/newsfirstlive-kannada/media/post_attachments/wp-content/uploads/2024/06/SURYA-KUMAR-YADAV-3.jpg)
ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು ಕೊನೆಯ 30 ಎಸೆತಗಳಲ್ಲಿ 30 ರನ್ ಗಳಿಸಬೇಕಿತ್ತು. ಹಾಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೋಲನ್ನು ಬಹುತೇಕ ಒಪ್ಪಿಕೊಂಡಿದ್ದರು. ಹೆನ್ರಿಚ್ ಕ್ಲಾಸೆನ್ ಬ್ಯಾಟಿಂಗ್ ಅಬ್ಬರ ನೋಡಿದ ನಂತರ ಟೀಂ ಇಂಡಿಯಾಗೆ ಸೋಲು ಖಚಿತ ಎಂದು ಮಾತನಾಡಿಕೊಳ್ಳಲು ಶುರುಮಾಡಿದ್ದರು.
ಕೈತಪ್ಪಿ ಹೋಗುತ್ತಿದ್ದ ಮ್ಯಾಚ್ಗೆ ಥ್ರಿಲ್ ಸಿಕ್ಕಿದ್ದು 16ನೇ ಓವರ್. 16ನೇ ಓವರ್ ಬೌಲ್ ಮಾಡಲು ಬಂದ ಬೂಮ್ರಾ ಅಭಿಮಾನಿಗಳ ಕೊನೆಯ ಭರವಸೆಯಾಗಿ ಕಂಡರು. ಈ ಓವರ್‌ನಲ್ಲಿ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ 4 ರನ್ ಗಳಿಸಿದ್ದರು. ಆಗಲೇ ಪಂದ್ಯದ ಆಸೆಯನ್ನು ಅಭಿಮಾನಿಗಳು ಬಿಟ್ಟಿದ್ದರು.
ಇದನ್ನೂ ಓದಿ:ಟಿ20 ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು ಸೂರ್ಯ ಹಿಡಿದ ಈ ಕ್ಯಾಚ್.. ವಿಡಿಯೋ
16ನೇ ಓವರ್:
ದಕ್ಷಿಣ ಆಫ್ರಿಕಾದ ಗೆಲುವು ಬಹುತೇಕ ಖಚಿತವಾಗಿತ್ತು. ಆದರೂ ಭಾರತೀಯ ಅಭಿಮಾನಿಗಳ ಕಣ್ಣು ಜಸ್ಪ್ರೀತ್ ಬುಮ್ರಾ ಮೇಲೆ ನೆಟ್ಟಿತ್ತು. ಇಲ್ಲಿ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಎದುರಾಳಿ ತಂಡಕ್ಕೆ ಕೇವಲ 4 ರನ್ ಮಾತ್ರ ಸಿಕ್ಕಿದ್ದರಿಂದ ಪಂದ್ಯ ಮತ್ತಷ್ಟು ಕುತೂಹಲಕ್ಕೆ ಕಾರಣವಾಯ್ತು.
17ನೇ ಓವರ್:
ಭಾರತದ ಪರ 17ನೇ ಓವರ್ ಬೌಲ್ ಮಾಡಲು ಪಾಂಡ್ಯ ಬಂದರು. ಈ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಮಾಡಿದರು. ಹೀಗಿದ್ದೂ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿತು. ಭಾರತದ ಗೆಲುವಿನ ಕನಸಿಗೆ ಮಿಲ್ಲರ್ ಅಡ್ಡಿಯಾಗಿ ಉಳಿದರು. ಈ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 4 ರನ್ ಬಿಟ್ಟುಕೊಟ್ಟಿದ್ದರು.
ಇದನ್ನೂ ಓದಿ:30 ರನ್.. ದಕ್ಷಿಣ ಆಫ್ರಿಕಾ ಕೈಯಲ್ಲಿತ್ತು 6 ವಿಕೆಟ್.. ಕೊನೆಯ 5 ಓವರ್ಗಳ ರೋಚಕ ಆಟ..!
18ನೇ ಓವರ್:
ಜಸ್ಪ್ರೀತ್ ಬುಮ್ರಾ 18ನೇ ಓವರ್ ಮಾಡಲು ಬಂದರು. ಆಗ ಭಾರತೀಯ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಾಯ್ತು. ಜಸ್ಪ್ರೀತ್ ಬುಮ್ರಾ ಕೂಡ ನಿರಾಶೆಗೊಳಿಸಲಿಲ್ಲ. ಈ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ವಿಕೆಟ್ ಪಡೆದರು. ಭಾರತವೇ ಗೆಲ್ಲೋದು ಅನ್ಕೊಂಡ ಅಭಿಮಾನಿಗಳಿಗೆ ಡೇವಿಡ್ ಮಿಲ್ಲರ್ ದುಸ್ವಪ್ನವಾಗಿ ಕಂಡರು.
19ನೇ ಓವರ್:
ಅರ್ಷದೀಪ್ ಸಿಂಗ್ 19ನೇ ಓವರ್ ಮಾಡಲು ಬಂದರು. ಈಗ ದಕ್ಷಿಣ ಆಫ್ರಿಕಾಕ್ಕೆ 12 ಎಸೆತಗಳಲ್ಲಿ 20 ರನ್ ಬೇಕಿತ್ತು. ಅಭಿಮಾನಿಗಳ ಕಣ್ಣುಗಳು ಡೇವಿಡ್ ಮಿಲ್ಲರ್ ಮೇಲಿತ್ತು. ಆದರೆ ಈ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಮತ್ತು ಕೇಶವ್ ಮಹಾರಾಜ್ 4 ರನ್ ಗಳಿಸಲಷ್ಟೇ ಶಕ್ತರಾದರು. ಆಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿತು.
ಇದನ್ನೂ ಓದಿ:ವಿಶ್ವಕಪ್ ಗೆಲ್ಲಿಸಿಕೊಟ್ಟು ವಿದಾಯ.. 31 ತಿಂಗಳು, ಅಮೂಲಾಗ್ರ ಬದಲಾವಣೆ.. ಕನ್ನಡದ ಕಣ್ಮಣಿಗೆ ಬಿಗ್ ಸೆಲ್ಯೂಟ್..!
20ನೇ ಓವರ್:
ಕೊನೆಯ ಓವರ್ ಮಾಡಲು ಹಾರ್ದಿಕ್ ಪಾಂಡ್ಯ ಕೈಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ನೀಡಿದರು. ಮೊದಲ ಎಸೆತದಲ್ಲೇ ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಅಲ್ಲಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಉಸಿರು ನಿಂತಿತು. ಆದರೆ ಬೌಂಡರಿ ಲೈನ್ನಲ್ಲಿದ್ದ ಸೂರ್ಯಕುಮಾರ್ ಯಾದವ್ ಸೋಲನ್ನು ಒಪ್ಪಿಕೊಳ್ಳಲು ಬಿಡಲಿಲ್ಲ. ಅದ್ಭುತ ಕ್ಯಾಚ್ ಪಡೆದುಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಕೊನೆಯ 5 ಎಸೆತಗಳಲ್ಲಿ 8 ರನ್ ಗಳಿಸಿದರೂ ಗೆಲುವು ಸಿಗಲಿಲ್ಲ.
ಇದನ್ನೂ ಓದಿ:‘ಇದು ನನ್ನ ಕೊನೆಯ ಪಂದ್ಯ..’ ಕೊಹ್ಲಿ, ಬೂಮ್ರಾ, ಪಾಂಡ್ಯ ಬಗ್ಗೆಯೂ ಮಾತನಾಡಿದ ರೋಹಿತ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ