/newsfirstlive-kannada/media/post_attachments/wp-content/uploads/2024/06/YUVARAJ_GOYAL_NEW.jpg)
ನವದೆಹಲಿ: ಕೆನಾಡದಲ್ಲಿ ಭಾರತದ ಪಂಜಾಬ್ ಮೂಲದ ವ್ಯಕ್ತಿಯನ್ನು ಅವರ ನಿವಾಸದಲ್ಲೇ ಶೂಟ್ ಮಾಡಿ ನಾಲ್ವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಭಾರತದ ಪಂಜಾಬ್ ಮೂಲದ ಯುವರಾಜ್ ಗೋಯಲ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ವ್ಯಕ್ತಿ. ಇವರು 2019ರಲ್ಲಿ ಪಂಜಾಬ್‌ನ ಲುಧಿಯಾನಾದಿಂದ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದರು. ಬಳಿಕ ಸರ್ರೆಯಲ್ಲಿ ನೆಲಸಿದ್ದರಿಂದ ಇತ್ತೀಚೆಗಷ್ಟೇ ಅಲ್ಲಿನ ಶಾಶ್ವತವಾಗಿ ವಾಸಿಸುವ ಹಕ್ಕು ಪಡೆದುಕೊಂಡಿದ್ದರು. ಆದರೆ ಅವರ ಮನೆಗೆ ನುಗ್ಗಿದ ಹಂತಕರು ಶೂಟ್ ಮಾಡಿ ಕೊಲೆ ಮಾಡಿದ್ದಾರೆ. ವ್ಯಕ್ತಿ ಕೊಲೆಯಾಗುವ 30 ಸೆಕೆಂಡ್​ಗಳ ಮೊದಲು ಭಾರತದಲ್ಲಿದ್ದ ತಾಯಿ ಜೊತೆ ಫೋನ್​ನಲ್ಲಿ ಮಾತಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಆದರ್ಶಗಳ ದೇಗುಲ ದೊಡ್ಮನೆಯಲ್ಲಿ ಬಿರುಗಾಳಿ.. ಯುವ ರಾಜ್, ಶ್ರೀದೇವಿ ಬಾಳಲ್ಲಿ ಅಸಲಿಗೆ ನಡೆದಿದ್ದೇನು?
/newsfirstlive-kannada/media/post_attachments/wp-content/uploads/2024/06/YUVARAJ_GOYAL.jpg)
ಯುವರಾಜ್ ಗೋಯಲ್ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವಾದ ಸರ್ರೆಯಲ್ಲಿ ಕಾರ್ ಡೀಲರ್‌ಶಿಪ್‌ನಲ್ಲಿ ಸೇಲ್ಸ್​ ಎಕ್ಸ್​ಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಜಿಮ್​​ಗೆ ಹೋಗಿ ಕಾರಿನಲ್ಲಿ ಮನೆಗೆ ಬಂದಿದ್ದರು. ಕಾರಿನಿಂದ ಡೋರ್ ತೆಗೆದು ಹೊರ ಬಂದಾಗ ದುಷ್ಕರ್ಮಿಗಳು ಶೂಟ್ ಮಾಡಿ ಪರಾರಿ ಆಗಿದ್ದರು. ಈ ಕೇಸ್ ಸಂಬಂಧ ಮನ್ವಿರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಜುಟ್ಟಿ (23) ಮತ್ತು ಕೆಯ್ಲಾನ್ ಫ್ರಾಂಕೋಯಿಸ್ (20) ಎನ್ನುವ ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us