ವಿರಾಟ್ ಕೊಹ್ಲಿ ಈಗ ಮಾಡ್ರನ್ ಡೇ ಕ್ರಿಕೆಟ್ನ ಲೆಜೆಂಡ್ ಆಟಗಾರ
ಟೀಮ್ ಇಂಡಿಯಾ ಕಂಪ್ಲೀಟ್ ಆಗಿ ವಿರಾಟ್ ಮೇಲೆ ಡಿಪೆಂಡ್..!
13 ವರ್ಷಗಳ ಟ್ರ್ಯಾಕ್ ರೆಕಾರ್ಡ್ ಬ್ಯಾಟಿಂಗ್ ನೋಡಿದ್ರೆ ಕೊಹ್ಲಿ ಕಿಂಗ್
ಕ್ರಿಕೆಟ್ ಇದು ಟೀಮ್ ಗೇಮ್. ಇಲ್ಲಿ 11 ಮಂದಿಯ ಆಟವೂ ಮೋಸ್ಟ್ ಇಂಪಾರ್ಟೆಂಟ್. ಒಬ್ಬ ಸಣ್ಣ ಎಡವಟ್ಟು ಮಾಡಿದರೂ ಮ್ಯಾಚ್ ಖತಂ ಆಗೋದು ಗ್ಯಾರಂಟಿ. ಅಂಥದ್ರಲ್ಲಿ ಇಡೀ ಟೀಮ್ ಒಬ್ಬ ಆಟಗಾರನ ಮೇಲೆ ಡಿಪೆಂಡ್ ಆಗ್ಬಿಟ್ರೆ, ಅದನ್ನ ಟೀಮ್ ಗೇಮ್ ಎನ್ನುವರೇ?
ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನ ಅಗ್ರಜ. ವಿಶ್ವದ ಎಲ್ಲ ತಂಡಗಳಿಗಿಂತ ಶ್ರೀಮಂತ ಬೋರ್ಡ್ ನಮ್ದು. ವಿಶ್ವ ಕ್ರಿಕೆಟ್ನ ಅಧಿಪತಿಯಾಗಿ ಮರೆಯುತ್ತಿರುವ ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆಟವೂ ಚನ್ನಾಗಿದೆ. ಆದ್ರೆ, ಐಸಿಸಿ ಟೂರ್ನಿ ಬಂದ್ರೆ ಅದೇನಾಗುತ್ತೋ ಗೊತ್ತಿಲ್ಲ. ಆರಂಭದಲ್ಲಿ ನಿರೀಕ್ಷೆ ಡಬಲ್ ಇರುತ್ತೆ. ಆದ್ರೆ, ಅಂತ್ಯದಲ್ಲಿ ಎಲ್ಲವೂ ಠುಸ್ ಪಟಾಕಿ ಆಗುತ್ತೆ.
90ರ ದಶಕದಲ್ಲಿ ಸಂಪೂರ್ಣ ಸಚಿನ್ ಮಯವಾಗಿದ್ದ ಟೀಮ್ ಇಂಡಿಯಾ ಅಂದು ಗೆಲುವಿಗಾಗಿ ಸದಾಕಾಲ ಸಚಿನ್ ಮಂತ್ರ ಜಪಿಸ್ತಾ ಇತ್ತು. ಸಚಿನ್ ವಿಕೆಟ್ ಒಪ್ಪಿಸಿದ್ರೆ, ಟೀಮ್ ಇಂಡಿಯಾ ಕಥೆ ಮುಗಿಯಿತು ಎಂದು ಎಲ್ರೂ ಫಿಕ್ಸ್ ಆಗ್ತಿದ್ರು. ಹೀಗೆ ಸೋಲು ಪಕ್ಕಾ ಅಂತಾ ಭವಿಷ್ಯ ನುಡಿದು ಟಿವಿ ಆಫ್ ಮಾಡಿ ಬೇಸರದಿಂದಲೇ ಹೊರ ನಡೀತಿದ್ದಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಈಗ ಆ ಕಾಲ ಬದಲಾಗಿದೆ. ಸಚಿನ್ ಕೂಡ ಕ್ರಿಕೆಟ್ ಗುಡ್ ಬೈ ಹೇಳಿ ಆಗಿದೆ. ಆದ್ರೆ, ಟೀಮ್ ಇಂಡಿಯಾ ಪರಿಸ್ಥಿತಿ ಮಾತ್ರ ಹಾಗೆಯಿದೆ.
ಅಂದು ಸಚಿನ್.. ಇಂದು ವಿರಾಟ್ ಕೊಹ್ಲಿ!
ಸಚಿನ್ ಯುಗಾಂತ್ಯದ ಬಳಿಕ ಯಾರಪ್ಪಾ ಎಂದು ಹುಟ್ಟಿದ ಪ್ರಶ್ನೆಗೆ ಉತ್ತರವೇ ವಿರಾಟ್ ಕೊಹ್ಲಿ. ಸಚಿನ್ ಸಂಧ್ಯಾಕಾಲದ ವೇಳೆ ಉದಯಿಸಿದ ವಿರಾಟ್, ಈಗ ಮಾಡ್ರನ್ ಡೇ ಕ್ರಿಕೆಟ್ನ ಲೆಜೆಂಡ್ ಅನ್ನಿಸಿಕೊಂಡಿದ್ದಾರೆ. ಅಂದು ಸಚಿನ್ ಹೇಗೆ ಟೀಮ್ ಇಂಡಿಯಾದ ಗೆಲುವಿನ ರೂವಾರಿಯಾಗಿದ್ರೋ, ಆ ಬಳಿಕ ವಿರಾಟ್ ಆ ಕೆಲಸವನ್ನ ನಿಭಾಯಿಸ್ತಿದ್ದಾರೆ. ವಿರಾಟ್ ಆಡಿದ್ರೆ ಮಾತ್ರ ಗೆಲುವು ಎಂಬಷ್ಟರ ಮಟ್ಟಿಗೆ ನಿರೀಕ್ಷೆ ಹುಟ್ಟಿದೆ. ಟೀಮ್ ಇಂಡಿಯಾ ಕಂಪ್ಲೀಟ್ ವಿರಾಟ್ ಮೇಲೆ ಡಿಪೆಂಡ್ ಆಗಿದೆ. ಇದನ್ನ ಸ್ವತಃ ಬಿಸಿಸಿಐ ಮಾಜಿ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ.
‘ಭಾರತ ವಿರಾಟ್ ಮೇಲೆ ಅವಲಂಬಿತ’
ವಿರಾಟ್ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಬಾಂಗ್ಲಾ, ಶ್ರೀಲಂಕಾ ಸೇರಿದಂತೆ ಎಲ್ಲ ದೇಶಗಳ ಎದುರು ಉತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲೇಬೇಕು. ಏಕೆಂದರೆ ಇಂಡಿಯಾ ಸಂಪೂರ್ಣ ವಿರಾಟ್ ಕೊಹ್ಲಿ ಮೇಲೆಯೇ ಅವಲಂಬಿತವಾಗಿದೆ.ಸೌರವ್ ಗಂಗೂಲಿ, ಮಾಜಿ ಬಿಸಿಸಿಐ ಅಧ್ಯಕ್ಷ
ಸೌರವ್ ಗಂಗೂಲಿ ಹೇಳಿರೋ ಮಾತು ಅಕ್ಷರಶಃ ಸತ್ಯ. ಕಳೆದೊಂದು ದಶಕದಿಂದ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ನೀಡಿರುವ ಕೊಡುಗೆಯೆ ಇದಕ್ಕೆ ಸಾಕ್ಷಿಯಾಗಿದೆ. ಬಿಗ್ಸ್ಟೇಜ್ಗಳಲ್ಲಿ, ಹೈ ಪ್ರೆಶರ್ನಲ್ಲಿ ವಿರಾಟ್ ಲೀಲಾಜಾಲವಾಗಿ ಬ್ಯಾಟ್ ಬೀಸಿ ಅದೆಷ್ಟೋ ಪಂದ್ಯಗಳಲ್ಲಿ ಗೆಲುವಿನ ಉಡುಗೊರೆ ನೀಡಿದ್ದಾರೆ.
ಮೂರು ಫಾರ್ಮೆಟ್ನಲ್ಲೂ ಅದ್ಭುತ ಪರ್ಫಾಮೆನ್ಸ್!
ಸದ್ಯ ಕ್ರಿಕೆಟ್ನಲ್ಲಿ ಒಬ್ಬ ಆಟಗಾರ ಒಂದು ಫಾರ್ಮೆಟ್ನ ಸ್ಪೆಷಲಿಸ್ಟ್ ಅನ್ನೋ ಕಾನ್ಸೆಪ್ಟ್ ಇದೆ. ಸಮಕಾಲಿನ ಶ್ರೇಷ್ಠ ಆಟಗಾರರಾದ ಸ್ಟೀವ್ ಸ್ಮಿತ್, ಜೋ ರೂಟ್, ಕೇನ್ ವಿಲಿಯಮ್ಸನ್.. ಇವರೆಲ್ಲರ ಆಟ ಒಂದು ಫಾರ್ಮೆಟ್ಗೆ ಮಾತ್ರ ಸಿಮೀತವಾಗಿದೆ. ಆದ್ರೆ, ಈ ವಿಚಾರದಲ್ಲಿ ಕೊಹ್ಲಿಗೆ ಯಾವುದೇ ಗಡಿಯಿಲ್ಲ. ಟೆಸ್ಟ್, ಏಕದಿನ, ಟಿ20 ಹೀಗೆ ಯಾವುದೇ ಫಾರ್ಮೆಟ್ ಆಗಿರಲಿ ಅಲ್ಲಿ ವಿರಾಟ್ ಧಮ್ ತೋರಿಸ್ತಾರೆ.
ಬಲಾಢ್ಯ ತಂಡಗಳ ಅಂದ್ರೆ ತೊಡೆ ತಟ್ತಾರೆ.!
ಕ್ರಿಕೆಟರ್ಸ್ ಅಂದ್ರೆ, ಬಲಾಢ್ಯ ತಂಡಗಳ ಎದುರು ಮಕಾಡೆ ಮಲಗ್ತಾರೆ. ಆದ್ರೆ, ಈ ವಿಚಾರವನ್ನ ವಿರಾಟ್, ಚಾಲೆಂಜ್ ಆಗಿ ಸ್ವೀಕರಿಸುತ್ತಾರೆ. ಪಿಚ್, ಬೌಲರ್, ಎದುರಾಳಿ ಯಾರೇ ಆಗಿರಲಿ ರಣ ಬೇಟೆಗಾರನಂತೆ ಮುನ್ನುಗ್ಗಿ ಹೊಡೆಯೋ ಖಯಾಲಿ ಕೊಹ್ಲಿಯದ್ದು.
ಕನ್ಸಿಸ್ಟೆನ್ಸಿಯಲ್ಲಿ ಕಿಂಗ್ ಕೊಹ್ಲಿಯೇ ಕಿಂಗ್..!
ಕಳೆದ 13 ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ವಿರಾಟ್ ಕೊಹ್ಲಿಯಂತೆ ಸ್ಥಿರ ಪ್ರದರ್ಶನ ನೀಡಿದ ಮತ್ತೊಬ್ಬ ಆಟಗಾರ ಟೀಮ್ ಇಂಡಿಯಾದಲ್ಲೇ ಅಲ್ಲ, ವಿಶ್ವದಲ್ಲಿ ಸಿಗಲ್ಲ. ಹೀಗಾಗಿಯೇ ವಿರಾಟ್ ವಿಶ್ವ ಸಾಮ್ರಾಟನಾಗಿ ಮೆರೆಯುತ್ತಿರುವುದು. 3 ವರ್ಷಗಳ ಕಾಲ ವಿರಾಟ್, ಸೆಂಚೂರಿ ಲೆಸ್ ಆಗಿದ್ರೂ, ಟಾಪ್ ರನ್ ಸ್ಕೋರರ್ ಲಿಸ್ಟ್ನಲ್ಲಿ ಹೆಸರು ರಾರಾಜಿಸುತ್ತಿತ್ತು.
ಕೊಹ್ಲಿಗೆ ಕಂಡೀಷನ್ ಅಪ್ಲೈ ಆಗಲ್ಲ.!
ಇಂಡಿಯಾ ಆಟಗಾರರು ಸ್ವದೇಶದಲ್ಲಿ ಹುಲಿಗಳು, ವಿದೇಶದಲ್ಲಿ ಇಲಿಗಳು ಅನ್ನೋ ಮಾತಿದೆ. ಪೇಪರ್ ಮೇಲಿನ ಹುಲಿಗಳು ಅಂತಾನೂ ಕರೆಯೋದೂ ಉಂಟು. ಆದ್ರೆ, ವಿರಾಟ್ ಕೊಹ್ಲಿ ಇದಕ್ಕೆ ವ್ಯತಿರಿಕ್ತ. ದೇಶ, ವಿದೇಶ ಎನ್ನದೆ ಬ್ಯಾಟ್ ಝಳಪಿಸಿದ್ದಾರೆ. ಇಂಗ್ಲೆಂಡ್, ಆಸಿಸ್ನಂತಹ ಟಫ್ ಕಂಡೀಷನ್ಸ್ನಲ್ಲಿ ಸಿಡಲಿಮರಿಯಂತೆ ಸಿಡಿದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್. ವಿರಾಟ್ ಕೊಹ್ಲಿ ವಿದೇಶದಲ್ಲಿ ಸಿಡಿಸಿರೋ 10,753 ರನ್ ಹಾಗೂ 35 ಶತಕಗಳು.
ಈಗಲೂ ಟೀಮ್ ವಿರಾಟ್ ಕೊಹ್ಲಿ ಮೇಲೆ ಡಿಪೆಂಡ್ ಆಗೇ ಇದೆ. ಇದಕ್ಕೆ ಕಳೆದ ವರ್ಷ ಮುಕ್ತಾಯವಾದ ವಿಶ್ವಕಪ್ ಟೂರ್ನಿಯೇ ಬೆಸ್ಟ್ ಎಕ್ಸಾಂಪಲ್. ಅದ್ರಲ್ಲೂ ಪಾಕ್ ವಿರುದ್ಧ ಕೊಹ್ಲಿ ಆಡದೇ ಇದ್ದಿದ್ರೆ, ಇಂಡಿಯಾ ಹೀನಾಯ ಸೋಲಿಗೆ ಶರಣಾಗ್ತಿತ್ತು. ಇದೆಲ್ಲದರ ಹೊರತಾಗಿ ಸದ್ಯ ಕೊಹ್ಲಿಯ ಸ್ಥಾನಕ್ಕೇ ಬಂದಿರೋದು ಸುಳ್ಳಲ್ಲ. ಇಂಡೀಸ್ ಸರಣಿಯಲ್ಲಿ ಕೊಹ್ಲಿ ಪರ್ಫಾಮ್ ಮಾಡಲಿ. ಸ್ಥಾನ ಭದ್ರಪಡಿಸಿಕೊಳ್ಳಲಿ ಅನ್ನೋದೆ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ