/newsfirstlive-kannada/media/post_attachments/wp-content/uploads/2024/06/DARSHAN_MURDER_NEW_2.jpg)
ಮಂಡ್ಯ: ನಟಿ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಕೇಸಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಈ ಕೇಸಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದೆ. ಈ ಬಗ್ಗೆ ಮಾತಾಡಿರೋ ನಿರ್ದೇಶಕ ಇಂದ್ರಜಿತ್ ಲಂಕೇಶ್ ದರ್ಶನ್ ವಿರುದ್ಧ ಧ್ವನಿ ಎತ್ತಿದ್ದ ಏಕೈಕ ವ್ಯಕ್ತಿ ನಾನೇ ಎಂದಿದ್ದಾರೆ. ಜತೆಗೆ ಅಂದೇ ದರ್ಶನ್ ಸುಧಾರಣೆ ಆಗಿದಿದ್ರೆ, ಇಂದು ಈ ಕೃತ್ಯವೇ ನಡೆಯುತ್ತಿರಲಿಲ್ಲ ಎಂದರು.
ಕೊಲೆ ಮಾಡಿರೋದು ಯಾರು ಎಂದು ಪೊಲೀಸ್ ತನಿಖೆಯಿಂದ ಹೊರಬರಲಿ. ಅಂದೇ ದರ್ಶನ್ಗೆ ವಾರ್ನಿಂಗ್ ಕೊಟ್ಟಿದ್ದೆ. ಅವತ್ತು ದರ್ಶನ್ ನನ್ನ ಮಾತು ಕೇಳಬೇಕಿತ್ತು. ನನಗೂ ದರ್ಶನ್ಗೂ ಯಾವುದೇ ವ್ಯತ್ಯಾಸ ಇಲ್ಲ. ನಾನು ದರ್ಶನ್ಗೆ 2 ಸಿನಿಮಾ ಮಾಡಿದೀನಿ. ನಾನು ಕೊಟ್ಟ ದುಡ್ಡಿಂದ ದರ್ಶನ್ ಕಾರ್ ತಗೊಂಡಿದ್ರು. ದರ್ಶನ್ ಬೆಳೆದಿದ್ದು ಕಷ್ಟದ ದಿನಗಳಲ್ಲಿ, ಅವರಿಗೆ ಈ ರೀತಿ ಕಷ್ಟ ಬರಬಾರದಿತ್ತು ಎಂದರು. ಸೋಷಿಯಲ್ ಮೀಡಿಯಾನೇ ಈ ಕೊಲೆಗೆ ಕಾರಣ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡದಿದ್ರೆ ಈ ಕೊಲೆಯೇ ಆಗುತ್ತಿರಲಿಲ್ಲ ಎಂದರು.
ರೇಣುಕಾಸ್ವಾಮಿ ಕುಟುಂಬ ಬೀದಿಗೆ ಬಂದಿದೆ. ಇವರ ಪತ್ನಿಗೆ ನ್ಯಾಯ ಕೊಡಿಸಬೇಕು. ಆಕೆ ಮೂರು ತಿಂಗಳ ಗರ್ಭಿಣಿ. ಅವರು ತನ್ನ ಗಂಡನನ್ನು ಕಳೆದುಕೊಳ್ಳುತ್ತೇನೆ ಅನ್ನೋ ಕನಸು ಎಂದೂ ಕಂಡಿರಲಿಲ್ಲ. ಮಗು ಭವಿಷ್ಯ ಬೀದಿಗೆ ಬರಬಾರದು. ನಾನು ನನ್ನ ಕೈಯಲ್ಲಿ ಆದಷ್ಟು ಹಣ ಸಹಾಯ ಮಾಡ್ತೀನಿ. ಎಲ್ಲರೂ ಇವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದರು.
ಇದನ್ನೂ ಓದಿ:ಪೂರ್ತಿ ಊಟ ಮಾಡಲ್ಲ.. ಸೆಲ್ನಲ್ಲಿ ಏಕಾಂಗಿ.. 1 ಸೆಲ್.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ