Advertisment

ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!

author-image
Bheemappa
Updated On
ಫೀಸು ಇಲ್ಲವೇ ಇಲ್ಲ, ಈ ಜಾಬ್​ಗೆ ನೀವೂ ಅಪ್ಲೇ ಮಾಡಬಹುದು; ಸರ್ಕಾರದ ಕೆಲಸ, ಕೈ ತುಂಬಾ ಸಂಬಳ!
Advertisment
  • ಎಲ್ಲಾ ಅಭ್ಯರ್ಥಿಗಳು ಆನ್​ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು
  • ಅಪ್ಲೇ ಮಾಡಲು ಬೇಕಾದ ಅಧಿಕೃತ ವೆಬ್‌ಸೈಟ್‌ ವಿಳಾಸ ಇಲ್ಲಿದೆ
  • ಈ ಹುದ್ದೆಗಳಿಗೆ ಸಂಬಳ ಎಷ್ಟಿದೆ, ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್ ನೇವಿಯು ಅರ್ಜಿಗಳನ್ನು ಆನ್​ಲೈನ್​ ಮೂಲಕ ಆಹ್ವಾನ ಮಾಡಿದೆ. ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಫ್​​ಲೈನ್ ಮೂಲಕ ಬರುವಂತ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಎಲ್ಲಾ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅಪ್ಲೇ ಮಾಡಬೇಕಾಗಿದೆ.

Advertisment

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​.. ಸ್ಕಾಲರ್​ಶಿಪ್​ಗೆ ಅಪ್ಲೇ ಮಾಡಿ, ಕೊನೆ ದಿನಾಂಕ ಯಾವಾಗ?

ಭಾರತದ ನೌಕಾಪಡೆಯಲ್ಲಿರುವ ಶಾರ್ಟ್​ ಸರ್ವೀಸ್ ಕಮಿಷನ್ (ಎಸ್​ಎಸ್​​ಸಿ) ಆಫೀಸರ್​ ಪೋಸ್ಟ್​ಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿರುತ್ತದೆ. ಭಾರತೀಯ ನೌಕಾಪಡೆಗೆ ಸೇರಲು ನೀವು ಬಯಸಿದರೆ ಹಾಗೂ ಅಗತ್ಯ ಅರ್ಹತೆ ಹೊಂದಿದ್ದರೆ, ಈ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಈ ಹುದ್ದೆಗಳ ನೇಮಕಾತಿಗಳಿಗಾಗಿ ಫಾರ್ಮ್ ಅನ್ನು ಭರ್ತಿ ಮಾಡಲು ಬಯಸುವ ಅಭ್ಯರ್ಥಿಗಳು ಲಿಂಕ್ ಅನ್ನು ಓಪನ್ ಮಾಡಿದ ನಂತರ ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್ಲೇ ಮಾಡಲು ಬೇಕಾದ ಅಧಿಕೃತ ವೆಬ್‌ಸೈಟ್‌ ಅನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳಿಗೆ ಇರುವ ಸಂಬಳ-
56,100 ರೂ.ಗಳು ಸಂಬಳ ಜೊತೆ ಇತರೆ ಸರ್ಕಾರಿ ಸೌಲಭ್ಯಗಳು ಇರುತ್ತವೆ
ಒಟ್ಟು ಹುದ್ದೆಗಳು- 250
ಕೆಲಸದ ಸ್ಥಳ- ಭಾರತದ್ಯಾಂತ
ಅರ್ಜಿಯ ಶುಲ್ಕ ಇರುವುದಿಲ್ಲ

Advertisment

ಹುದ್ದೆಗಳ ಮಾಹಿತಿ ಈ ಕೆಳಕಂಡಂತೆ ಇದೆ

  • ಜನರಲ್ ಸರ್ವೀಸ್​ [GS(X)] ಹೈಡ್ರೋ ಕೇಡರ್ (ಎಕ್ಸ್​​ಕ್ಯುಟಿವ್ ಬ್ರಾಂಚ್)= 56 ಪೋಸ್ಟ್
  • ಪೈಲಟ್ (ಎಕ್ಸ್​​ಕ್ಯುಟಿವ್ ಬ್ರಾಂಚ್)= 24 ಹುದ್ದೆಗಳು
  • ನಾವೆಲ್​ ಏರ್ ಆಪರೇಷನ್ ಆಫೀಸರ್ (ಎಕ್ಸ್​​ಕ್ಯುಟಿವ್ ಬ್ರಾಂಚ್)= 21 ಹುದ್ದೆಗಳು
  • ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) (ಎಕ್ಸ್​​ಕ್ಯುಟಿವ್ ಬ್ರಾಂಚ್)= 20 ಕೆಲಸಗಳು
  • ಲಾಜಿಸ್ಟಿಕ್ಸ್​ (ಎಕ್ಸ್​​ಕ್ಯುಟಿವ್ ಬ್ರಾಂಚ್)= 20 ಪೋಸ್ಟ್​ಗಳು
  • ನಾವೆಲ್ ಆರ್ಮಮೆಂಟ್ ಇನ್​​ಸ್ಪೆಕ್ಟರ್ ಕೇಡರ್ = 16 ಹುದ್ದೆಗಳು
  • ಎಜುಕೇಶನ್ ಬ್ರಾಂಚ್- 15 ಹುದ್ದೆಗಳು
  • ಇಂಜಿನಿಯರಿಂಗ್ ಬ್ರಾಂಚ್- 36 ಪೋಸ್ಟ್​ ​
  • ಎಲೆಕ್ಟ್ರಿಕಲ್ ಬ್ರಾಂಚ್- 42 ಹುದ್ದೆಗಳು

ಇದನ್ನೂ ಓದಿ:ಉದ್ಯೋಗ ಹುಡುಕುತ್ತಿರೋರಿಗೆ ಗುಡ್​ನ್ಯೂಸ್​​; ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೇ ಮಾಡಿ; ಸಂಬಳ ಎಷ್ಟು?

publive-image

ವಿದ್ಯಾರ್ಹತೆ-
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇ.60 ಅಂಕಗಳೊಂದಿಗೆ BE, ಬಿಎಸ್​​ಸಿ, ಬಿ.ಕಾಮ್, ಪಿಜಿ ಡಿಪ್ಲೊಮಾ, B.Tech, MSc, MCA ಅಥವಾ MBA ಪದವಿ ಪಡೆದಿರಬೇಕು. ಇಷ್ಟೇ ಅಲ್ಲದೇ ಅಭ್ಯರ್ಥಿಯು 10 ಮತ್ತು 12 ನೇ ತರಗತಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕ ಪಡೆದಿರಬೇಕು.

Advertisment

ಇನ್ನು ಆಹ್ವಾನ ಮಾಡಲಾದ ವಿವಿಧ ಪೋಸ್ಟ್‌ಗಳಿಗೆ ಬೇರೆ ಬೇರೆ ಪದವಿಗಳ ವಿದ್ಯಾರ್ಹತೆ ಕೇಳಲಾಗಿದೆ. ಇದರ ವಿವರ ವೆಬ್‌ಸೈಟ್‌ನಲ್ಲಿ ನೋಡಿ ತಿಳಿದುಕೊಳ್ಳಿ. ಪೈಲಟ್ ಹುದ್ದೆಗೆ 18 ರಿಂದ 23 ವರ್ಷದ ಒಳಗಿನವರು ಅರ್ಜಿ ಹಾಕಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
ಅರ್ಹತಾ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಲಾಗುತ್ತದೆ. ಮೊದಲು ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಇದರ ನಂತರ, ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗುತ್ತದೆ. ದಾಖಲೆ ಪರಿಶೀಲನೆ ಹಾಗೂ ಮೆಡಿಕಲ್ ಪರೀಕ್ಷೆ ಮಾಡಲಾಗುತ್ತದೆ. ನಂತರ ಅಂತಿಮ ಅಭ್ಯರ್ಥಿಗಳನ್ನು 3 ವರ್ಷಗಳ ಪ್ರೊಬೇಷನ್ ಅವಧಿಗೆ ಇರಿಸಲಾಗುತ್ತದೆ.

ಅಪ್ಲೇ ಮಾಡಲು ಈ ಲಿಂಕ್​ ಅನ್ನು ಕ್ಲಿಕ್ ಮಾಡಿ- https://www.joinindiannavy.gov.in/en/account/login?state=hs&st=T05BRjVwZ2pNcjVRUEVvUW1nUGlCdz09

Advertisment

ಉದ್ಯೋಗದ ಸಂಪೂರ್ಣ ಮಾಹಿತಿಯ ಲಿಂಕ್- https://static-cdn.publive.online/newsfirstlive-kannada/media/pdf_files/wp-content/uploads/2024/09Indian-Navy-SSC-Officer-Official-Notification-PDF.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment