/newsfirstlive-kannada/media/post_attachments/wp-content/uploads/2024/09/Iphone-16-New.jpg)
ಇತ್ತೀಚೆಗೆ Apple iPhone-16 ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಷ್ಟರಲ್ಲೇ ಒಂದು ದೇಶ iPhone-16 ಅನ್ನು ನಿಷೇಧಿಸಿದೆ. ಅಲ್ಲದೇ ಆ ದೇಶದಲ್ಲಿರುವ ಎಲ್ಲಾ ಐಫೋನ್-16 ಕಾನೂನು ಬಾಹಿರ ಎಂದು ಘೋಷಣೆ ಮಾಡಿದೆ.
ನಿಷೇಧ ಮಾಡಿದ್ದು ಯಾವ ದೇಶ..?
ಅಂದ್ಹಾಗೆ ಐಫೋನ್ 16 ಮಾರಾಟವನ್ನು ತಕ್ಷಣವೇ ನಿಲ್ಲಿಸಲು ಆದೇಶ ಮಾಡಿದ್ದು ಇಂಡೋನೇಷ್ಯಾ. ಅಲ್ಲಿನ ಸರ್ಕಾರವು ಆ್ಯಪಲ್ ವಿರುದ್ಧದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆ್ಯಪಲ್ ಸಂಸ್ಥೆಯು ನಮ್ಮ ದೇಶದಲ್ಲಿ ಹೂಡಿಕೆ ಮಾಡೋದಾಗಿ ಹೇಳಿತ್ತು. ಆದರೆ ಅದು ನುಡಿದಂತೆ ನಡೆದುಕೊಂಡಿಲ್ಲ ಎಂದು ಇಂಡೋನೇಷ್ಯಾ ಆರೋಪಿಸಿದೆ.
ಆ್ಯಪಲ್ ಸಂಸ್ಥೆಯು ಇಂಡೋನೇಷ್ಯಾದಲ್ಲಿ ಸ್ವಲ್ಪ ಹೂಡಿಕೆ ಮಾಡಿದೆ. ಆದರೆ ಕಂಪನಿಯು ಬಯಸಿದಷ್ಟು ಅಲ್ಲ. ಈಗ ಸರ್ಕಾರದಿಂದ ಟಿಕೆಡಿಎನ್ (Tingkat Komponen Dalam Negeri) ಸರ್ಟಿಫಿಕೇಟ್ ಪ್ರಮಾಣೀಕರಣ ನೀಡಿಲ್ಲ. ಒಪ್ಪಂದ ಪ್ರಕಾರ, ಆ್ಯಪಲ್ ನಡೆದುಕೊಳ್ಳದ ಹಿನ್ನೆಲೆಯಲ್ಲಿ iPhone-16 ಮಾರಾಟವಾಗಲ್ಲ ಎಂದು ಸರ್ಕಾರ ಹೇಳಿದೆ. ಇನ್ನು ಇಂಡೋನೇಷ್ಯಾ ಸರ್ಕಾರ ಉಳಿದ ಹೂಡಿಕೆಗಾಗಿ ಕಾಯುತ್ತಿದೆ.
ಕಂಪನಿಯ ಮೇಲೆ ಪರಿಣಾಮ
ಟಿಮ್ ಕುಕ್ ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಮಾತನಾಡುವಾಗ ಸಭೆ ಸಕರಾತ್ಮಕವಾಗಿತ್ತು. ಅಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಕುಕ್ ಮಾತನಾಡಿದ್ದರು. ಸರ್ಕಾರದ ಈ ನಿರ್ಧಾರ ಕಂಪನಿಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಐಫೋನ್​ ಕೊಡಿಸದ ಪೋಷಕರು.. ತನ್ನ ಮನೆಯಲ್ಲಿ ತಾನೇ ದರೋಡೆ ಮಾಡಿ ಸಿಕ್ಕಿ ಬಿದ್ದ ಮಗ!
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us