ಮೊದಲ ಟಿ20ಯಲ್ಲಿ ಜಿಂಬಾಬ್ವೆ ಎದುರು ಸೋಲು
13 ರನ್ಗಳಿಂದ ಸೋಲಿಗೆ ಶರಣಾದ ಗಿಲ್ ಪಡೆ
ಇವತ್ತು ಎರಡನೇ ಟಿ20 ಪಂದ್ಯ ನಡೆಯಲಿದೆ
ಒಂದು ವಾರದ ಹಿಂದೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿದ್ದ ಟೀಂ ಇಂಡಿಯಾಗೆ ದೊಡ್ಡ ಮುಖಭಂಗವಾಗಿದೆ. ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸೋಲುಂಡಿದೆ. 116 ರನ್ ಗುರಿ. ತಂಡದಲ್ಲಿ ಟಿ20 ಸ್ಪೆಷಲಿಸ್ಟ್ಗಳ ದಂಡಿದ್ರೂ ಯಾವುದೇ ಪ್ರಯೋಜನಕ್ಕೆ ಬರ್ಲಿಲ್ಲ. ಅತಿಥೇಯ ಬಳಗದ ಮಾರಕ ಬೌಲಿಂಗ್ಗೆ ಶುಭ್ಮನ್ ಗಿಲ್ ಪಡೆ ಪತರಗುಟ್ಟಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಜಿಂಬಾಬ್ವೆ ತಂಡಕ್ಕೆ ಇಂಡಿಯನ್ ಬೌಲರ್ಸ್ ಬಿಟ್ಟು ಬಿಡದೇ ಕಾಡಿದ್ರು. ಬಲಿಷ್ಠ ಫಾಸ್ಟ್ ಹಾಗೂ ಮಿಸ್ಟ್ರಿ ಸ್ಪಿನ್ ಪಡೆಯನ್ನ ಎದುರಿಸಲಾಗದ ಜಿಂಬಾಬ್ವೆ ತಂಡ 20 ಓವರ್ಗಳಲ್ಲಿ ಕೇವಲ 115 ರನ್ ಕಲೆಹಾಕ್ತು. ಕಿರು ಬೆರಳಿನಲ್ಲಿ ಬ್ಯಾಟ್ಸ್ಮನ್ಗಳನ್ನ ಗಿರಿಗಿಟ್ಲೆ ಆಡಿಸಿದ ರವಿ ಬಿಷ್ನೋಯಿ 4 ವಿಕಟ್ ಪಡೆದು ಶೈನ್ ಆದ್ರು. ಅಲ್ಪ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಹರಾರೆ ಸ್ಪೋರ್ಟ್ಸ್ ನಲ್ಲಿ ಪೆವಿಲಿಯನ್ ಪರೇಡ್ ನಡೆಸ್ತಿದ್ರು.
ಇದನ್ನೂ ಓದಿ:ಸಹೋದರನ ಬಗ್ಗೆ ಕೃನಾಲ್ ಶೇರ್ ಮಾಡಿದ್ದ ಪೋಸ್ಟ್ಗೆ ಪಾಂಡ್ಯ ಪತ್ನಿ ನಟಾಶಾ ರಿಯಾಕ್ಟ್..!
ಇದು ಚಾಂಪಿಯನ್ ಭಾರತೀಯ ಬ್ಯಾಟ್ಸ್ಮನ್ಗಳ ಫ್ಲಾಪ್ ಶೋ. ಭಾರತದ ಮುಂದೆ ಇದ್ದಿದ್ದೂ ಬರೀ 116 ರನ್ ಟಾರ್ಗೆಟ್. ಸಿಕ್ಕ ಅವಕಾಶ ಎರಡು ಕೈಯಿಂದ ಬಾಚಿಕೊಳ್ಳಬೇಕಿದ್ದ ಫ್ಯೂಚರ್ ಸ್ಟಾರ್ಸ್ ಭಾರಿ ನಿರಾಸೆ ಮೂಡಿಸಿದ್ರು.
ಡೆಬ್ಯು ಪಂದ್ಯದಲ್ಲಿ ಡಿಸ್ಟ್ರಕ್ಟಿವ್ ಬ್ಯಾಟರ್ ಅಭಿಷೇಕ್ ಡಕೌಟ್
ಐಪಿಎಲ್ನಲ್ಲಿ ವಿಧ್ವಂಸಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾದ ಅಭಿಷೇಕ್ ಶರ್ಮಾ ಡೆಬ್ಯು ಪಂದ್ಯದಲ್ಲಿ ಡಕೌಟಾಗಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನ ಹುಸಿಗೊಳಿಸಿದ್ರು. ಋತುರಾಜ್ ಗಾಯಕ್ವಾಡ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡ್ರು. ತಂದೆಯಿಂದ ಡೆಬ್ಯು ಕ್ಯಾಪ್ ಪಡೆದ ರಿಯಾನ್ ಪರಾಗ್ ಕೂಡ ಸದ್ದು ಮಾಡ್ಲಿಲ್ಲ. 2 ರನ್ ಗಳಿಸಿದ್ದಾಗ ಮಿಡ್ ಆಫ್ನಲ್ಲಿ ಕ್ಯಾಚ್ ನೀಡಿದ್ರು. ಫಿನಿಶರ್ ರಿಂಕು ಸಿಂಗ್ ಖಾತೆ ತೆರೆಯದೇ ವಾಪಸ್ ಆದರು.
ಸುಂದರ್ ಏಕಾಂಗಿ ಹೋರಾಟ ವ್ಯರ್ಥ..!
22 ರನ್ಗೆ 4 ವಿಕೆಟ್ ಕಳೆದುಕೊಂಡ ಭಾರತ ಬಳಿಕವೂ ಬೌನ್ಸ್ ಬ್ಯಾಕ್ ಮಾಡಲಿಲ್ಲ. ಆತುರಕ್ಕೆ ಬಿದ್ದ ಧ್ರುವ್ ಜುರೆಲ್ಗೆ ಜೆಂಗ್ವೆ ಶಾಕ್ ಕೊಟ್ರೆ, ಉತ್ತಮವಾಗಿ ಆಡ್ತಿದ್ದ ಕ್ಯಾಪ್ಟನ್ ಗಿಲ್ 31 ರನ್ಗೆ ಸುಸ್ತಾದ್ರು. ಕೊನೆಯಲ್ಲಿ ಬೌಲಂಗೋಂಚಿಗಳ ಸಾಥ್ ಪಡೆದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಗೆಲುವಿಗಾಗಿ ಕೊನೆತನಕ ಹೋರಾಟ ನಡೆಸಿದ್ರು. ಅಂತಿಮ ಓವರ್ನಲ್ಲಿ 16 ರನ್ ಬೇಕಿದ್ದಾಗ ಸುಂದರ್ ಆರ್ಭಟಿಸಲಿಲ್ಲ. ಕೇವಲ 2 ರನ್ ಗಳಿಸಿದ ಪರಿಣಾಮ ಭಾರತ ತಂಡ 13 ರನ್ಗಳಿಂದ ಜಿಂಬಾಬ್ವೆಗೆ ತಲೆಬಾಗ್ತು.
ಇದನ್ನೂ ಓದಿ:ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?
ಇಂದು ಪುಟಿದೇಳುತ್ತಾ ಶುಭ್ಮನ್ ಗಿಲ್ ಅಂಡ್ ಗ್ಯಾಂಗ್
ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಭಾರತ ತಂಡ ಇಂದು ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನ ಎದುರಿಸಲಿದೆ. ಹಿಂದಿನ ಪಂದ್ಯದಲ್ಲಾದ ಬ್ಯಾಟಿಂಗ್ ವೈಫಲ್ಯ ಸರಿಪಡಿಸಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್