ಬಾಂಗ್ಲಾ ವಿರುದ್ಧ ಟಿ20 ಸೀರೀಸ್ ಮುಗಿದ ಬೆನ್ನಲ್ಲೇ ಟೆಸ್ಟ್ ಸರಣಿ!
ನ್ಯೂಜಿಲೆಂಡ್ ವಿರುದ್ಧ ಮಹತ್ವದ ಟೆಸ್ಟ್ ಸರಣಿ ಆಡಲಿರೋ ಭಾರತ
ಭಾರತ ವಿರುದ್ಧ ಟೆಸ್ಟ್ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ
ಟೀಮ್ ಇಂಡಿಯಾ, ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಇದೇ ತಿಂಗಳು ಅಕ್ಟೋಬರ್ 16ನೇ ತಾರೀಕಿನಿಂದ ಶುರುವಾಗಲಿದೆ. ಈ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಈಗಲೇ ಭಾರತದ ವಿರುದ್ಧ ಟೆಸ್ಟ್ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ ಆಗಿದೆ.
ಸದ್ಯ ಬಾಂಗ್ಲಾದೇಶ, ಟೀಮ್ ಇಂಡಿಯಾ ಮಧ್ಯೆ ಟಿ20 ಸರಣಿ ನಡೆಯುತ್ತಿದೆ. ಇದಾದ ಬೆನ್ನಲ್ಲೇ ಮುಂದಿನ ವಾರ ಮೊದಲ ಟೆಸ್ಟ್ ಬೆಂಗಳೂರಲ್ಲಿ ನಡೆಯಲಿದೆ. ಇದಾದ ಬಳಿಕ 24ನೇ ತಾರೀಕಿನಿಂದ ಪುಣೆಯಲ್ಲಿ 2ನೇ ಪಂದ್ಯ ನಡೆಯಲಿದೆ. ಸರಣಿಯ ಕೊನೆ ಪಂದ್ಯವು ನವೆಂಬರ್ 1 ರಿಂದ ಮುಂಬೈನಲ್ಲಿ ಶುರುವಾಗಲಿದೆ.
ಸ್ಟಾರ್ ಆಟಗಾರರೇ ಆಡೋದು ಡೌಟ್!
ನ್ಯೂಜಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧದ ಟೆಸ್ಟ್ ಸರಣಿ ಆಡುವುದು ಬಹುತೇಕ ಅನುಮಾನ ಆಗಿದೆ. ಇವರು ತಂಡದಲ್ಲಿದ್ದು, ಮೊದಲ ಟೆಸ್ಟ್ ಆಡುವುದು ಡೌಟ್ ಆಗಿದೆ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ತೀವ್ರವಾಗಿ ಗಾಯಗೊಂಡಿದ್ದರು. ಈ ಕಾರಣಕ್ಕೆ ಇವರು ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುವುದು ಅನುಮಾನ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಭಾರತ ವಿರುದ್ಧ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ!
ಟಾಮ್ ಲ್ಯಾಥಮ್ (ಕ್ಯಾಪ್ಟನ್), ಟಾಮ್ ಬ್ಲಂಡೆಲ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡ್ಯಾರೆಲ್ ಮಿಚೆಲ್, ವಿಲ್ ಓ ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ಇಶ್ ಸೋಧಿ, ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಇದನ್ನೂ ಓದಿ: ಆರ್ಸಿಬಿಗೆ ವಿಧ್ವಂಸಕ ಬ್ಯಾಟರ್ ಎಂಟ್ರಿ; ಬೆಂಗಳೂರು ಟೀಮ್ಗೆ ಸಿಕ್ಕೇಬಿಟ್ರು ಹೊಸ ಕ್ಯಾಪ್ಟನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ