ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತ್ರಿಕೋನ ಸ್ಪರ್ಧೆ; ಮತ್ತೆ ನೆನಪಿಸುತ್ತಾ ಕಾನ್ಪುರ ಟೆಸ್ಟ್​..?

author-image
Ganesh
Updated On
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತ್ರಿಕೋನ ಸ್ಪರ್ಧೆ; ಮತ್ತೆ ನೆನಪಿಸುತ್ತಾ ಕಾನ್ಪುರ ಟೆಸ್ಟ್​..?
Advertisment
  • ಇಂಡೋ ಕಿವೀಸ್​ ಕಾದಾಟಕ್ಕೆ ಕೌಂಟ್​ಡೌನ್
  • ಟೀಮ್ ಇಂಡಿಯಾಗೆ ಶಾಕ್ ನೀಡುತ್ತಾ ಕಿವೀಸ್?
  • ರಾಹುಲ್, ಕೊಹ್ಲಿಯೇ ಸೆಂಟರ್ ಆಫ್ ಅಟ್ರಾಕ್ಷನ್

ಇಂಡೋ ಕಿವೀಸ್​ ಕಾದಾಟಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡೋಕೆ ಉಭಯ ತಂಡಗಳು ರೆಡಿಯಾಗಿವೆ. ಅಂಡರ್‌ ಡಾಗ್‌ ಆಗಿ ಕಣಕ್ಕಿಳಿಯುತ್ತಿರುವ ಕಿವೀಸ್‌, ಈಗ ಟಾಮ್​ ಲಾಥಮ್​ ನಾಯಕತ್ವದಲ್ಲಿ ವಿನ್ನಿಂಗ್​​ ಫಾರ್ಮುಲಾ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದೆ. ಈ ಟೆಸ್ಟ್​ಗೆ ಮಳೆರಾಯನ ಅವಕೃಪೆ ಎದುರಾಗಿದ್ದು, ಈ ತ್ರಿಕೋನ ಫೈಟ್ ಭಾರೀ ಕುತೂಹಲವನ್ನೇ ಹುಟ್ಟಿಹಾಕಿದೆ.

25ನೇ ಟೆಸ್ಟ್​ ಪಂದ್ಯದ ಆತಿಥ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿ ರಜತೋತ್ಸವ ಕಂಡ ಅಪರೂಪದ ಸ್ಟೇಡಿಯಂಗಳ ಪಟ್ಟಿಗೆ ಸೇರ್ಪಡೆ ಆಗ್ತಿರುವ ಐಕಾನಿಕ್ ಸ್ಟೇಡಿಯಂ, ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗ್ತಿದೆ. ಅದೆಷ್ಟೋ ರೋಮಾಂಚನಕಾರಿ ಪಂದ್ಯಗಳಿಗೆ ಸಾಕ್ಷಿಯಾಗಿರುವ ಚಿನ್ನಸ್ವಾಮಿ ಸ್ಟೇಡಿಯಂ, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಹೊಸ್ತಿಲಲ್ಲಿದೆ. ಇಂಥಹ ಐತಿಹಾಸಿಕ ಸ್ಟೇಡಿಯಂನಲ್ಲಿ ಇಂಡೋ ಕಿವೀಸ್ ಟೆಸ್ಟ್​ ಬ್ಯಾಟಲ್​​ಗೆ ವೇದಿಕೆಯಾಗ್ತಿದೆ.

ಇದನ್ನೂ ಓದಿ:ಭಾರತ, ನ್ಯೂಜಿಲೆಂಡ್​ ಮಧ್ಯೆ ಮಹತ್ವದ ಟೆಸ್ಟ್​ ಸರಣಿ; ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್ ಔಟ್​​​

ಬಾಂಗ್ಲಾ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಟೀಮ್ ಇಂಡಿಯಾ, ಇಂದಿನಿಂದ ನ್ಯೂಜಿಲೆಂಡ್ ಎದುರಿನ ಟೆಸ್ಟ್​ ಸರಣಿಯಲ್ಲಿ ಗೆಲ್ಲೋ ಫೇವರಿಟ್ ಆಗಿ ಅಖಾಡಕ್ಕಿಳಿಯುತ್ತಿದೆ. ನ್ಯೂ ಕ್ಯಾಪ್ಟನ್‌ ಟಾಮ್ ಲಾಥಮ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ನ್ಯೂಜಿಲೆಂಡ್, ಆತಿಥೇಯರಿಗೆ ಶಾಕ್‌ ಲೆಕ್ಕಾಚಾರದಲ್ಲಿದೆ. ಹೀಗಾಗಿ ಇಂದಿನಿಂದ ನಡೆಯೋ ಟೆಸ್ಟ್​, ಯಾರ ಪಾಲಾಗುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.

ಅದೇ ಟೀಮ್​ ಫಿಕ್ಸ್​..
ಬಾಂಗ್ಲಾ ಎದುರಿನ ಟೆಸ್ಟ್​ನಲ್ಲಿ ಕಣಕ್ಕಿಳಿದಿದ್ದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಕಳೆದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರೋಹಿತ್, ಈಗ ಫಾರ್ಮ್​ಗೆ ಮರಳಬೇಕಿದೆ. ದತ್ತು ಪುತ್ರ ವಿರಾಟ್​​​​​​​​ ಹಾಗೂ ಮನೆ ಮಗ ಕೆ.ಎಲ್.ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಇವರಿಬ್ಬರ ಬ್ಯಾಟಿಂಗ್ ಝಲಕ್ ನೋಡಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್​​ಗೆ ಟೀಮ್​ ಇಂಡಿಯಾದ ಈ ಜೋಡಿಯನ್ನ ಕಂಡ್ರೆ ಭಯ ಎಂದ ರಚಿನ್​​.. ಈ ಬಗ್ಗೆ ಏನಂದ್ರು?

ಮಳೆ ಎಫೆಕ್ಟ್​..
ಬೌಲಿಂಗ್ ಡಿಪಾರ್ಟ್​ಮೆಂಟ್​ನಲ್ಲೂ ಬದಲಾವಣೆ ಕಷ್ಟ ಸಾಧ್ಯ. ಪಿಚ್​ ಮೇಲಿನ ಹುಲ್ಲು, ಮೋಡಕವಿದ ವಾತಾವರಣ ವೇಗಿಗಳಿಗೆ ನೆರವಾಗಲಿದೆ. ಹೀಗಾಗಿ 3 ಪೇಸರ್ಸ್ ಆ್ಯಂಡ್ 2 ಸ್ಪಿನ್ನರ್ಸ್​ ಫಾರ್ಮಲಾದಲ್ಲೇ ಕಣಕ್ಕಿಳಿಯಲಿದ್ದು, ಜಸ್​ಪ್ರೀತ್​ ಬೂಮ್ರಾ, ಮೊಹಮದ್​ ಸಿರಾಜ್, ಆಕಾಶ್ ​ದೀಪ್ ಪೇಸರ್​ಗಳಾಗಿ ಚೆಂಡು ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜಡೇಜಾ, ಅಶ್ವಿನ್ ಸ್ಪಿನ್ ಟ್ವಿನ್ಸ್ ಆಗಿ ಕಣಕ್ಕಿಳಿಯೋದು ಫಿಕ್ಸ್.! ಲಂಕಾ ಪ್ರವಾಸದಲ್ಲಿ ಸ್ಪಿನ್ ಎದುರು ಕಿವೀಸ್​ ಪರದಾಡಿದೆ. ಹೀಗಾಗಿ 3ನೇ ಸ್ಪಿನ್ನರ್ ಆಗಿ ಅಕ್ಷರ್ ಅಥವಾ ಕುಲ್​ದೀಪ್ ಯಾದವ್ ಕಣಕ್ಕಿಳಿದರೂ ಅಚ್ಚರಿ ಇಲ್ಲ.

ಎಲ್ಲವೂ ಕಂಡೀಷನ್ಸ್​ ಮೇಲೆ ಡಿಪೆಂಡ್ ಆಗಿರುತ್ತೆ. ಪಿಚ್ ಕಂಡೀಷನ್ಸ್​ಗೆ ಅನುಗುಣವಾಗಿ ಬೆಸ್ಟ್ ಪ್ಲೇಯಿಂಗ್​-XI ಆಯ್ಕೆ ಮಾಡ್ತೇವೆ. 3 ಸೀಮರ್ಸ್, 3 ಸ್ಪಿನ್ನರ್ಸ್ ಆಯ್ಕೆ ಓಪನ್ ಇದೆ. ಕಂಡೀಷನ್ಸ್​ ನೋಡಿ ಅಂತಿಮ ನಿರ್ಧಾರ ತೆಗೆದುಕೊಳುತ್ತೇವೆ- ರೋಹಿತ್ ಶರ್ಮಾ, ಕ್ಯಾಪ್ಟನ್

ಲಂಕಾ ಪಾಠ..
ಕೆಲವು ದಿನಗಳ ಹಿಂದಷ್ಟೇ ಶ್ರೀಲಂಕಾ ವಿರುದ್ಧ ಕ್ಲೀನ್‌ ಸ್ವೀಪ್​​ ಮುಖಭಂಗ ಅನುಭವಿಸಿದ್ದ ನ್ಯೂಜಿಲೆಂಡ್, ಈಗ ಟಾಮ್ ಲಾಥಮ್ ನಾಯಕತ್ವದಲ್ಲಿ ಅಖಾಡಕ್ಕಿಳಿತ್ತಿದೆ. ಪ್ರತಿಭಾನ್ವಿತ ಆಟಗಾರರ ದಂಡನ್ನೇ ಹೊಂದಿರುವ ನ್ಯೂಜಿಲೆಂಡ್​​​​​​​​​​​​​​​​​​​​​​​​​​​​​​​​​​​​ ತಂಡದಲ್ಲಿ, ಇಂಡಿಯನ್ ಕಂಡೀಷನ್ಸ್​ಗೆ ಹೇಳಿ ಮಾಡಿಸಿರುವ ಸ್ಟಾರ್‌ ಸ್ಪಿನ್ನರ್‌ಗಳಿದ್ದಾರೆ. ಆಲ್​​ರೌಂಡರ್ ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್ ಜೊತೆಗೆ ಕಳೆದ ಪ್ರವಾಸದಲ್ಲಿ ಕಾಡಿದ್ದ ಅಜಾಜ್ ಪಟೇಲ್ ಬಲವಿದೆ. ಹೀಗಾಗಿ ಅಂಡರ್​​ ಡಾಗ್ಸ್​ ಕಿವೀಸ್​ ಪಡೆಯನ್ನ ಟೀಮ್ ಇಂಡಿಯಾ ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ.

ಇದನ್ನೂ ಓದಿ: ಭಾರತ, ನ್ಯೂಜಿಲೆಂಡ್​ ಮಧ್ಯೆ ಮಹತ್ವದ ಟೆಸ್ಟ್​ ಸರಣಿ; ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​

ಐತಿಹಾಸಿಕ ಪಂದ್ಯಕ್ಕೆ ಮಳೆಕಾಟ..
ಚಿನ್ನಸ್ವಾಮಿಯ 25ನೇ ಟೆಸ್ಟ್​ ಪಂದ್ಯಕ್ಕೂ ಮಳೆಯ ಕಾಟ ಎದುರಾಗಿದೆ. ನಿನ್ನೆ ಸುರಿದ ಬಾರೀ ಮಳೆ, 5 ದಿನಗಳೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ರೆ, ಚಿನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ಸಬ್​ ಏರ್​ ಸಿಸ್ಟಮ್​ ಇರೋದ್ರಿಂದ, ಮಳೆ ಕೆಲ ಕಾಲ ಬಿಡುವು ನೀಡಿದ್ರೂ ಪಂದ್ಯ ನಡೆಯಲಿದೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯಕ್ಕೂ ಮಳೆ ಕಾಡಿತ್ತು. ಕೊನೆಯ ಎರಡೇ ದಿನದಲ್ಲಿ ರೋಚಕ ಹೋರಾಟ ನಡೆಸಿದ ಟೀಮ್​ ಇಂಡಿಯಾ ಗೆದ್ದು ತೋರಿಸಿತ್ತು. ಈ ಕಾರಣಕ್ಕೆ ಕಾನ್ಪುರ ಟೆಸ್ಟ್​ ಪಂದ್ಯ ನೆನಪಾಗುತ್ತಾ ಅನ್ನೋ ಪ್ರಶ್ನೆಯೂ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment