ಟೀಂ ಇಂಡಿಯಾದಲ್ಲಿ ಬದಲಾವಣೆ! ಪಂತ್​ಗೆ ಅವಕಾಶ? ಇದು 2ನೇ ಪಂದ್ಯದಲ್ಲಿ ಆಡುವ XI..!

author-image
Ganesh
Updated On
ಟೀಂ ಇಂಡಿಯಾ ಆರಂಭಿಕ ಆಟಗಾರನಿಗೆ ವಿಶ್ರಾಂತಿ.. ದುಬೆಗೂ ಇಲ್ಲ ಚಾನ್ಸ್.. ಇಂದು ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..
Advertisment
  • ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ODI ಸರಣಿ
  • ಮೊದಲ ಪಂದ್ಯ ಟೈ, ಟೀಂ ಇಂಡಿಯಾಗೆ ಭಾರೀ ಮುಖಭಂಗ
  • ಪ್ಲೇಯಿಂಗ್ -11ರಲ್ಲಿ ಬದಲಾವಣೆ ಮಾಡಿದರೂ ಅಚ್ಚರಿ ಇಲ್ಲ

ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಪಂದ್ಯಗಳ ODI ಸರಣಿ ನಡೆಯುತ್ತಿದೆ. ಮೊದಲ ಪಂದ್ಯ ಟೈ ಆಗಿತ್ತು. ಗೆಲ್ಲುವ ಪಂದ್ಯವನ್ನು ಟೈ ಆಗಿದ್ದರಿಂದ ಟೀಂ ಇಂಡಿಯಾ ತೀವ್ರ ಮುಖಭಂಗ ಎದುರಿಸಿದೆ. ಹೀಗಿರುವಾಗ ಇಂದು ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ ತರುವ ಸಾಧ್ಯತೆ ಹೆಚ್ಚಿದೆ.

ಪಂತ್​ಗೆ ಅವಕಾಶ..?
ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯವು ಇಂದು ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಮೊದಲ ಪಂದ್ಯದಲ್ಲಿ ಆಗಿರುವ ತಪ್ಪುಗಳಿಂದ ಪಾಠ ಕಲಿಯಲು ಬಯಸುತ್ತಾರೆ. ಯಾವುದೇ ಬೆಲೆ ತೆತ್ತಾದರೂ ಸರಿ ಎರಡನೇ ODI ಗೆಲ್ಲಲು ನಿರ್ಧರಿಸಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಪಂತ್​ಗೆ ಅವಕಾಶ ಸಿಗುತ್ತದೋ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

ಇದನ್ನೂ ಓದಿ:ರೋಹಿತ್​ಗೆ ಬೇಕಿತ್ತು ಪಂತ್.. ರಾಹುಲ್​ಗೆ ಚಾನ್ಸ್​ ಸಿಕ್ಕಿರುವ ಹಿಂದಿದೆ ಓರ್ವ ಸೂತ್ರಧಾರನ ಕೈವಾಡ..!

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಎರಡನೇ ಏಕದಿನ ಪಂದ್ಯದಲ್ಲೂ ಇನ್ನಿಂಗ್ಸ್ ಆರಂಭಿಸಬಹುದು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಮತ್ತು ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದನ್ನು ಕಾಣಬಹುದು. ಬಳಿಕ ವಿಕೆಟ್ ಕೀಪರ್ ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇದರರ್ಥ ರಿಷಬ್ ಪಂತ್ ಮತ್ತೊಮ್ಮೆ ಬೆಂಚ್ ಮೇಲೆ ಕುಳಿತುಕೊಳ್ಳಬೇಕು. ಶಿವಂ ದುಬೆ ಆರನೇ ಕ್ರಮಾಂಕದಲ್ಲಿ ಮತ್ತು ಅಕ್ಷರ್ ಪಟೇಲ್ ಏಳನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್ ನಂತರ ಕಾಣಿಸಬಹುದು. ಕುಲದೀಪ್ ಯಾದವ್ ಮುಖ್ಯ ಸ್ಪಿನ್ನರ್ ಮತ್ತು ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ವೇಗದ ಬೌಲರ್‌ಗಳಾಗಿದ್ದಾರೆ. ಇದರರ್ಥ ನಾಯಕ ರೋಹಿತ್ ಶರ್ಮಾ ಯಾವುದೇ ಬದಲಾವಣೆಗಳಿಲ್ಲದೆ ಎರಡನೇ ಏಕದಿನ ಪಂದ್ಯವನ್ನು ಪ್ರವೇಶಿಸಬಹುದು.

ಇದನ್ನೂ ಓದಿ:ಒಂದೇ ವರ್ಷಕ್ಕೆ ಬೇಡವಾದ ಪಾಂಡ್ಯ.. ಮುಂಬೈ ಇಂಡಿಯನ್ಸ್​ನಿಂದ ಶಾಕಿಂಗ್ ನಿರ್ಧಾರ..!

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷ್‌ದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment