/newsfirstlive-kannada/media/post_attachments/wp-content/uploads/2024/06/team-india-2.jpg)
ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತದ ಪಂದ್ಯಗಳು ಜೂನ್ 19 ರಿಂದ ಆರಂಭವಾಗಲಿದೆ. ಅಂದರೆ ನಾಡಿದ್ದಿಂದ ರಣ ರೋಚಕ ಪಂದ್ಯಗಳನ್ನು ವೀಕ್ಷಣ ಮಾಡಬಹುದಾಗಿದೆ. ಜೂನ್ 24 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ.
ಸೂಪರ್ 8 ಪಂದ್ಯಗಳು
ಸೂಪರ್ 8 ಸೆಣಸಾಟವು 8 ತಂಡಗಳ ನಡುವೆ ನಡೆಯಲಿದೆ. ಎರಡು ಗುಂಪುಗಳಾಗಿ ವಿಂಗಡಿಸಿದ್ದು, ಅದರಲ್ಲಿ ತಲಾ ನಾಲ್ಕು ತಂಡಗಳು ಇರಲಿವೆ. ಇದರಲ್ಲಿ ಗೆದ್ದ ಎರಡು ತಂಡಗಳು ಸೆಮಿಫೈನಲ್ಗೆ ಎಂಟ್ರಿ ನೀಡಲಿವೆ.
ಇದನ್ನೂ ಓದಿ:ದರ್ಶನ್ಗೆ ಪವಿತ್ರಾ ಗೌಡ ಪ್ರೀತಿಯಿಂದ ಏನೆಂದು ಕರೀತಾರೆ.. ಈ ನಟಿಯ ಹಿನ್ನೆಲೆ ಏನು ಗೊತ್ತಾ..?
Super 8 Groups
- ಗ್ರೂಪ್ 1: ಇಂಡಿಯಾ (A1), ಆಸ್ಟ್ರೇಲಿಯಾ (B2), ಅಪ್ಘಾನಿಸ್ತಾನ್ (C1), ಬಾಂಗ್ಲದೇಶ (D2)
- ಗ್ರೂಪ್ 2: ಯುಎಸ್ಎ (A2), ಇಂಗ್ಲೆಂಡ್ (B1), ವೆಸ್ಟ್ ವಿಂಡೀಸ್ (C2), ದಕ್ಷಿಣ ಆಫ್ರಿಕಾ (D1)
ಭಾರತದ ಪಂದ್ಯ ಯಾವಾಗ..?
- ಜೂನ್ 20 ರಂದು ಅಫ್ಘಾನಿಸ್ತಾನದ ವಿರುದ್ಧ (Kensington Oval) ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭ
- ಜೂನ್ 22 ರಂದು ಬಾಂಗ್ಲಾದೇಶ ವಿರುದ್ಧ (Sir Vivian Richards Stadium) ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭ
- ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ (Daren Sammy Cricket Ground) ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭ
ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ