ಮತ್ತೆ ಟೆಸ್ಟ್ ಆಡುವುದೇ ಕನ್ನಡಿಗನ ಏಕೈಕ ಗುರಿ ಆಗಿದೆ
ರಣಜಿ, ಕೌಂಟಿಯಲ್ಲೂ ಕರುಣ್, ರನ್ ಭರಾಟೆ ಜೋರಾಗಿದೆ
32 ವರ್ಷದ ಕನ್ನಡದ ಈ ಪ್ರತಿಭೆಗೆ ಕಮ್ಬ್ಯಾಕ್ ಸುಲಭನಾ..?
ಕರುಣ್ ನಾಯರ್.. ಈತನ ಪ್ರತಿಭೆಗೆ ತಕ್ಕ ಅವಕಾಶ ಸಿಕ್ಕಿದ್ರೆ, ಇವತ್ತು ಟೆಸ್ಟ್ ತಂಡದ ಮತ್ತೊಬ್ಬ ವಾಲ್ ಆಗಿ ಬೆಳೆದು ನಿಲ್ಲುತ್ತಿದ್ದ. ಆದ್ರೆ, ದುರಾದೃಷ್ಟವಶಾತ್ ಅದು ಆಗಲಿಲ್ಲ. ಇದಕ್ಕೆ ಕಾರಣ ಹಲವು. ಆದ್ರೀಗ ಇದೇ ಕರುಣ್ ನಾಯರ್, ರೀ ಕಮ್ಬ್ಯಾಕ್ ಶಪಥ ಮಾಡಿದ್ದಾರೆ.
7 ವರ್ಷಗಳಾದರೂ ಬಿಟ್ಟಿಲ್ಲ ಮತ್ತೆ ಆಡುವ ಕನಸು.
ಕರುಣ್ ನಾಯರ್, ಟೀಮ್ ಇಂಡಿಯಾ ಕಂಡ ನತದೃಷ್ಟ ಆಟಗಾರ. ವಿಶ್ವ ಕ್ರಿಕೆಟ್ನಲ್ಲೇ ಹೆಚ್ಚು ಅನ್ಯಾಯಕ್ಕೊಳಗಾದವರು ಯಾರಾದ್ರೂ ಇದ್ರೆ, ಅದು ಒನ್ ಆ್ಯಂಡ್ ಒನ್ಲಿ ಕರ್ನಾಟಕದ ಕುವರ ಕರುಣ್ ನಾಯರ್. ಟೆಸ್ಟ್ನಲ್ಲಿ ತ್ರಿಶತಕ ಸಿಡಿಸಿದ 2ನೇ ಭಾರತೀಯ ಎಂಬ ಸಾಧನೆ ಮಾಡಿದ್ದ ಈ ಕರುಣ್, ಕೆಲವೇ ವರ್ಷಗಳಲ್ಲಿ ಡಿಯರ್ ಟೆಸ್ಟ್ ಕ್ರಿಕೆಟ್ ಗಿವ್ ಮಿ ಒನ್ ಮೋರ್ ಚಾನ್ಸ್ ಎಂದು ಅಂಗಲಾಚಿದ್ರು.
ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!
ಟೀಮ್ ಇಂಡಿಯಾಗೆ ಡೆಬ್ಯು ಮಾಡಿ ಮೂರನೇ ಇನ್ನಿಂಗ್ಸ್ನಲ್ಲೇ ತ್ರಿಶತಕ ಸಿಡಿಸಿದ್ರು ಕರುಣ್ ನಾಯರ್. ದಿಗ್ಗಜ ಕ್ರಿಕೆಟರ್ಗಳೇ ಮಾಡದ ಸಾಧನೆಯನ್ನ ಮಾಡಿ ತೋರಿಸಿದ್ದ ಕರುಣ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿತ್ತು. ಟೀಮ್ ಇಂಡಿಯಾದ ಖಾಯಂ ಸ್ಥಾನ ಫಿಕ್ಸ್ ಅನ್ನೋದು ಭರವಸೆ ಇತ್ತು. ತ್ರಿಶತಕ ವೀರ ನಂತರ ಆಡಿದ್ದ ಜಸ್ಟ್ ನಾಲ್ಕೇ ನಾಲ್ಕು ಇನ್ನಿಂಗ್ಸ್. ಈ ನಾಲ್ಕು ಇನ್ನಿಂಗ್ಸ್ಗಳಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡದ ಬೆನ್ನಲ್ಲೇ ಟೀಮ್ ಇಂಡಿಯಾದ ಡೋರ್ ಕೂಡ ಕ್ಲೋಸ್ ಆಯ್ತು. ಇದಾಗಿ ಈಗ 7 ವರ್ಷಗಳೇ ಕಳೆದಿವೆ. ಆದ್ರೀಗ ಮತ್ತೆ ಕಮ್ಬ್ಯಾಕ್ ಕನಸು ಕಾಣ್ತಿದ್ದಾರೆ. ಟೀಮ್ ಇಂಡಿಯಾವನ್ನ ಪ್ರತಿನಿಧಿಸಲೇಬೇಕೆಂಬ ಪಣ ತೊಟ್ಟಿದ್ದಾರೆ.
ಪ್ರತಿಯೊಬ್ಬರೂ ತಮ್ಮ ದೇಶವನ್ನ ಪ್ರತಿನಿಧಿಸಿ ಆಡಲು ಆಡುತ್ತಾರೆ. ನನ್ನ ಏಕೈಕ ಗುರಿಯೂ ಟೀಮ್ ಇಂಡಿಯಾವನ್ನ ಪ್ರತಿನಿಧಿಸುವುದಾಗಿದೆ. ಮತ್ತೆ ಟೆಸ್ಟ್ ಕ್ರಿಕೆಟ್ ಆಡಬೇಕಿದೆ. ಮತ್ತೆ ಭಾರತ ತಂಡವನ್ನ ಪ್ರತಿನಿಧಿಸುವ ವಿಶ್ವಾಸ ಇದೆ. ನಾನು ಈ ಹಿಂದಿಗಿಂತಲೂ ಉತ್ತಮವಾಗಿದ್ದೇನೆ-ಕರುಣ್ ನಾಯರ್, ಕ್ರಿಕೆಟರ್
ಕರುಣ್ ಟೀಮ್ ಇಂಡಿಯಾ ಪರ ಕೊನೆ ಪಂದ್ಯವನ್ನಾಡಿ 7 ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳ ಟೀಮ್ ಇಂಡಿಯಾದಿಂದ ಹೊರಗಿರುವ ಕರುಣ್ ನಾಯರ್, ಮತ್ತೆ ಕಮ್ಬ್ಯಾಕ್ ಕನಸು ಕಾಣ್ತಿದ್ದಾರೆ. ಕನ್ನಡಿಗ ಕೇವಲ ಕನಸನ್ನ ಮಾತ್ರವೇ ಕಾಣ್ತಿಲ್ಲ. ಇದಕ್ಕೆ ಬೇಕಾದ ಕಠಿಣ ಶ್ರಮದ ಜೊತೆ ನೂರರಷ್ಟು ಎಫರ್ಟ್ ಕೂಡ ಹಾಕ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಮಹಾರಾಜ ಟ್ರೋಫಿ.
ಇದನ್ನೂ ಓದಿ:ಸ್ಟಾರ್ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
ಮಹಾರಾಜ ಟ್ರೋಫಿಯಲ್ಲಿ ರನ್ ‘ರಾಜ’ಕರಣ್
ಮಹಾರಾಜ ಟ್ರೋಫಿಯಲ್ಲಿ ಆಕ್ಷರಶಃ ಕರುಣ್ ನಾಯರ್ ಕಮಾಲ್ ಮಾಡ್ತಿದ್ದಾರೆ. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಮೂಲಕ ಗಮನ ಸೆಳೆಯುತ್ತಿರುವ ಕರುಣ್, ಪಂದ್ಯದಿಂದ ಪಂದ್ಯಕ್ಕೆ ಮತ್ತಷ್ಟು ಶೈನ್ ಆಗ್ತಿದ್ದಾರೆ. ಮೈಸೂರು ವಾರಿಯರ್ಸ್ ತಂಡದ ವಾರಿಯರ್ ಆಗಿದ್ದಾರೆ. ಈ ಸ್ಟ್ರೈಕ್ರೇಟ್ ನೋಡಿದ್ರೆ ಗೋತ್ತಾಗುತ್ತೆ. ಟಿ20ಯಲ್ಲಿ ಈ ಹಿಂದೆಂದೂ ನೋಡದ ಬ್ಯಾಟಿಂಗ್ ಝಲಕ್, ಕರುಣ್ ಬ್ಯಾಟ್ನಿಂದ ಬರ್ತಿದೆ ಅನ್ನೋದು.
ಮಹಾರಾಜ ಟೂರ್ನಿಯಲ್ಲಿ ಕರುಣ್
ಮಹಾರಾಜ ಟ್ರೋಫಿಯಲ್ಲಿ ಆಡಿದ 10 ಪಂದ್ಯಗಳಿಂದ 490 ರನ್ ಸಿಡಿಸಿರುವ ಕರುಣ್, 1 ಶತಕ, 4 ಅರ್ಧಶತಕ ಸಿಡಿಸಿದ್ದಾರೆ. 187.73ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಕಮ್ಬ್ಯಾಕ್ಗಾಗಿ ಕರುಣ್ ನಾನಾ ಕಸರತ್ತು
2017ರಲ್ಲಿ ಟೀಮ್ ಇಂಡಿಯಾದಿಂದ ಹೊರ ಬಿದ್ದ ನಾಯರ್, ರಾಜ್ಯ ತಂಡದ ಪರವೂ ಅಸ್ಥಿರ ಪ್ರದರ್ಶನ ನೀಡಿದ್ರು. ಇದೇ ಕಾರಣಕ್ಕೆ ರಾಜ್ಯ ತಂಡದಿಂದಲೂ ಕೈಬಿಡಲಾಯ್ತು. ಪರಿಣಾಮ ಕಳೆದ ರಣಜಿ ಸೀಸನ್ನಲ್ಲಿ ವಿದರ್ಭ ಪರ ಕಣಕ್ಕಿಳಿದ ಕರುಣ್ ನಾಯರ್, ರನ್ ಪ್ರವಾಹವನ್ನೇ ಹರಿಸಿದರು. ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ ವಿರುದ್ಧವೇ ಅದ್ಭುತ ಆಟವಾಡಿದ್ರು. ಈ ಮೂಲಕ ಕರುಣ್ ನಾಯರ್, ಕಡೆಗಣಿಸಿದ್ದ ರಾಜ್ಯ ತಂಡಕ್ಕೆ ತಾನೇನು ಅನ್ನೋದನ್ನ ಫ್ರೂವ್ ಮಾಡಿದ್ರು.
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
2023-24ರ ರಣಜಿ ಟೂರ್ನಿಯಲ್ಲಿ ಕರುಣ್
2023-24ರ ರಣಜಿಯಲ್ಲಿ 10 ಪಂದ್ಯಗಳನ್ನಾಡಿದ ಕರುಣ್, 40.58ರ ಬ್ಯಾಟಿಂಗ್ ಸರಾಸರಿಯಲ್ಲಿ 690 ರನ್ ಸಿಡಿಸಿದ್ದರು. 2 ಶತಕ, 3 ಅರ್ಧಶತಕ ದಾಖಲಿಸಿದ್ದ ಕರುಣ್, ವಿದರ್ಭ ಪರ ಟಾಪ್ ಸ್ಕೋರರ್ ಆಗಿ ಮರೆದಾಡಿದ್ದರು. ಕರುಣ್ ರನ್ ಪ್ರವಾಹ ಇಲ್ಲಿಗೆ ನಿಲ್ಲಲಿಲ್ಲ. ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್ಗೆ ತೆರಳಿದ ಕನ್ನಡಿಗ ನಾರ್ಥಾಂಪ್ಟನ್‌ಶೈರ್ ಪರ 2023 ಹಾಗೂ 2024ರ ಎರಡೂ ಸೀಸನ್ಗಳಲ್ಲೂ ರನ್ ಮಳೆ ಹರಿಸಿದರು.
ಕೌಂಟಿಯಲ್ಲಿ ಕರುಣ್ ನಾಯರ್ ಬ್ಯಾಟಿಂಗ್
2023ರ ಸೀಸನ್ನಲ್ಲಿ ಕೇವಲ 3 ಪಂದ್ಯಗಳನ್ನಾಡಿದ ಕರುಣ್ ನಾಯರ್, 83ರ ಸರಾಸರಿಯಲ್ಲಿ 249 ರನ್ ಕಲೆಹಾಕಿದ್ರೆ. ತಲಾ 1 ಶತಕ, 1 ಅರ್ಧಶತಕ ಸಿಡಿಸಿದ್ರು. ಈ ವರ್ಷವೂ ಅದೇ ಫಾರ್ಮ್ ಮುಂದುವರಿಸಿದ ಕರುಣ್ , 7 ಪಂದ್ಯಗಳಿಂದ 49ರ ಸರಾಸರಿಯಲ್ಲಿ 487 ರನ್ ಕಲೆಹಾಕಿದ್ದರು. ಈ ಪೈಕಿ 1 ಶತಕ, 3 ಅರ್ಧಶತಕಗಳಿವೆ. ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡಿ ಬಂದ ಕರುಣ್, ಈಗ ಮಹಾರಾಜದಲ್ಲೂ ಮಹಾ ರಾಜನ ಆಟವಾಡ್ತಿದ್ದಾರೆ. ನಾಯಕನಾಗಿ ತಂಡವನ್ನು ಗೆಲುವಿನ ದಡ ಸೇರಿಸ್ತಿದ್ದಾರೆ. ಉತ್ತಮ ಆಟವಾಡ್ತಿದ್ರೂ, 32 ವರ್ಷದ ಕನ್ನಡಿಗನ ಕಮ್ಬ್ಯಾಕ್ ಅಷ್ಟು ಸುಲಭವಾ ಅನ್ನೋ ಪ್ರಶ್ನೆಯಿದೆ. ಅದಕ್ಕೆ ನಮ್ಮ ಉತ್ತರ ಹೌದು ಅನ್ನೋದೇ ಆಗಿದೆ. ಯಾಕಂದ್ರೆ 37 ವರ್ಷದ ರೋಹಿತ್, 35 ವರ್ಷದ ವಿರಾಟ್ ಕೊಹ್ಲಿಯೇ ತಂಡದಲ್ಲಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ ಮಿಡಲ್ ಆರ್ಡರ್ಗೆ ಬಲ ತುಂಬುವ ಕೆಪಾಸಿಟಿ ಕರುಣ್ ನಾಯರ್ಗೆ ಇದೆ. ಹೀಗಾಗಿ ಇದೇ ಲಯ ಮುಂದುವರಿಸಿದ್ರೆ ಕಮ್ಬ್ಯಾಕ್ ಕಷ್ಟವೇನಲ್ಲ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್