ಜಸ್ಟ್‌ 50 ಪೈಸೆ ಹೆಚ್ಚು ವಸೂಲಿ ಮಾಡಿದ್ದಕ್ಕೆ ಅಂಚೆ ಇಲಾಖೆಗೆ ₹15 ಸಾವಿರ ದಂಡ; ಅಸಲಿಗೆ ಆಗಿದ್ದೇನು?

author-image
admin
Updated On
ಜಸ್ಟ್‌ 50 ಪೈಸೆ ಹೆಚ್ಚು ವಸೂಲಿ ಮಾಡಿದ್ದಕ್ಕೆ ಅಂಚೆ ಇಲಾಖೆಗೆ ₹15 ಸಾವಿರ ದಂಡ; ಅಸಲಿಗೆ ಆಗಿದ್ದೇನು?
Advertisment
  • ಕಷ್ಟಪಟ್ಟು ದುಡಿದ ಪ್ರತಿ ಪೈಸೆಗೂ ಬೆಲೆ ಇದೆ ಎಂಬ ವಾದಕ್ಕೆ ಜಯ
  • ಅಂಚೆ ಸಿಬ್ಬಂದಿ ತಾಂತ್ರಿಕ ಸಮಸ್ಯೆಯ ಕಾರಣ ನೀಡಿದ್ದಕ್ಕೆ ತಕ್ಕ ಪಾಠ
  • 50 ಪೈಸೆಯ ನಿರ್ಲಕ್ಷ್ಯದಿಂದ ಸರ್ಕಾರದ ಆದಾಯಕ್ಕೆ ಲಕ್ಷ, ಲಕ್ಷ ನಷ್ಟ

ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಪೈಸೆ, ಪೈಸೆ ಸೇರಿದ್ರೆ ರೂಪಾಯಿಯಾಗುತ್ತದೆ. ಆದರೆ ಎಷ್ಟೋ ಬಾರಿ ನಾವು ಪೈಸೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮ ನಿತ್ಯದ ವಹಿವಾಟಿನಲ್ಲಿ ಪೈಸೆಗೆ ನಾವು ಬೆಲೆಯೇ ನೀಡುವುದಿಲ್ಲ. ಆದರೆ ಕೆಲವೊಬ್ಬರು ಛಲವಾದಿಗಳಿರುತ್ತಾರೆ. ಒಂದು ರೂಪಾಯಿಯನ್ನೂ ಸುಖಾಸುಮ್ಮನೆ ಬಿಡುವವರಲ್ಲ. ಕಷ್ಟಪಟ್ಟು ದುಡಿದ ಪ್ರತಿ ಪೈಸೆಗೂ ಬೆಲೆ ಇದೆ ಎಂಬ ನೀತಿ ಅವರದ್ದು. ಹೀಗೆ 50 ಪೈಸೆಗಾಗಿ ಛಲ ಬಿಡದೇ ಹೋರಾಡಿ ಗೆದ್ದಿದ್ದಾರೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಗೇರುಗಂಬಾಕ್ಕಂ ನಿವಾಸಿ ಮಾನಶಾ.

ಗೇರುಗಂಬಾಕ್ಕಂ ನಿವಾಸಿ ಮಾನಶಾ ಕಳೆದ ಡಿ.13, 2023ರಂದು ಪೊಜಿಚಲೂರು ಅಂಚೆ ಕಚೇರಿಗೆ ತೆರಳಿದ್ದಾಗ (Registered letter) ನೋಂದಾಯಿತ ಪತ್ರಕ್ಕಾಗಿ 30 ರೂ. ಪಾವತಿಸಲು ಸೂಚಿಸಿದ್ದರು. ಆದರೆ ರಸೀದಿಯಲ್ಲಿ ಕೇವಲ 29.50 ಪೈಸೆ ಅಂಚೆ ಶುಲ್ಕ ಇದ್ದಿದ್ದನ್ನು ಪ್ರಶ್ನಿಸಿದ್ದ ಮಾನಶಾ ಯುಪಿಐ ಮೂಲಕ 29.50 ಪೈಸೆ ಪಾವತಿಸುವುದಾಗಿ ಹೇಳಿದ್ದಾರೆ. ಆದರೆ ಅಂಚೆ ಸಿಬ್ಬಂದಿ ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣ ನೀಡಿ 30 ರೂ. ಪಾವತಿಸುವಂತೆ ಸೂಚಿಸಿದೆ. ಅದಕ್ಕೆ ಮಾನಶಾ ಗ್ರಾಹಕರಿಂದ 50 ಪೈಸೆ ಹೆಚ್ಚುವರಿ ಪಾವತಿಸಿಕೊಳ್ಳುತ್ತಿರುವುದನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 5 ವರ್ಷ ನಕಲಿ ಕೋರ್ಟ್ ನಡೆಸಿದ ನಕಲಿ ಜಡ್ಜ್‌.. 100 ಎಕರೆ ಭೂಮಿ ಗುಳುಂ; ಸಿಕ್ಕಿಬಿದ್ದಿದ್ದೇ ರೋಚಕ! 

ಅಂಚೆ ಕಚೇರಿಯಲ್ಲಿ ನಿತ್ಯ ಲಕ್ಷಗಟ್ಟಲೇ ವ್ಯವಹಾರ ನಡೆಯುತ್ತಿದ್ದು ಹೆಚ್ಚುವರಿ 50 ಪೈಸೆ ವಸೂಲಿ ಕಾನೂನು ಬಾಹಿರ ಅಂತ ಪ್ರಶ್ನೆ ಮಾಡಿದ್ದಾರೆ. ಡಿಜಿಟಲ್ ಮೋಡ್ ಮೂಲಕ ಅಂಚೆ ಶುಲ್ಕ 29.50 ಪೈಸೆ ಮಾತ್ರ ಪಾವತಿಸುವುದಾಗಿ ಹೇಳಿದ್ದಾರೆ. ಆದರೆ ಅಂಚೆ ಸಿಬ್ಬಂದಿ, ಇದನ್ನು ನಿರಾಕರಿಸಿ ಅಂಚೆ ಸಾಫ್ಟ್​ವೇರ್ ಸ್ವಯಂಚಾಲಿತ ವ್ಯವಸ್ಥೆ ಇದ್ದು 50 ಪೈಸೆಗಿಂತ ಕಡಿಮೆ ಯಾವುದೇ ಮೊತ್ತವನ್ನು ಸಾಮಾನ್ಯವಾಗಿ ‘ನಿರ್ಲಕ್ಷಿಸಲಾಗುತ್ತದೆ’ ಮತ್ತು ಅಂತಹ ಮೊತ್ತವನ್ನು ಹತ್ತಿರದ ರೂಪಾಯಿಗೆ ಹೊಂದಿಸಲಾಗುತ್ತದೆ. ಅದೇ ರೀತಿ ಸಾಫ್ಟ್​ವೇರ್ ವಿನ್ಯಾಸಗೊಳಿಸಲಾಗಿದೆ ಅಂತ ಅಂಚೆ ಕಚೇರಿ ವಿವರಿಸಿದೆ.

ಆದರೆ ಅಂಚೆ ಕಚೇರಿಯ ವಿವರಣೆಗೆ ತೃಪ್ತರಾಗದ ಮಾನಶಾ ಯುಪಿಐ ಬಳಸಿ ನಿಖರವಾದ ಶುಲ್ಕ ಪಾವತಿಸಲು ಅವಕಾಶವಿದ್ದರೂ ಹೆಚ್ಚುವರಿ ಶುಲ್ಕ ಅಕ್ರಮ ಎಂದು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಅಂಚೆ ಕಚೇರಿಯ ಈ ಕ್ರಮ ‘ಅನ್ಯಾಯದ ವ್ಯಾಪಾರ’ ಇದು ಕಪ್ಪು ಹಣದ ಚಲಾವಣೆಗೂ ಕೊಡುಗೆ ನೀಡುತ್ತದೆ. ಜೊತೆಗೆ ಸರ್ಕಾರದ ಆದಾಯಕ್ಕೂ ನಷ್ಟ. ಇದು ದೊಡ್ಡ ಮಟ್ಟದ ಆರ್ಥಿಕ ಅಕ್ರಮಗಳಿಗೆ ಕಾರಣ ಅಂತ ಮನಶಾ ವಾದಿಸಿದ್ದರು. ಇದಕ್ಕಾಗಿ ಮಾನಸಿಕ ತೊಂದರೆಗಾಗಿ 2.50 ಲಕ್ಷ ರೂ. ಮತ್ತು ವ್ಯಾಜ್ಯದ ವೆಚ್ಚಕ್ಕಾಗಿ 10 ಸಾವಿರ ರೂ. ನೀಡಲು ಸೂಚಿಸುವಂತೆ ಗ್ರಾಹಕ ಆಯೋಗಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: ಮ್ಯಾಕ್​ಡೊನಾಲ್ಡ್ಸ್​ ತಿಂಡಿ ತಿನ್ನುವ ಮುನ್ನ ಎಚ್ಚರ! ಅಮೆರಿಕಾದಲ್ಲಿ 1 ಬಲಿ, ಡಜನ್ ಜನರ ಒದ್ದಾಟ, ಏನಾಯ್ತು? 

ಮಾನಶಾ ದೂರು ವಿಚಾರಣೆ ನಡಸಿದ ಕಾಂಚಿಪುರಂ ಗ್ರಾಹಕ ಆಯೋಗವು ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಅಂಚೆ ಕಚೇರಿ ಸಂಗ್ರಹಿಸಿದ ಹೆಚ್ಚುವರಿ 50 ಪೈಸೆ ಅಕ್ರಮ ಎಂದು ಆದೇಶ ನೀಡಿದೆ. ಅಲ್ಲದೇ ದೂರುದಾರರಿಗೆ ಹೆಚ್ಚುವರಿ ಸಂಗ್ರಹಿಸಿದ 50 ಪೈಸೆ ವಾಪಸ್ ನೀಡಬೇಕು. ಮಾನಸಿಕ ತೊಂದರೆ ನೀಡಿದ್ದಕ್ಕೆ 10 ಸಾವಿರ ರೂ. ಜೊತೆಗೆ ಗ್ರಾಹಕ ವ್ಯಾಜ್ಯ ವೆಚ್ಚಕ್ಕಾಗಿ 5 ಸಾವಿರ ರೂ. ಪಾವತಿಸುವಂತೆ ಅಂಚೆ ಇಲಾಖೆಗೆ ಸೂಚಿಸಿದೆ.
50 ಪೈಸೆ ಹೆಚ್ಚುವರಿ ವಸೂಲಿ ಮಾಡಿದ್ದಕ್ಕೆ ಗ್ರಾಹಕರಿಗೆ ಅಂಚೆ ಇಲಾಖೆ ಒಟ್ಟು 15 ಸಾವಿರ ಪರಿಹಾರ ಜೊತೆಗೆ 50 ಪೈಸೆಯನ್ನು ವಾಪಸ್ ಮಾಡಲು ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment