INDvsPAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​! ಬರೀ 10 ಸೆಕೆಂಡ್​ ಜಾಹೀರಾತಿಗೆ ಇಷ್ಟೊಂದು ಪಾವತಿಸಬೇಕಾ?

author-image
AS Harshith
Updated On
World Cup 2023: ಇಂಡಿಯಾ-ಪಾಕ್ ಮ್ಯಾಚ್ ಬಲು ದುಬಾರಿ.. ಹೋಟೆಲ್​​ ರೂಮ್​​ಗಳ ಬಾಡಿಗೆ ರೇಟ್ 1,00,000 ವರೆಗೆ ಹೆಚ್ಚಳ..!
Advertisment
  • ಇಂದು ಭಾರತ ಮತ್ತು ಪಾಕಿಸ್ತಾನ ತಂಡ ಮುಖಾಮುಖಿ
  • ಇಂದಿನ ದುಬಾರಿ ಪಂದ್ಯಕ್ಕಾಗಿ ವಿಶ್ವವೇ ಕಣ್ತೆರೆದು ಕುಂತಿದೆ
  • ಟಿಕೆಟ್​ ಮಾತ್ರವಲ್ಲ, ಜಾಹೀರಾತು ಸ್ಲಾಟ್​ಗಳು ಕೂಡ ದುಬಾರಿ

ಇಂದು ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್ 2024ರಲ್ಲಿ ಮೊದಲ ಬಾರಿ ಭೇಟಿಯಾಗುತ್ತಿದೆ. ಈ ಪಂದ್ಯವನ್ನು ಕಾಣಲು ವಿಶ್ವವೇ ಕಣ್ತೆರೆದು ಕುಂತಿದೆ. ಅಚ್ಚರಿ ಸಂಗತಿ ಎಂದರೆ ಈ ಪಂದ್ಯದ ವೇಳೆ ಜಾಹೀರಾತು ಒದಗಿಸಲು ಹಲವು ಕಂಪನಿಗಳು ಆಸಕ್ತಿಯಿಂದ ಕುಳಿತಿವೆ.

ಇಂಡಿಯಾ ಮತ್ತು ಪಾಕ್​ ಪಂದ್ಯವನ್ನು ನೋಡುವುದೇ ಒಂದು ಗಮ್ಮತ್ತು. ವಿಶ್ವದ ಅನೇಕ ದೇಶಗಳ ಜನರು ಭಾರತ ಮತ್ತು ಪಾಕ್​ ಪಂದ್ಯವನ್ನು ಕಾಣಲು ಕಾಯುತ್ತಿರುತ್ತಾರೆ. ಹಾಗಾಗಿ ಈ ಪಂದ್ಯಕ್ಕೆ ಬೇಡಿಕೆಯು ಹೆಚ್ಚಿದೆ. ಇದೇ ಕಾರಣವನ್ನು ಇಟ್ಟುಕೊಂಡು ರಜಾ ಸಮಯದಲ್ಲಿ ಪಂದ್ಯವನ್ನು ನಡೆಸುತ್ತಾರೆ. ಸಾಕಷ್ಟು ಜನರು ಪಂದ್ಯ ವೀಕ್ಷಿಸಲು ಸಾಧ್ಯ ಎಂಬ ಮುಂದಾಲೋಚನೆ ಇಟ್ಟುಕೊಂಡು ರವಿವಾರದಂದು ಪಂದ್ಯವನ್ನು ಏರ್ಪಡಿಸಲಾಗಿದೆ. ಅದರಂತೆಯೇ ಇಂದು ಅಮೆರಿಕಾದಲ್ಲಿ ಪಂದ್ಯ ನಡೆಯುತ್ತಿದೆ.

publive-image

ಇದನ್ನೂ ಓದಿ: ಧೋನಿ, ಯುವಿ, ಗಂಭೀರ್​ಗಿಂತ ಪಾಕ್​​ ವಿರುದ್ಧ​ ಕೊಹ್ಲಿಯೇ ಬೆಸ್ಟ್​.. ಟ್ರ್ಯಾಕ್​ ರೆಕಾರ್ಡ್​​ ಕೇಳಿದ್ರೆ ಶಾಕ್ ಆಗ್ತೀರಾ!

ಮೊದಲೇ ಹೇಳಿದಂತೆ INDvsPAK ಪಂದ್ಯಕ್ಕೆ ಮಾತ್ರವಲ್ಲ, ಟಿಕೆಟ್​ಗೂ ಭಾರೀ ಡಿಮ್ಯಾಂಡ್​. ಅದರಲ್ಲೂ ಇಂದಿನ ಪಂದ್ಯದ ಟಿಕೆಟ್​ ಮುಟ್ಟಲಾರದಂತ ಪರಿಸ್ಥಿತಿ. ಅಷ್ಟರಮಟ್ಟಿಗೆ ಟಿಕೆಟ್​ ದುಬಾರಿಯಾಗಿದೆ. ಆದರೀಗ ಅದರ ಜೊತೆಗೆ ಜಾಹೀರಾತುಗಳನ್ನು ಪ್ರಸಾರ ಮಾಡುವ ಸ್ಲಾಟ್​ಗಳು ಕೂಡ ದುಬಾರಿಯಾಗಿವೆ.

ಎಷ್ಟು ಲಕ್ಷ ಗೊತ್ತಾ?

ಬ್ಲೂಮ್​ಬರ್ಗ್​ ವರದಿ ಪ್ರಕಾರ, ಭಾರತ ಮತ್ತು ಪಾಕ್​ ಪಂದ್ಯಕ್ಕಾಗಿ 10 ಸೆಕೆಂಡ್​ಗಳು ಜಾಹೀರಾತು ಸ್ಲಾಟ್​​ಗಳನ್ನು 40 ಲಕ್ಷಕ್ಕೆ ಮಾರಾಟ ಮಾಡುತ್ತಿವೆ ಎಂದು ಹೇಳಲಾಗುತ್ತಿದೆ. ಇದು ಇಂದಿನ ಪಂದ್ಯ ಬೇಡಿಕೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

publive-image

ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

‘ಭಾರತ ಮತ್ತು ಪಾಕ್​ ಆಟ ಯಾವಾಗಲು ಪ್ರೀಮಿಯಂ ಅನ್ನು ಬಯಸುತ್ತದೆ’ ಎಂದು ಕ್ರೀಡಾ ಮೌಲ್ಯಮಾಪನ ಸೇವೆಗಳಲ್ಲಿ ಪರಿಣತಿ ಹೊಂದಿರುವ ಡಿಆ್ಯಂಡ್​ಪಿ ಅಡ್ವೈಸರಿ ವ್ಯವಸ್ಥಾಪಕ ಪಾಲುದಾ ಸಂತೋಷ್ ಎನ್​ ಹೇಳಿದ್ದಾರೆ.

ಭಾರತ ಜೊತೆಗಿನ ಇತರ ಪಂದ್ಯಕ್ಕೆ ಎಷ್ಟಿರುತ್ತೆ?

ಭಾರತದ ಇತರ ಪಂದ್ಯಗಳಾದರೆ 10 ಸೆಕೆಂಡ್​ಗಳ ಜಾಹೀರಾತು ಸ್ಲಾಟ್​​ಗಳಿಗೆ 20 ಲಕ್ಷ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತ ಮತ್ತು ಪಾಕ್​ ನಡುವಿನ ಪಂದ್ಯಕ್ಕೆ ಅದರ ಡಬಲ್​ ಆಗಿದೆ. ಇನ್ನು ಕಳೆದ ವರ್ಷ ಒಡಿಐ ವಿಶ್ವಕಪ್​ನಲ್ಲಿ ಜಾಹೀರಾತು ಸ್ಲಾಟ್​​ಗಳಿಗೆ 30 ಲಕ್ಷ ಚಾರ್ಜ್​ ಮಾಡಲಾಗಿತ್ತು.

publive-image

ಇದನ್ನೂ ಓದಿ: T20 World Cup; ಪಾಕ್​ ಕೇವಲ 3 ಮ್ಯಾಚ್ ಗೆದ್ರೆ, ಟೀಮ್ ಇಂಡಿಯಾ ಎಷ್ಟು ಪಂದ್ಯಗಳನ್ನ ಗೆದ್ದಿದೆ ಗೊತ್ತಾ?

ಇನ್ನು ಸೂಪರ್​ ಬೌಲ್​ ಸಮಯದಲ್ಲಿ 30 ಸೆಕೆಂಡ್​ ಜಾಹೀರಾತಿಗೆ $6.5 ಮಿಲಿಯನ್​ ನೀಡಬೇಕಾಗುತ್ತದೆ. ಯುಕೆಯನ್ನು 202ರ ಫುಟ್​​ಬಾಲ್​ ಸಮಯಲ್ಲಿ 30 ಸೆಕೆಂಡ್​ ಜಾಹೀರಾತಿಗೆ 4,26,82,271 ತೆರಬೇಕಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment