ಯೋಗ ಕಲಿಸಿಕೊಡ್ತೀನಿ ಎಂದು ಮಾಡಬಾರದ ಮಾಡಿದ; ಯೋಗ ಗುರುಗೆ 23 ತಿಂಗಳ ಜೈಲು ಶಿಕ್ಷೆ

author-image
Ganesh
Updated On
ನಿತ್ಯ ಸಾಯಂಕಾಲ ಈ ವ್ಯಾಯಾಮಗಳನ್ನು ಮಾಡುವ ರೂಢಿ ಇಟ್ಟುಕೊಳ್ಳಿ, ತೂಕವನ್ನು ಕಳೆದುಕೊಳ್ಳಿ
Advertisment
  • ಭಾರತೀಯ ಮೂಲದ ಯೋಗ ಗುರುಗೆ ಜೈಲು ಶಿಕ್ಷೆ
  • ಸಿಂಗಾಪುರ ಕೋರ್ಟ್​ನಿಂದ ಮಹತ್ವದ ತೀರ್ಪು ಪ್ರಕಟ
  • ಯೋಗ ಗುರುವಾಗಿ ಕೆಲಸಕ್ಕೆ ಸೇರಿಕೊಂಡಿದ್ದ ರಾಜ್​ಪಾಲ್ ಸಿಂಗ್

ಮೂವರು ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಮೂಲದ ಯೋಗ ಗುರುಗೆ ಸಿಂಗಾಪುರ ಕೋರ್ಟ್​​ ಜೈಲು ಶಿಕ್ಷೆ ವಿಧಿಸಿದೆ. ರಾಜ್​ಪಾಲ್ ಸಿಂಗ್ (35) ಶಿಕ್ಷೆಗೆ ಗುರಿಯಾದ ಯೋಗ ಗುರು.

ರಾಜ್​ಪಾಲ್ ಸಿಂಗ್​​ನನ್ನು 23 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಿದೆ. ಇವರು ಸಿಂಗಾಪುರದ ತೆಲೋಕ್ ಅಯೇರ್​​ ಸ್ಟ್ರೀಟ್​ನಲ್ಲಿರುವ Trust Yogaದಲ್ಲಿ ಯೋಗ ಗುರುವಾಗಿ ಸೇರಿಕೊಂಡಿದ್ದರು. ಯೋಗ ಕ್ಲಾಸ್ ಮಾಡುವ ವೇಳೆ ಮಹಿಳೆಯರಿಗೆ ದೈಹಿಕ ಹಿಂಸೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ಅಲ್ಲಿಂದ ಅವರನ್ನು ಕಿಕ್​​ಔಟ್ ಮಾಡಲಾಗಿತ್ತು.

ಅವರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಕಿರುಕುಳ ನೀಡಿದ ಆರೋಪ ಮಾಡಿದ್ದರು. ವಿಚಾರಣೆ ವೇಳೆ ಯೋಗ ಹೆಸರಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರೋದನ್ನು ಕೋರ್ಟ್​ ಗಮನಿಸಿ, 23 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ:3ನೇ ಇನ್ನಿಂಗ್ಸ್​​​ನಲ್ಲೇ ತ್ರಿಶತಕ.. ಆಮೇಲೆ ಡೋರ್​ ಕ್ಲೋಸ್.. ಕನ್ನಡಿಗನಿಗೆ ಅವಕಾಶ ನೀಡದೇ ಬಿಸಿಸಿಐ ಮೋಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment