Advertisment

ಭಾರತದ ಬಾಲಕಿ ಪ್ರತಿಭೆಗೆ ಹುಚ್ಚೆದ್ದು ಕುಣಿದ ಅಮೆರಿಕನ್ಸ್​​.. ಈಕೆ ವಯಸ್ಸು ಕೇಳಿದ್ರೆ ಶಾಕ್​ ಆಗ್ತೀರಾ!

author-image
Veena Gangani
Updated On
ಭಾರತದ ಬಾಲಕಿ ಪ್ರತಿಭೆಗೆ ಹುಚ್ಚೆದ್ದು ಕುಣಿದ ಅಮೆರಿಕನ್ಸ್​​.. ಈಕೆ ವಯಸ್ಸು ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ದೇವತೆಗಳ ಭೂಮಿಯಿಂದ ಬಂದ ರಾಕ್ ದೇವತೆ ಎಂದ ಆನಂದ್ ಮಹೀಂದ್ರಾ
  • ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ಜನಪ್ರಿಯ ಶೋನಲ್ಲಿ ಬಾಲಕಿ ಕಮಾಲ್​
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ ಈ ವಿಡಿಯೋ

ನ್ಯೂಯಾರ್ಕ್‌: ಭಾರತ ಮೂಲದ 10 ವರ್ಷದ ಬಾಲಕಿಯ ಟ್ಯಾಲೆಂಟ್​ಗೆ ಅಮೆರಿಕಾ ಜನ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ಹೌದು, ಅಮೆರಿಕಾಸ್ ಗಾಟ್ ಟ್ಯಾಲೆಂಟ್ ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿ ಬಾಲಕಿ ಮಾಯಾ ನೀಲಕಂಠನ್ ಅವರ ಅದ್ಭುತ ಪ್ರದರ್ಶನದ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

Advertisment

publive-image

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಗಿಟಾರ್ ಪ್ರತಿಭೆ ಹೊಂದಿರೋ ಮಾಯಾ ನೀಲಕಂಠನ್ ಎಂಬುವವರು ‘ಅಮೆರಿಕಾಸ್ ಗಾಟ್ ಟ್ಯಾಲೆಂಟ್’ ಶೋಗೆ ಹೋಗಿದ್ದರು. ಮಾಯಾ ನೀಲಕಂಠನ್ ಭಾರತೀಯ ಕ್ಲಾಸಿಕಲ್‌ ಮತ್ತು ಪಾಪ್‌ ಫ್ಯೂಶನ್‌ ಮಾಡಿದ ನೋಟ್‌ ಅನ್ನು ಗಿಟಾರ್‌ನಲ್ಲಿ ನುಡಿಸಿದ್ದಾರೆ. ಗಿಟಾರ್ ನುಡಿಸುವುದನ್ನು ಕಂಡ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಾ ಕುಳಿದು ಕಪ್ಪಳಿಸಿದ್ದಾರೆ. ಜೊತೆಗೆ ಮಾಯಾ ನೀಲಕಂಠನ್ ರಾಕ್​ ಸಂಗೀತ ಕೇಳಿ ಜಡ್ಜ್‌ಗಳು ಮೂಕವಿಸ್ಮಿತರಾಗಿದ್ದಾರೆ.

publive-image

Advertisment


">June 29, 2024

ಇಷ್ಟೂ ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ನೀಲಕಂಠನ್, ಥ್ರಾಶ್ ಮೆಟಲ್, ಟೂಲ್ ಹಾಡುಗಳು ಮತ್ತು ಭಾರತೀಯ ಶಾಸ್ತ್ರೀಯ ಕರ್ನಾಟಕ ಸಂಗೀತವನ್ನು ನುಡಿಸುತ್ತಾಳೆ. ಹಲವಾರು ಸಂದರ್ಭಗಳಲ್ಲಿ ನೇರ ಪ್ರದರ್ಶನ ನೀಡಿದ್ದಾಳೆ. ಕೇವಲ ಐದು ವರ್ಷದವಳಾಗಿದ್ದಾಗ ಆಕೆ ಆಟಿಕೆ ಗಿಟಾರ್ ನುಡಿಸುತ್ತಾ ಮನೆಯಲ್ಲಿ ನೃತ್ಯ ಮಾಡುತ್ತಿದ್ದಳಂತೆ. ಇದೇ ಆಸಕ್ತಿ ಆಕೆಯನ್ನು ನುರಿತ ಗಿಟಾರ್ ವಾದಕನಾಗಲು ಅವಳನ್ನು ಪ್ರೇರೇಪಿಸಿತು.

publive-image

ಇದೇ ವಿಡಿಯೋವನ್ನು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ದೇವತೆಗಳ ಭೂಮಿಯಿಂದ ಬಂದ ರಾಕ್ ದೇವತೆ ಎಂದು ಕೊಂಡಾಡಿದ್ದಾರೆ. ಜೊತೆಗೆ ಮಹೀಂದ್ರಾ ಗ್ರೂಪ್ ಪ್ರತಿ ವರ್ಷ ಮುಂಬೈನಲ್ಲಿ ಆಯೋಜಿಸುವ ಮಹೀಂದ್ರಾ ಬ್ಲೂಸ್ ಫೆಸ್ಟಿವಲ್‌ನಲ್ಲಿ ಕಾರ್ಯಕ್ರಮ ನೀಡಲು ಈ ಹುಡುಗಿ ಅರ್ಹಳು ಅಂತ ಹೇಳಿದ್ದಾರೆ. ಈ ವಿಡಿಯೋ ನೋಡಿದ ಸಾಕಷ್ಟೂ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಮಾಯಾ ಉಡುಪಿನ ಶೈಲಿ ಬಗ್ಗೆಯೂ ಹಾಡಿ ಹೊಗಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment