newsfirstkannada.com

BREAKING: 52, 53, 54 ಅಲ್ಲ.. ಇಂದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಗರಿಷ್ಠ ಉಷ್ಣಾಂಶ ದಾಖಲು

Share :

Published May 31, 2024 at 2:27pm

Update May 31, 2024 at 2:34pm

    ಬಿಸಿ​ ಉಷ್ಣಾಂಶ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಏನು?

    ದೆಹಲಿ, ಬಿಹಾರ​, ಒಡಿಶಾ ಸೇರಿ ಹಲವು ಕಡೆ ದಾಖಲೆಯ ಉಷ್ಣಾಂಶ

    ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿಗೆ ಹೈರಾಣಾದ ಜನರು

ನವದೆಹಲಿ: ದೇಶದಲ್ಲಿ ದಿನೇ ದಿನೇ ಸೂರ್ಯನ ತಾಪಮಾನ, ಉಷ್ಣಾಂಶ ದಾಖಲೆ ಏರುತ್ತಿದೆ. ಮೊನ್ನೆ ದೆಹಲಿಯ ಮುಂಗೇಶ್‌ಪುರದಲ್ಲಿ 52.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ದೇಶದ ಇತಿಹಾಸದಲ್ಲೇ ಇದೇ ಅತಿ ಹೆಚ್ಚಾಗಿತ್ತು. ಇಂದು ಈ ದಾಖಲೆಯನ್ನು ಸೂರ್ಯನ ಶಾಖ ಸರಿಗಟ್ಟಿದೆ.

ಇಂದು ಮಹಾರಾಷ್ಟ್ರದ ನಾಗಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಭಾರತದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಗರಿಷ್ಠ ಉಷ್ಣಾಂಶವಾಗಿದೆ. ಬೇಸಿಗೆಯ ಬಿರು ಬಿಸಿಲು, ಗರಿಷ್ಠ ಉಷ್ಣಾಂಶದಿಂದ ಉತ್ತರ ಭಾರತದ ಜನ ತತ್ತರಿಸಿ ಹೋಗುತ್ತಿದ್ದಾರೆ.

ಮೇ ತಿಂಗಳು ಮುಕ್ತಾಯಗೊಂಡು ಜೂನ್‌ ತಿಂಗಳು ಆರಂಭವಾಗುವ ಮೊದಲೇ 54 ಮಂದಿ ಬಿರು ಬಿಸಿಲಿಗೆ ಬಲಿಯಾಗಿದ್ದಾರೆ. ಈಗಾಗಲೇ ಹಲವು ರಾಜ್ಯಗಲ್ಲಿ ಮುಂಗಾರು ಅವಧಿಗೂ ಮುನ್ನವೇ ಮಳೆರಾಯನ ಆರ್ಭಟ ಜೋರಾಗಿದೆ. ಆದರೆ ದೆಹಲಿ, ಬಿಹಾರ್​, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ ಸೇರಿ ಹಲವು ಕಡೆಗಳಲ್ಲಿ ಬಿಸಿಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ಬಿಸಿಲಿನ ಹೊಡೆತಕ್ಕೆ ಒಟ್ಟು 54 ಮಂದಿ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಬಿರು ಬಿಸಿಲಿನ ಶಾಪ.. ದೇಹದ ಉಷ್ಣತೆಯ ತೀವ್ರತೆ 108°Fಗೆ ತಲುಪಿ ಸಾವು

ಹೌದು, ದೆಹಲಿ, ಬಿಹಾರ್​, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಓರಿಸ್ಸಾ ಕಡೆಗಳಲ್ಲಿ ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗಿತ್ತಿದೆ. ದಾಖಲೆಯ ಉಷ್ಣಾಂಶಕ್ಕೆ ಹೀಟ್ ಸ್ಟ್ರೋಕ್​​ನಿಂದ ಸಾಕಷ್ಟು ಮಂದಿ ಉಸಿರು ಚೆಲ್ಲುತ್ತಿದ್ದಾರೆ. ಇನ್ನು, ಒರಿಸ್ಸಾದ ರೂರ್ಕೆಲಾದಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ ಹೀಟ್ ಸ್ಟ್ರೋಕ್​ನಿಂದ 10 ಮಂದಿ ಸಾವನ್ನಪ್ಪಿದ್ದಾರೆ. ಜನರ ದೇಹದಲ್ಲಿ 103 ಡಿಗ್ರಿಯಿಂದ 104 ಡಿಗ್ರಿ ಫ್ಯಾರನ್ ಹೀಟ್‌ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ಹೀಟ್​ ಸ್ಚ್ರೋಕ್​ನಿಂದಲೇ 10 ಮಂದಿ ಸಾವನ್ನಪ್ಪುತ್ತಿದ್ದಾರೆ.

ಅದರಲ್ಲೂ ಸರ್ಕಾರಿ ಆಸ್ಪತ್ರೆಗೆ ಬರುವ ಮುನ್ನವೇ 6 ಮಂದಿ ಸಾವನ್ನಪ್ಪಿದ್ದು, ಇನ್ನು ನಾಲ್ವರ ಆಸ್ಪತ್ರೆಗೆ ದಾಖಲಾದ ಬಳಿ ಮೃತಪಟ್ಟಿದ್ದಾರೆ ಎಂದ ವೈದ್ಯರು ತಿಳಿಸುತ್ತಿದ್ದಾರೆ. ಇನ್ನು, ಬಿಹಾರದಲ್ಲಿ 32 ಜನರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ 17 ಮಂದಿ ಔರಂಗಾಬಾದ್‌ನಲ್ಲಿ, ಆರು ಅರ್ರಾಹ್, ಗಯಾ ಮತ್ತು ರೋಹ್ತಾಸ್‌ನಲ್ಲಿ ತಲಾ ಮೂವರು, ಬಕ್ಸರ್‌ನಲ್ಲಿ ಇಬ್ಬರು ಮತ್ತು ಪಾಟ್ನಾದಲ್ಲಿ ಒಬ್ಬರು. ಜಾರ್ಖಂಡ್‌ನ ಪಲಮು ಮತ್ತು ರಾಜಸ್ಥಾನದಲ್ಲಿ ತಲಾ ಐವರು ಸಾವನ್ನಪ್ಪಿದ್ದರೆ, ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಇದಕ್ಕೂ ಮುನ್ನ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬಿಹಾರ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ದೇಹದಲ್ಲಿ ಅತಿಯಾದ ಉಷ್ಣಾಂಶ ಮತ್ತಷ್ಟು ಹದಗೆಡಿಸಿತ್ತು. ಅವರ ದೆಹದಲ್ಲಿ ಜ್ವರದ ತೀವ್ರತೆಯು 108 ಟೆಂಪ್ರೆಚರ್​​ಗೆ ತಲುಪಿ ಸಾವನ್ನಪ್ಪಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಬಿಸಿಗಾಳಿಯಿಂದ ಜನ ಹೈರಾಣಾಗಿದ್ದಾರೆ.

ಇಂದು ಎಲ್ಲೆಲ್ಲಿ ಎಷ್ಟು ಡಿಗ್ರಿ ಸೆಲ್ಸಿಯಸ್ ದಾಖಲು? 

ದೆಹಲಿ: 42 ಡಿಗ್ರಿ ಸೆಲ್ಸಿಯಸ್
ಒರಿಸ್ಸಾ: 34 ಡಿಗ್ರಿ ಸೆಲ್ಸಿಯಸ್
ನೊಯ್ಡಾ: 43 ಡಿಗ್ರಿ ಸೆಲ್ಸಿಯಸ್
ರಾಜಸ್ಥಾನ: 42 ಡಿಗ್ರಿ ಸೆಲ್ಸಿಯಸ್
ಮಧ್ಯ ಪ್ರದೇಶ​: 38 ಡಿಗ್ರಿ ಸೆಲ್ಸಿಯಸ್
ಹರಿಯಾಣ: 43 ಡಿಗ್ರಿ ಸೆಲ್ಸಿಯಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: 52, 53, 54 ಅಲ್ಲ.. ಇಂದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಗರಿಷ್ಠ ಉಷ್ಣಾಂಶ ದಾಖಲು

https://newsfirstlive.com/wp-content/uploads/2024/05/heat-wave.jpg

Load More