/newsfirstlive-kannada/media/post_attachments/wp-content/uploads/2024/06/babar-Azam-1.jpg)
ಇಂದು INDvsPAK ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಸ್ಟೇಡಿಯಂ. ಈಗಾಗಲೇ ಎರಡು ದೇಶಗಳ ಕ್ರಿಕೆಟ್​​ ಅಭಿಮಾನಿಗಳು ಈ ಪಂದ್ಯವನ್ನು ಕಾಣಲು ಕಾತುರರಾಗಿದ್ದಾರೆ. ಆದರೆ ಪಂದ್ಯ ಪ್ರಾರಂಭಕ್ಕೂ ಮುನ್ನವೇ ಪಾಕ್​ ನಾಯಕ ಬಾಬರ್​ ಅಜಂ ಹೇಳಿಕೆಯೊಂದು ವೈರಲ್​ ಆಗುತ್ತಿದೆ.
ನಾನು ಅಪ್ಸೆಟ್​​ ಆಗಿದ್ದೇನೆ.. ಇದು ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಬಾಯಲ್ಲಿ ಬಂದಿರುವ ಮಾತು. ಹೌದು. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಅದರಲ್ಲೂ ಟೀಂ ಇಂಡಿಯಾದ ಜೊತೆಗೆ 2024ರ ಟಿ20 ಆಡುವ ಮೊದಲು ಈ ವಿಡಿಯೋ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆಯೇ ಈ ವೀಡಿಯೋ ಹಿನ್ನೋಟ ನೋಡುವುದಾದರೆ..
ಪಾಕ್​ ತಂಡ ಮೊದಲು ಎದುರಿಸಿದ ಅಮೆರಿಕ ತಂಡದ ವಿರುದ್ಧದ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತ್ತು. ಅಮೆರಿಕ ವಿರುದ್ಧ ಸೂಪರ್​ ಓವರ್​ನಲ್ಲಿ ಸೋತು ಮುಖಭಂಗಕ್ಕೀಡಾಯಿತು. USA ತಂಡ 5 ರನ್​ಗೆ ಜಯ ಸಾಧಿಸಿತ್ತು. ಆದರೆ ಈ ಪಂದ್ಯ ಮುಗಿದ ವೇಳೆ ಮಾಧ್ಯಮದವರ ಮುಂದೆ ಬಾಬರ್​ ಪ್ರತಿಕ್ರಿಯಿಸಬೇಕಿತ್ತು.
Reporter : it is Upset , or they played Extraordinary.
Babar azam : Yes I am upset ? pic.twitter.com/AQQgYJDr3u
— Akshay Mishra ?? (@Msd183or91) June 8, 2024
ಅದರಂತೆಯೇ ಸದ್ಯ ಹರಿದಾಡುತ್ತಿರುವ ವಿಡಿಯೋ, ಬಾಬರ್​ ಅಜಂ ​ಯುಎಸ್​​ಎ ತಂಡದ ವಿರುದ್ಧ ಸೋಲುಂಡ ಬಳಿಕ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಾಗಿದೆ. ಈ ವೇಳೆ ಪತ್ರಕರ್ತರೊಬ್ಬರು ಪಾಕ್​ ತಂಡದ ನಾಯಕನಿಗೆ ಇದು ಅಪ್ಸೆಟ್​ ಅಥವಾ ಅದ್ಭುತವಾಗಿ ಆಡಿರುವ ಪರಿಯೇ ಎಂದು ಕೇಳಿದ್ದಾರೆ. ಪತ್ರಕರ್ತರ ಮಾತಿಗೆ ಉತ್ತರಿಸಿದ ಬಾಬರ್​ ಅಜಂ. ಹೌದು, ನಾನು ಅಪ್ಸೆಟ್​ ಆಗಿದ್ದೇನೆ ಎಂದು ಉತ್ತರಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us