ಹೆಂಗಿದ್ದರು.. ಹೆಂಗಾದರು ನೋಡಿ.. ಶಮಿ ತಲೆ ಕೂದಲಿನ ರಹಸ್ಯ ಇಲ್ಲಿದೆ..!

author-image
Ganesh
Updated On
ಹೆಂಗಿದ್ದರು.. ಹೆಂಗಾದರು ನೋಡಿ.. ಶಮಿ ತಲೆ ಕೂದಲಿನ ರಹಸ್ಯ ಇಲ್ಲಿದೆ..!
Advertisment
  • ಶಮಿ ತಲೆ ಮೇಲೆ ದಿಢೀರ್ ಕೂದಲು ರಾಶಿರಾಶಿ
  • ಶಮಿಯ ನ್ಯೂ ಲುಕ್​ ನೋಡಿ ಅಭಿಮಾನಿಗಳು ಶಾಕ್
  • ಗಾಯದ ಸಮಸ್ಯೆಯಿಂದ ದೀರ್ಘಕಾಲದವರೆಗೆ ವಿಶ್ರಾಂತಿ

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದು, ಅವು ಭಾರೀ ವೈರಲ್ ಆಗಿವೆ. ಶಮಿ ಕ್ಷೌರ ಮಾಡಿಸುತ್ತಿರುವ ಸಂದರ್ಭದಲ್ಲಿನ ಫೋಟೋಗಳು ಅವಾಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಫೋಟೋಗಳು ನೋಡಲು ತುಂಬಾ ಅದ್ಭುತವಾಗಿವೆ. ವರ್ಷದ ಹಿಂದೆ ಶಮಿ ತಲೆ ಮೇಲೆ ಕೂದಲು ಹೆಚ್ಚು ಕಾಣುತ್ತಿರಲಿಲ್ಲ. ಅಂದರೆ ಕೂದಲುಗಳು ಉದುರಿ ಹೋಗಿದ್ದವು. 2023ರ ಏಕದಿನ ವಿಶ್ವಕಪ್‌ ವೇಳೆ ತಲೆ ಮೇಲೆ ಕೆಲವೇ ಕೆಲವು ಕೂದಲು ಮಾತ್ರ ಕಾಣುತ್ತಿದ್ದವು. ಆದರೆ ಇದೀಗ ಶಮಿಯ ಕೂದಲಲ್ಲಿ ಅಚಾನಕ್ಕಾಗಿ ವ್ಯತ್ಯಾಸ ಕಂಡು ಬಂದಿದೆ. ಅದರ ರಹಸ್ಯ ಏನು ಅಂತಾ ಅಭಿಮಾನಿಗಳು ಅಚ್ಚರಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ:IPLನಲ್ಲಿ ಈ ತಂಡದ ವಿರುದ್ಧ ಆಡುವಾಗ ಎಕ್ಸೈಟ್ ಆಗಿರ್ತೇನೆ-ಕೊಹ್ಲಿ ನೆಚ್ಚಿನ ತಂಡ ಯಾವ್ದು?

publive-image

ವರದಿಗಳ ಪ್ರಕಾರ.. ಸ್ವಲ್ಪ ಸಮಯದ ಹಿಂದೆ ಶಮಿ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ. ಪರಿಣಾಮ ಅವರ ತಲೆಯ ಮೇಲೆ ದಪ್ಪ ಕೂದಲು ಇದೆ. ಶಮಿ ಮತ್ತಷ್ಟು ಸ್ಟೈಲೀಶ್ ಆಗಿ ಕಾಣುತ್ತಿರುವ ಹಿಂದಿನ ರಹಸ್ಯ ಕೂದಲು ಕಸಿ ಮಾಡಿಸಿಕೊಂಡಿರೋದು. ನ್ನು ಗಾಯದ ಸಮಸ್ಯೆಯಿಂದ ಶಮಿ ಟೀಂ ಇಂಡಿಯಾದಿಂದ ದೀರ್ಘ ಕಾಲದಿಂದ ಹೊರಗುಳಿದಿದ್ದಾರೆ. 2023ರ ODI ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದರು. 2024 ಫೆಬ್ರವರಿಯಲ್ಲಿ ವೇಗಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದನ್ನೂ ಓದಿ:ಬಯೋಪಿಕ್​​ ಬಗ್ಗೆ ದ್ರಾವಿಡ್ ಅಚ್ಚರಿ ಹೇಳಿಕೆ.. ರಹಸ್ಯವಾಗಿ ಉಳಿದಿರುವ ಆ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment