರ ರೂಪಿಸ್ತಿವೆ. ರೋಹಿತ್ ಶರ್ಮಾ ಹಾಗೂ ರಶೀದ್ ಖಾನ್ ಪಡೆಯ ಸ್ಟ್ರೆಂಥ್ ಅಂಡ್ ವೀಕ್ನೆಸ್ ಏನು?
ಭಾರತ vs ಅಫ್ಘನ್ ಕದನಕ್ಕೆ ಕೌಂಡ್ಡೌನ್..!
ಟಿ20 ವಿಶ್ವಕಪ್ನ ಗ್ರೂಪ್ ಸ್ಟೇಜ್ನಂತೆ ಸೂಪರ್-8ನಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡುತ್ತಾ? ಈ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಆನ್ಸರ್ ಸಿಗಲಿದೆ. ಭಾರತ-ಅಫ್ಘಾನಿಸ್ತಾನ ನಡುವಿನ ಸೂಪರ್-8 ವಾರ್ಗೆ ಕೌಂಟ್ಡೌನ್ ಶುರುವಾಗಿದ್ದು, ಸೋಲು-ಗೆಲುವಿನಷ್ಟೇ ಉಭಯ ತಂಡಗಳ ಸ್ಟ್ರೆಂಥ್ ಹಾಗೂ ವೀಕ್ನೆಸ್ ಬಗ್ಗೆಯೂ ಬಿಸಿಬಿಸಿ ಡಿಬೇಟ್ ನಡೀತಿದೆ. ಹಾಗಾದ್ರೆ ಭಾರತ ತಂಡದ ಸ್ಟ್ರೆಂಥ್ ಏನು?
ಇದನ್ನೂ ಓದಿ:ಟೀಮ್ ಇಂಡಿಯಾ ಪರ 96 ರನ್ಗಳೇ ಅತ್ಯಧಿಕ.. ರೋಹಿತ್ ಪಡೆ ಆತಂಕ ಹೆಚ್ಚಿಸಿದೆ ಈ ವಿಚಾರ..!
ಭಾರತ ತಂಡದ ಸ್ಟ್ರೆಂಥ್ ಏನು..?
ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ಅಪ್ ಸಖತ್ ಸ್ಟ್ರಾಂಗ್ ಆಗಿದೆ. 8 ಜನ ಬ್ಯಾಟರ್ಸ್ ತಂಡದಲ್ಲಿದ್ದಾರೆ. ಇನ್ನೂ ಮೊದಲೆರಡು ಪಂದ್ಯಗಳಲ್ಲಿ ಫೇಲಾಗಿದ್ದ ಸೂರ್ಯಕುಮಾರ್ ಯಾದವ್ ಫಾರ್ಮ್ಗೆ ಮರಳಿದ್ದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಜೊತೆಗೆ ರಿಷಬ್ ಪಂತ್ ಸಾಲಿಡ್ ಫಾರ್ಮ್ನಲ್ಲಿರೋದು ವರದಾನವಾಗಿದೆ. ವೈಸ್ ಕ್ಯಾಪ್ಟನ್ ಹಾರ್ದಿಕ್ ಆಲ್ರೌಂಡರ್ ಆಟ ಬಲ ತಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಭಯಾನಕ ಫಾಸ್ಟ್ ಬೌಲರ್ಸ್ ತಂಡದಲ್ಲಿದ್ದಾರೆ. ಅನುಭವಿ ರೋಹಿತ್ ನಾಯಕತ್ವ ದೊಡ್ಡ ಲಾಭವಾಗಿದೆ. ಇಲ್ಲಿತನಕ ಸೋಲರಿಯದ ಮಾತ್ರಕ್ಕೆ ಟೀಮ್ ಇಂಡಿಯಾದಲ್ಲಿ ವೀಕ್ನೆಸ್ ಇಲ್ಲವೆಂದಲ್ಲ. ಹಲವು ವೀಕ್ನೆಸ್ಗಳಿದ್ದು ಇಂದಿನ ಕದನಕ್ಕೂ ಮುನ್ನ ಅವುಗಳ ಮೇಲೆ ವರ್ಕ್ ಮಾಡಬೇಕಿದೆ.
ಭಾರತ ತಂಡದ ವೀಕ್ನೆಸ್ ಏನು..?
- ಆರಂಭಿಕರ ವೈಫಲ್ಯ ತಂಡಕ್ಕೆ ಹಿನ್ನಡೆ
- ಬ್ಯಾಡ್ಫಾರ್ಮ್ ಸುಳಿಯಲ್ಲಿ ಕಿಂಗ್ ಕೊಹ್ಲಿ
- ನಿರೀಕ್ಷಿತ ಪ್ರದರ್ಶನ ನೀಡದ ಆಲ್ರೌಂಡರ್ ಜಡ್ಡು
- ಕೈಕೊಡ್ತಿರೋ ಬಿಗ್ ಹಿಟ್ಟರ್ ಶಿವಂ ದುಬೆ
- ಓಪನರ್ಸ್ ಲೆಫ್ಟ್-ರೈಟ್ ಕಾಂಬಿನೇಷನ್ ಆಡಿಸದೇ ಹಿನ್ನಡೆ
ಅಫ್ಘನ್ ತಂಡದ ಸ್ಟ್ರೆಂಥ್ ಅಂಡ್ ವೀಕ್ನೆಸ್ ಏನು?
ಭಾರತಕ್ಕೆ ಶಾಕ್ ಕೊಡಲು ಎದುರು ನೋಡ್ತಿರೋ ಅಫ್ಘನ್ ತಂಡದಲ್ಲಿ ಹಲವು ಪಾಸಿಟಿವ್ ಅಂಶಗಳಿವೆ. ಅವು ಯಾವ ಕ್ಷಣದಲ್ಲೂ ರೋಹಿತ್ ಪಡೆಗೆ ಟಕ್ಕರ್ ಕೊಡಬಲ್ಲವು.
ಅಫ್ಘಾನಿಸ್ತಾನ ತಂಡದ ಸ್ಟ್ರೆಂಥ್ ಏನು..?
- ಪ್ರಚಂರ್ಡ್ ಫಾರ್ಮ್ನಲ್ಲಿ ಆರಂಭಿಕರು
- ಸ್ಟಾರ್ ಆಲ್ರೌಂಡರ್ಗಳ ದಂಡು
- ಬಲಿಷ್ಠವಾಗಿದೆ ಸ್ಪಿನ್ ವಿಭಾಗ
- ಅನುಭವಿ ರಶೀದ್ ಖಾನ್ ನಾಯಕತ್ವ
- ಗರಿಷ್ಠ ವಿಕೆಟ್ ಟೇಕರ್ ಫರೂಕಿ ಬಲ
ಅಫ್ಘನ್ ತಂಡದಲ್ಲೂ ಹಲವು ವೀಕ್ನೆಸ್ಗಳಿವೆ. ಆ ವೀಕ್ನೆಸ್ಗಳನ್ನ ಭಾರತ ಎನ್ಕ್ಯಾಶ್ ಮಾಡಿಕೊಳ್ಳಲು ಎದುರು ನೋಡ್ತಿದೆ.
ಅಫ್ಘಾನಿಸ್ತಾನ ತಂಡದ ವೀಕ್ನೆಸ್ ಏನು..?
ಅಫ್ಘನ್ ತಂಡ ವೀಕ್ ಮಿಡಲ್ ಆರ್ಡರ್ ಹೊಂದಿದೆ. ಸ್ಟಾರ್ ಸ್ಪಿನ್ನರ್ ಮುಜೀಬ್ ಹೊರಬಿದ್ದಿದ್ದು ತಂಡಕ್ಕೆ ದೊಡ್ಡ ಸೆಟ್ಬ್ಯಾಕ್ ಆಗಿದೆ. ಮೊಹಮ್ಮದ್ ನಬಿ ಹೊರತಪಡಿಸಿದ್ರೆ ಹೇಳಿಕೊಳ್ಳುವಂತ ಫಿನಿಶರ್ಗಳಿಲ್ಲ. ದೊಡ್ಡ ತಂಡದೆದುರು ಬಿಗ್ ಸ್ಟೇಜ್ನಲ್ಲಿ ಒತ್ತಡ ನಿಭಾಯಿಸದೇ ಮುಗ್ಗರಿಸುವ ಅಭ್ಯಾಸವಿದೆ.
ಇದನ್ನೂ ಓದಿ:ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!
ಏನೆಲ್ಲಾ ಸ್ಟ್ರೆಂಥ್ ಅಂಡ್ ವೀಕ್ನೆಸ್ ಇದ್ದರೂ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಅದರಾಚೆಗೆ ಶಕ್ತಿಮೀರಿ ಹೋರಾಟ ನಡೆಸಲಿವೆ. ಈ ಕ್ರೂಷಿಯಲ್ ಗೇಮ್ನಲ್ಲಿ ಯಾರಿಗೆ ಯಾರು ಚೆಕ್ಮೇಟ್ ಕೊಡ್ತಾರೆ ಅನ್ನೋದನ್ನ ಕಾದುನೋಡೋಣ.
ಇದನ್ನೂ ಓದಿ:ದರ್ಶನ್ ಕೇಸ್ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್