ಬಾಡಿಗೆಗೆ ಸಿಗ್ತೇನೆ ಎಂದ ಭಾರತೀಯ ಯುವತಿ! ಆದ್ರೆ ಡೇಟಿಂಗ್​, ಮೀಟಿಂಗ್​​ಗೆ​ ಇಂತಿಷ್ಟು ಫಿಕ್ಸ್​! ನೋ ಕಾಂಪ್ರೊಮೈಸ್​

author-image
AS Harshith
Updated On
ಬಾಡಿಗೆಗೆ ಸಿಗ್ತೇನೆ ಎಂದ ಭಾರತೀಯ ಯುವತಿ! ಆದ್ರೆ ಡೇಟಿಂಗ್​, ಮೀಟಿಂಗ್​​ಗೆ​ ಇಂತಿಷ್ಟು ಫಿಕ್ಸ್​! ನೋ ಕಾಂಪ್ರೊಮೈಸ್​  
Advertisment
  • ಅಯ್ಯೋ.. ಕಾಲ ಬದಲಾಗಿದೆ, ಜನರು ಬದಲಾಗಿದ್ದಾರೆ!
  • ಭಾರತದಲ್ಲಿ ಹಬ್ಬುತ್ತಿದೆ ಡೇಟಿಂಗ್​ ಎಂಬ ವಿದೇಶಿ ಪರಿಕಲ್ಪನೆ
  • ಭಾರತದಲ್ಲಿ ಡೇಟಿಂಗ್​ ಮಾಡಲು ಬಾಡಿಗೆ ಸಿಗ್ತಾರೆ ಅಂದ್ರೆ ನಂಬ್ತೀರಾ!

ಕಾಲ ಬದಲಾಗಿದೆ. ಜನರು ಬದಲಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಗಾಗಿ ಜನರು ತಮ್ಮ ದಿನಚರಿಯನ್ನೇ ಬದಲಿಸುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ಕೈಗಳು ಅಡ್ಡದಾರಿ ಹಿಡಿಯುತ್ತಿವೆ. ಅದರಲ್ಲೂ ಡೇಟಿಂಗ್​ ಎಂಬ ವಿದೇಶಿ ಸಂಸ್ಕೃತಿ ವಿವಿಧ ರೂಪ ತಾಳುತ್ತಿದೆ. ಅದರ ಮುಂದುವರಿದ ಭಾಗವಾಗಿ ಬಾಡಿಗೆಗೂ ಮನುಷ್ಯರು ಸಿಗುತ್ತಿದ್ದಾರೆ. ಅಚ್ಚರಿಯೆಂದರೆ ಭಾರತದಲ್ಲೂ ಇಂತಹ ಅಚ್ಚರಿಯ ಘಟನೆಯೊಂದು ಮುನ್ನಲೆಗೆ ಬಂದಿದ್ದು, ಎಲ್ಲರು ಬೆರಗು ಕಣ್ಣಿನಿಂದ ನೋಡುವಂತಾಗಿದೆ.

ವಿದೇಶಿ ಸಂಸ್ಕೃತಿಯಾದ ಡೇಟಿಂಗ್​ ಎಂಬ ಪರಿಕಲ್ಪನೆ ಪ್ರಸ್ತುತ ಭಾರತದಲ್ಲೂ ಇದೆ. ಆದರೆ ಅದಕ್ಕೂ ಮುಂದುವರಿದ ಭಾಗವಾಗಿ ಜಪಾನ್​, ಚೀನಾ ದೇಶಗಳಲ್ಲಿ ಬಾಡಿಗೆ ಸಂಬಂಧಗಳು ಜನಪ್ರಿಯವಾಗಿವೆ. ಹಣ ನೀಡಿದರೆ ಸಾಕು ಬಾಡಿಗೆಗೆ ಜನರು ಸಿಗುತ್ತಾರೆ. ಡಿನ್ನರ್​ ಮಾಡಲು, ಓಡಾಡಲು, ಸಿನಿಮಾ ನೋಡಲು ಸಿಗುತ್ತಾರೆ. ಒಟ್ಟಾರೆ ಹಣ ನೀಡಿದರೆ ಸಾಕು.

ಈಕೆ ಭಾರತೀಯ ಯುವತಿ

ಅಚ್ಚರಿಯೆಂದರೆ, ವಿದೇಶದಲ್ಲಿ ಕಂಡುಬಂದ ಇಂತಹ ಪರಿಕಲ್ಪನೆ ಭಾರತದಕ್ಕೂ ಕಾಲಿಟ್ಟಿದೆ. ಭಾರತೀಯ ಯುವತಿಯೊಬ್ಬಳು ತಾನು ಬಾಡಿಗೆ ಸಿಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾಳೆ. ಜೊತೆಗೆ ಬಾಡಿಗೆ ಪಡೆಯುವುದಕ್ಕೂ ಮುನ್ನ ಆಕೆಗೆ ಹಣವನ್ನು ನೀಡಬೇಕಾಗಿದೆ. ಅದಕ್ಕೆಂದೇ ಲಿಸ್ಟ್​ ತಯಾರಿಸಿಕೊಂಡಿದ್ದಾಳೆ.

ಇದನ್ನೂ ಓದಿ: ಮಂತ್ರಿಯಾಗದೆ, ಮುಖ್ಯಮಂತ್ರಿಯಾಗದೆ ಭಾರತದ ಪ್ರಧಾನಿಯಾಗಿದ್ದ ‘‘ಯಂಗ್​ ಟರ್ಕ್​’’.. ಇವರು ಯಾರು ಗೊತ್ತಾ?

ಹೌದು. ದಿವ್ಯಾ ಗಿರಿ ಎಂಬಾಕೆ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾಳೆ. ನೆನಪಿನಲ್ಲಿ ಉಳಿಯುವಂತೆ ನಿಮಗಾಗಿ ದಿನ ಬಾಡಿಗೆಗೆ ಸಿಗುತ್ತೇನೆ ಎಂದು ಪೋಸ್ಟ್​ ಹಂಚಿಕೊಂಡಿದ್ದಾಳೆ. ಜೊತೆಗೆ ಡೇಟ್​ ಮಾಡಲು ಬೇಕೆನಿಸಿದರೆ ಬಾಡಿಗೆ ನೀಡಬೇಕು ಎಂದು ಬರೆದುಕೊಂಡಿದ್ದಾಳೆ. ಅದಕ್ಕಾಗಿ ಲಿಸ್ಟ್ ಅನ್ನೇ ತಯಾರಿಸಿದ್ದಾಳೆ.

ಡೇಟಿಂಗ್​, ಮೀಟಿಂಗ್​​ಗೆ​ ರೇಟ್‌ ಫಿಕ್ಸ್!

[caption id="attachment_66769" align="alignnone" width="800"]publive-image ಚಿಲ್​ ಕಾಫಿ ಕುಡಿಯುತ್ತಾ ಡೇಟ್​ - 1,500 ರೂಪಾಯಿ[/caption]

[caption id="attachment_66774" align="alignnone" width="800"]publive-image ಸಾಮಾನ್ಯ ಡೇಟ್​ (ಡಿನ್ನರ್​ ಮತ್ತು ಸಿನಿಮಾ) - 2000 ರೂಪಾಯಿ[/caption]

[caption id="attachment_66775" align="alignnone" width="800"]publive-image ಫ್ಯಾಮಿಲಿ ಜೊತೆಗೆ ಮೀಟಿಂಗ್ - 3000 ರೂಪಾಯಿ[/caption]

[caption id="attachment_66776" align="alignnone" width="800"]publive-image ಈವೆಂಟ್​ ಭಾಗವಹಿಸಲು - 3500 ರೂಪಾಯಿ[/caption]

[caption id="attachment_66777" align="alignnone" width="800"]publive-image ಮನೆಯಲ್ಲಿ ಅಡುಗೆ ಮಾಡುತ್ತಾ ಡೇಟ್​ ಮಾಡಲು - 3500 ರೂಪಾಯಿ[/caption]

[caption id="attachment_66765" align="alignnone" width="800"]publive-image ಬೈಕ್​ ಡೇಟ್​ - 4000 ರೂಪಾಯಿ[/caption]

[caption id="attachment_66766" align="alignnone" width="800"]publive-image ಶಾಪಿಂಗ್​ ಮಾಡುತ್ತಾ ಡೇಟ್​ ಮಾಡಲು - 4500 ರೂಪಾಯಿ[/caption]

[caption id="attachment_66767" align="alignnone" width="800"]publive-image ಚಾರಣ​, ಕಯಾಕಿಂಗ್​​ (ಬೋಟಿಂಗ್) - 5000 ರೂಪಾಯಿ[/caption]

[caption id="attachment_66768" align="alignnone" width="800"]publive-image ನಮ್ಮ ಡೇಟಿಂಗ್​ ಬಗ್ಗೆ ಪಬ್ಲಿಕ್ ಪೋಸ್ಟ್​ ಹಂಚಲು - 6000 ರೂಪಾಯಿ. [/caption]

ಇದಲ್ಲದೆ ವೀಕೆಂಡ್​ (2 ದಿನ) ಡೇಟಿಂಗ್​ಗಾಗಿ- 10,000 ರೂಪಾಯಿ ಚಾರ್ಜ್​ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಗಿರಿ ಖಾತೆ ಹಂಚಿಕೊಂಡ ಈ ಪೋಸ್ಟ್​ ಭಾರೀ ವೈರಲ್​ ಆಗುತ್ತಿದೆ. ಅನೇಕರು ಈ ಪೋಸ್ಟ್​ ನೋಡಿ ಅಚ್ಚರಿಗೊಂಡರೆ, ಇನ್ನು ಕೆಲವರು ಆಕೆಯ ಕಾಲೆಳುಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment