Advertisment

ಅಬ್ಬಬ್ಬಾ! ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ; ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?

author-image
admin
Updated On
ಅಬ್ಬಬ್ಬಾ! ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ; ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
Advertisment
  • ಗುಂಟೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಶ್ರೀಮಂತ ಅಭ್ಯರ್ಥಿ
  • TDP, ಜನಸೇನಾ, BJP ಮೈತ್ರಿ ಪಕ್ಷದ ಅಭ್ಯರ್ಥಿ ಪೆಮ್ಮಸಾನಿ ಚಂದ್ರಶೇಖರ್
  • ಶ್ರೀಮಂತ ಅಭ್ಯರ್ಥಿಗಳ ರೆಕಾರ್ಡ್ ಬ್ರೇಕ್ ಮಾಡಿದ ಡಾಕ್ಟರ್ ಯಾರು ಗೊತ್ತಾ?

ಗುಂಟೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಒಬ್ಬ ಅಭ್ಯರ್ಥಿ ಇವತ್ತು ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ. ಸಾಮಾನ್ಯವಾಗಿ ಓರ್ವ ಚುನಾವಣಾ ಅಭ್ಯರ್ಥಿಯ ಆಸ್ತಿ ಕೋಟಿ ರೂಪಾಯಿ ಎಷ್ಟಿರಬಹುದು. 100, 500 ಕೋಟಿ ಅಥವಾ 1000 ಕೋಟಿ ರೂಪಾಯಿ ದಾಟಿರೋದನ್ನ ನಾವು ನೀವು ಕೇಳಿದ್ದೇವೆ. ಆದ್ರೆ ಇವತ್ತು ಆಂಧ್ರಪ್ರದೇಶದ ಚುನಾವಣಾ ಅಭ್ಯರ್ಥಿ ಎಲ್ಲರ ರೆಕಾರ್ಡ್‌ ಅನ್ನು ಬ್ರೇಕ್ ಮಾಡಿದ್ದಾರೆ. ಇವರ ಆಸ್ತಿ ಲೆಕ್ಕ ನೋಡಿ ಇಡೀ ದೇಶವೇ ಬೆರಗಾಗುವಂತೆ ಮಾಡಿದ್ದಾರೆ.

Advertisment

ಆಂಧ್ರ ಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಇವರು ಈಗ ಇಡೀ ದೇಶದಲ್ಲೇ ಶ್ರೀಮಂತ ಅಭ್ಯರ್ಥಿ. ಇವರ ಹೆಸರು ಪೆಮ್ಮಸಾನಿ ಚಂದ್ರಶೇಖರ್. ಪೆಮ್ಮಸಾನಿ ಚಂದ್ರಶೇಖರ್ TDP, ಜನಸೇನಾ, BJP ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಸುವ ಜೊತೆಗೆ ಪೆಮ್ಮಸಾನಿ ಚಂದ್ರಶೇಖರ್ ಅವರು ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಗುಂಟೂರು TDP ಪಕ್ಷದ ಅಭ್ಯರ್ಥಿ ಈಗ ಇಡೀ ದೇಶದಲ್ಲಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

publive-image

ಇದನ್ನೂ ಓದಿ: Lok Sabha Election: ಮೊದಲ ಹಂತದ ಚುನಾವಣೆ.. ಅತಿ ಶ್ರೀಮಂತ ಅಭ್ಯರ್ಥಿ ಯಾರು? ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಗುಂಟೂರು ಲೋಕಸಭಾ ಚುನಾವಣಾ ಅಭ್ಯರ್ಥಿ ಪೆಮ್ಮಸಾನಿ ಚಂದ್ರಶೇಖರ್ ಅವರು ಬರೋಬ್ಬರಿ 5,785.28 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ಚರಾಸ್ತಿ 186.63 ಕೋಟಿ, ಸ್ಥಿರ ಆಸ್ತಿ 1,038 ಕೋಟಿ ರೂಪಾಯಿ ಆಗಿದೆ. ಪೆಮ್ಮಸಾನಿ ದಂಪತಿಯು ವಿಶ್ವದಾದ್ಯಂತ 101ಕ್ಕೂ ಹೆಚ್ಚು ಕಂಪನಿಗಳಲ್ಲಿ ಜಂಟಿ ಷೇರುಗಳನ್ನು ಹೊಂದಿದ್ದಾರೆ.

Advertisment

ಇದುವರೆಗೂ ಭಾರತದಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಯ ಆಸ್ತಿ 1,107 ಕೋಟಿ ರೂಪಾಯಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿತ್ತು. 2019ರ ಚುನಾವಣೆಯಲ್ಲಿ ರಮೇಶ್ ಕುಮಾರ್ ಶರ್ಮಾ ಎಂಬ ಪಕ್ಷೇತರ ಅಭ್ಯರ್ಥಿ 1,107 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಆದ್ರೀಗ ಪೆಮ್ಮಸಾನಿ ಚಂದ್ರಶೇಖರ್ ಅವರು ರಮೇಶ್ ಕುಮಾರ್ ಶರ್ಮಾ ಅವರಿಗಿಂತ 5 ಪಟ್ಟು ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

publive-image

ರೆಕಾರ್ಡ್ ಬ್ರೇಕ್ ಮಾಡಿದ ಡಾಕ್ಟರ್ ಯಾರು?

ಪೆಮ್ಮಸಾನಿ ಚಂದ್ರಶೇಖರ್ ಅವರು ಆಂಧ್ರ ಪ್ರದೇಶದ ತೆನಾಲಿ ಕ್ಷೇತ್ರದ ಬುರ್ರಿಪಾಲೆಂ ಗ್ರಾಮದವರು. ನರಸರಾವ್ ಪೇಟೆಯಲ್ಲಿ ಹೈಸ್ಕೂಲ್‌ ಓದಿದ್ದಾರೆ. ಹೈದರಾಬಾದ್‌ನ ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ MBBS ಮಾಡಿದ ಪೆಮ್ಮಸಾನಿ ಚಂದ್ರಶೇಖರ್ ಅಮೆರಿಕಾದಲ್ಲಿ ಅನಿವಾಸಿ ಭಾರತೀಯ (NRI) ಡಾಕ್ಟರ್ ಆಗಿದ್ದವರು. ಈಗ ಉದ್ಯಮಿಯಾಗಿ ಬದಲಾಗಿದ್ದಾರೆ.

ಪೆಮ್ಮಸಾನಿ ಚಂದ್ರಶೇಖರ್ ಹಲವು ಚಾರಿಟಿ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಪೆಮ್ಮಸಾನಿ ಚಂದ್ರಶೇಖರ್ ಅವರು ತೆಲುಗು ದೇಶಂ ಪಕ್ಷದ ಕಟ್ಟಾ ಬೆಂಬಲಿಗರು. ಇದೀಗ ಟಿಡಿಪಿ ಪಕ್ಷದಿಂದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment