Advertisment

ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್​ಗೆ ಹೋಗೋದ್ಯಾರು?

author-image
Ganesh
Updated On
India vs England ಮ್ಯಾಚ್​ಗೆ ಮಳೆಯ ಆತಂಕ.. ಮಳೆರಾಯ ಬಂದರೆ ಪಂದ್ಯದ ರೂಲ್ಸ್ ಏನು ಹೇಳುತ್ತೆ..?
Advertisment
  • ಎರಡೂ ಸೆಮಿಫೈನಲ್​​ಗೂ ಮಳೆಯ ಆತಂಕ ಇದೆ
  • ಅಫ್ಘಾನ್ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ಮಾಡ್ತಿದೆ
  • ಫೈನಲ್ ಪಂದ್ಯದಲ್ಲೂ ಮಳೆ ಬಂದರೆ ಏನಾಗುತ್ತದೆ..?

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ T20 ವಿಶ್ವಕಪ್ ಸೆಮಿಫೈನಲ್ ಪ್ರವೇಶ ಮಾಡಿದೆ. ನಾಳೆ ನಡೆಯುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಮತ್ತೊಂದು ಕಡೆ ದಕ್ಷಿಣ ಆಫ್ರಿಕಾವು ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ.

Advertisment

ಮಳೆಯ ಆತಂಕ..
ನಾಳೆ ನಡೆಯುವ ಎರಡೂ ಪಂದ್ಯಗಳಿಗೂ ಮಳೆಯ ಆತಂಕ ಇದೆ. ನಾಳೆ ಬೆಳಗ್ಗೆ ಅಫ್ಘಾನಿಸ್ತಾನ ತಂಡವು ಟರೌಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ರಾತ್ರಿ ನಡೆಯುವ ಪಂದ್ಯದಲ್ಲಿ ಭಾರತವು ಗಯಾನಾದಲ್ಲಿರುವ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆದರೆ ಮಳೆಯ ಆತಂಕ ಹಿನ್ನೆಲೆಯಲ್ಲಿ ಪಂದ್ಯಗಳ ಗತಿ ಏನಾಗಲಿದೆ ಎಂಬ ಆತಂಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡಿದೆ.

ಇದನ್ನೂ ಓದಿ:ನತದೃಷ್ಟ ಹೆಣ್ಣಿನ ಗರ್ಭದಲ್ಲಿರೋ ಮಗುವಿಗೆ ಈ ಭಾಗ್ಯನೂ ಇಲ್ವಲ್ಲ -ದರ್ಶನ್ ಕಣ್ಣೀರು ಇಟ್ಟಿದ್ಕೆ ಸಂಬರಗಿ ಹೇಳಿದ್ದೇನು..?

publive-image

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಯಾವುದೇ ಮೀಸಲು ದಿನ ಇಟ್ಟಿಲ್ಲ. ಯಾಕೆಂದರೆ ಫೈನಲ್ ಪಂದ್ಯವು ಮರುದಿನ ಅಂದರೆ ಜೂನ್ 29ರ ಸಂಜೆ ನಡೆಯಲಿದೆ. ಎರಡೂ ಸೆಮಿಫೈನಲ್‌ಗಳಿಗೆ 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಇರಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಸುಮಾರು 4 ಗಂಟೆ ಕಾಲ ಕಾಯಬೇಕಾಗುತ್ತದೆ. ಮೊದಲ ಸೆಮಿಫೈನಲ್​ಗೆ ಇನ್ನೂ 60 ನಿಮಿಷಗಳ ಕಾಲ ವಿಸ್ತರಿಸುವ ನಿಯಮವನ್ನೂ ನೀಡಿದೆ.

Advertisment

ಭಾರತದ ಪಂದ್ಯಕ್ಕೆ ಇಲ್ಲ ಮೀಸಲು ದಿನ
ಒಂದು ವೇಳೆ ಮೊದಲ ಸೆಮಿ ಫೈನಲ್​ಗೆ ಮಳೆ ಅಡ್ಡಿಪಡಿಸಿದರೆ ಮೀಸಲು ದಿನದಂದು ನಡೆಯಲಿದೆ. ಅಂದು ಕೂಡ ಹೆಚ್ಚುವರಿಯಾಗಿ 190 ನಿಮಿಷಗಳನ್ನು ನೀಡಲಾಗಿದೆ. ಎರಡನೇ ಸೆಮಿಫೈನಲ್‌ನಲ್ಲಿ 250 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾದರೆ ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲಾಗುತ್ತದೆ. ಅದೂ ಸಾಧ್ಯವಾಗದಿದ್ದಾಗ ಪಂದ್ಯ ರದ್ದು ಮಾಡಲಾಗುತ್ತದೆ. ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿದ್ದರೆ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

publive-image

ಭಾರತ vs ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ ಎರಡೂ ಪಂದ್ಯಗಳಿಗೆ ಆತಂಕ ಶುರುವಾಗಿದೆ. ಐಸಿಸಿ ಪಂದ್ಯಗಳನ್ನು ಆಡಿಸಲು ಆದಷ್ಟು ಪ್ರಯತ್ನ ಮಾಡುತ್ತದೆ. ಒಂದು ವೇಳೆ ಅದು ಸಾಧ್ಯವಾಗದಿದ್ದಾಗ ಗುಂಪಿನಲ್ಲಿರುವ ಅಗ್ರ ತಂಡವು ಫೈನಲ್ ಪ್ರವೇಶ ಮಾಡುತ್ತದೆ. ಹೀಗಿರುವಾಗ ಟೀಂ ಇಂಡಿಯಾ ಪಂದ್ಯ ಆಡದೇ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡನೇ ಗುಂಪಿನಿಂದ ದಕ್ಷಿಣ ಆಫ್ರಿಕಾ ತಂಡ ಫೈನಲ್‌ಗೆ ಹೋಗಲಿದೆ. ಒಂದು ವೇಳೆ ಫೈನಲ್​ನಲ್ಲೂ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

Advertisment

ಇದನ್ನೂ ಓದಿ:ಟಿ20 ವಿಶ್ವಕಪ್​​ ಸೆಮಿಫೈನಲ್​​ಗೆ ಹೊಸ ನಿಯಮ.. ಇದು ಟೀಂ ಇಂಡಿಯಾಗೆ ಹೆಚ್ಚು ಮಾರಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment