newsfirstkannada.com

ವಿಶ್ವ ಚಾಂಪಿಯನ್ನರಿಗೆ ದೊಡ್ಡ ಮುಖಭಂಗ.. ಜಿಂಬಾಬ್ವೆ ವಿರುದ್ಧ ಸೋಲಿಗೆ ಕಾರಣ ಇಲ್ಲಿದೆ..

Share :

Published July 7, 2024 at 9:52am

    ಮೊದಲ ಟಿ20ಯಲ್ಲಿ ಜಿಂಬಾಬ್ವೆ ಎದುರು ಸೋಲು

    13 ರನ್​ಗಳಿಂದ ಸೋಲಿಗೆ ಶರಣಾದ ಗಿಲ್​ ಪಡೆ

    ಇವತ್ತು ಎರಡನೇ ಟಿ20 ಪಂದ್ಯ ನಡೆಯಲಿದೆ

ಒಂದು ವಾರದ ಹಿಂದೆ ಟಿ20 ವಿಶ್ವಕಪ್​ ಚಾಂಪಿಯನ್​ ಪಟ್ಟಕ್ಕೇರಿದ್ದ ಟೀಂ ಇಂಡಿಯಾಗೆ ದೊಡ್ಡ ಮುಖಭಂಗವಾಗಿದೆ. ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸೋಲುಂಡಿದೆ. 116 ರನ್​​ ಗುರಿ. ತಂಡದಲ್ಲಿ ಟಿ20 ಸ್ಪೆಷಲಿಸ್ಟ್​​ಗಳ ದಂಡಿದ್ರೂ ಯಾವುದೇ ಪ್ರಯೋಜನಕ್ಕೆ ಬರ್ಲಿಲ್ಲ. ಅತಿಥೇಯ ಬಳಗದ ಮಾರಕ ಬೌಲಿಂಗ್​​​​ಗೆ ಶುಭ್​​ಮನ್ ಗಿಲ್​ ಪಡೆ ಪತರಗುಟ್ಟಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್​ ಮೈದಾನದಲ್ಲಿ ಟಾಸ್​ ಸೋತು ಇನ್ನಿಂಗ್ಸ್​​​​ ಆರಂಭಿಸಿದ ಜಿಂಬಾಬ್ವೆ ತಂಡಕ್ಕೆ ಇಂಡಿಯನ್ ಬೌಲರ್ಸ್​ ಬಿಟ್ಟು ಬಿಡದೇ ಕಾಡಿದ್ರು. ಬಲಿಷ್ಠ ಫಾಸ್ಟ್ ಹಾಗೂ ಮಿಸ್ಟ್ರಿ ಸ್ಪಿನ್​ ಪಡೆಯನ್ನ ಎದುರಿಸಲಾಗದ ಜಿಂಬಾಬ್ವೆ ತಂಡ 20 ಓವರ್​ಗಳಲ್ಲಿ ಕೇವಲ 115 ರನ್ ಕಲೆಹಾಕ್ತು. ಕಿರು ಬೆರಳಿನಲ್ಲಿ ಬ್ಯಾಟ್ಸ್​​​ಮನ್​ಗಳನ್ನ ಗಿರಿಗಿಟ್ಲೆ ಆಡಿಸಿದ ರವಿ ಬಿಷ್ನೋಯಿ 4 ವಿಕಟ್ ಪಡೆದು ಶೈನ್ ಆದ್ರು. ಅಲ್ಪ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಬ್ಯಾಟ್ಸ್​​​​ಮನ್​ಗಳು ಹರಾರೆ ಸ್ಪೋರ್ಟ್ಸ್ ನಲ್ಲಿ ಪೆವಿಲಿಯನ್​​​ ಪರೇಡ್​ ನಡೆಸ್ತಿದ್ರು.

ಇದನ್ನೂ ಓದಿ:ಸಹೋದರನ ಬಗ್ಗೆ ಕೃನಾಲ್ ಶೇರ್ ಮಾಡಿದ್ದ ಪೋಸ್ಟ್​ಗೆ ಪಾಂಡ್ಯ ಪತ್ನಿ ನಟಾಶಾ ರಿಯಾಕ್ಟ್..!

ಇದು ಚಾಂಪಿಯನ್​​​ ಭಾರತೀಯ ಬ್ಯಾಟ್ಸ್​​ಮನ್​ಗಳ ಫ್ಲಾಪ್​ ಶೋ. ಭಾರತದ ಮುಂದೆ ಇದ್ದಿದ್ದೂ ಬರೀ 116 ರನ್​ ಟಾರ್ಗೆಟ್​​​​​. ಸಿಕ್ಕ ಅವಕಾಶ ಎರಡು ಕೈಯಿಂದ ಬಾಚಿಕೊಳ್ಳಬೇಕಿದ್ದ ಫ್ಯೂಚರ್​ ಸ್ಟಾರ್ಸ್​ ಭಾರಿ ನಿರಾಸೆ ಮೂಡಿಸಿದ್ರು.

ಡೆಬ್ಯು ಪಂದ್ಯದಲ್ಲಿ ಡಿಸ್ಟ್ರಕ್ಟಿವ್​​​ ಬ್ಯಾಟರ್​​ ಅಭಿಷೇಕ್​​ ಡಕೌಟ್
ಐಪಿಎಲ್​​ನಲ್ಲಿ ವಿಧ್ವಂಸಕಾರಿ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಅಭಿಷೇಕ್​​ ಶರ್ಮಾ ಡೆಬ್ಯು ಪಂದ್ಯದಲ್ಲಿ ಡಕೌಟಾಗಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನ ಹುಸಿಗೊಳಿಸಿದ್ರು. ಋತುರಾಜ್​ ಗಾಯಕ್ವಾಡ್​ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡ್ರು. ತಂದೆಯಿಂದ ಡೆಬ್ಯು ಕ್ಯಾಪ್ ಪಡೆದ ರಿಯಾನ್ ಪರಾಗ್​ ಕೂಡ ಸದ್ದು ಮಾಡ್ಲಿಲ್ಲ. 2 ರನ್ ಗಳಿಸಿದ್ದಾಗ ಮಿಡ್​ ಆಫ್​​ನಲ್ಲಿ ಕ್ಯಾಚ್ ನೀಡಿದ್ರು. ಫಿನಿಶರ್ ರಿಂಕು ಸಿಂಗ್​​ ಖಾತೆ ತೆರೆಯದೇ ವಾಪಸ್ ಆದರು.

ಸುಂದರ್ ಏಕಾಂಗಿ ಹೋರಾಟ ವ್ಯರ್ಥ..!
22 ರನ್​ಗೆ 4 ವಿಕೆಟ್ ಕಳೆದುಕೊಂಡ ಭಾರತ ಬಳಿಕವೂ ಬೌನ್ಸ್ ಬ್ಯಾಕ್ ಮಾಡಲಿಲ್ಲ. ಆತುರಕ್ಕೆ ಬಿದ್ದ ಧ್ರುವ್​​​ ಜುರೆಲ್​ಗೆ ಜೆಂಗ್ವೆ ಶಾಕ್ ಕೊಟ್ರೆ, ಉತ್ತಮವಾಗಿ ಆಡ್ತಿದ್ದ ಕ್ಯಾಪ್ಟನ್ ಗಿಲ್​ 31 ರನ್​ಗೆ ಸುಸ್ತಾದ್ರು. ಕೊನೆಯಲ್ಲಿ ಬೌಲಂಗೋಂಚಿಗಳ ಸಾಥ್​ ಪಡೆದ ಆಲ್​ರೌಂಡರ್ ವಾಷಿಂಗ್ಟನ್​​​ ಸುಂದರ್​ ಗೆಲುವಿಗಾಗಿ ಕೊನೆತನಕ ಹೋರಾಟ ನಡೆಸಿದ್ರು. ಅಂತಿಮ ಓವರ್​ನಲ್ಲಿ 16 ರನ್ ಬೇಕಿದ್ದಾಗ ಸುಂದರ್​​​​​​​​​​​​ ಆರ್ಭಟಿಸಲಿಲ್ಲ. ಕೇವಲ 2 ರನ್ ಗಳಿಸಿದ ಪರಿಣಾಮ ಭಾರತ ತಂಡ 13 ರನ್​ಗಳಿಂದ ಜಿಂಬಾಬ್ವೆಗೆ ತಲೆಬಾಗ್ತು.

ಇದನ್ನೂ ಓದಿ:ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?

ಇಂದು ಪುಟಿದೇಳುತ್ತಾ ಶುಭ್​ಮನ್ ಗಿಲ್​ ಅಂಡ್ ಗ್ಯಾಂಗ್
ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಭಾರತ ತಂಡ ಇಂದು ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನ ಎದುರಿಸಲಿದೆ. ಹಿಂದಿನ ಪಂದ್ಯದಲ್ಲಾದ ಬ್ಯಾಟಿಂಗ್ ವೈಫಲ್ಯ ಸರಿಪಡಿಸಿಕೊಳ್ಳಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವ ಚಾಂಪಿಯನ್ನರಿಗೆ ದೊಡ್ಡ ಮುಖಭಂಗ.. ಜಿಂಬಾಬ್ವೆ ವಿರುದ್ಧ ಸೋಲಿಗೆ ಕಾರಣ ಇಲ್ಲಿದೆ..

https://newsfirstlive.com/wp-content/uploads/2024/07/IND-vs-ZIM-2.jpg

Load More