/newsfirstlive-kannada/media/post_attachments/wp-content/uploads/2025/03/Narayan-murthy-on-Poverty-1.jpg)
ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋ ಸಲಹೆ ನೀಡಿದ್ದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಕೊಡುಗೆಗಳಿಂದ ಬಡತನ ನಿವಾರಣೆಯಾಗಲ್ಲ. ಅದರ ಬದಲು ಏನು ಮಾಡಬೇಕು ಅನ್ನೋ ಸಲಹೆಯನ್ನು ನಾರಾಯಣಮೂರ್ತಿ ಅವರು ನೀಡಿದ್ದಾರೆ.
ನಾರಾಯಣಮೂರ್ತಿ ಏನಂದ್ರು?
ಜನರಿಗೆ ಉಚಿತ ಕೊಡುಗೆಗಳನ್ನ ನೀಡುವುದರಿಂದ ಬಡತನ ನಿವಾರಣೆ ಮಾಡಲು ಸಾಧ್ಯವಿಲ್ಲ. ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದರಿಂದ ಬಡತನ ನಿವಾರಣೆಯಾಗುತ್ತೆ ಅನ್ನೋದು ನನ್ನ ಸಲಹೆ ಎಂದು ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.
ಹೊಸ, ಹೊಸ ವಿಧಾನಗಳ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿಸಬಹುದು. ಕ್ರಿಯಾಶೀಲ, ನಾವೀನ್ಯತೆ ಹೊಂದಿರುವ ಉದ್ಯಮಿಗಳಿಂದ ಹೆಚ್ಚಿನ, ಹೊಸ ಉದ್ಯೋಗ ಸೃಷ್ಟಿ ಸಾಧ್ಯವಾಗುತ್ತದೆ. ನಾವೀನ್ಯತೆಯ ಉದ್ಯಮಿಗಳಿಂದ ಉದ್ಯೋಗ ಸೃಷ್ಟಿಯಾದರೆ ಬಡತನ ನಿವಾರಣೆ ಆಗುತ್ತದೆ. ಇದು ನೀತಿ, ನಿಯಮ ರೂಪಿಸುವವರಿಗೆ ನನ್ನ ಶಿಫಾರಸ್ಸು ಎಂದು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಪರೋಕ್ಷವಾಗಿ ಎನ್.ಆರ್. ನಾರಾಯಣ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾರಾಯಣ ಮೂರ್ತಿ ಮೇಲೆ ಮತ್ತೆ ಕೋಪಿಸಿಕೊಂಡ ಜನ.. ಈ ಸಲ ಕೊಟ್ಟ ಸಲಹೆ ಏನು..?
ನೀವೆಲ್ಲರೂ ನೂರು, ಸಾವಿರ ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿದ್ದೀರಿ. ಇದರ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ. ಉದ್ಯೋಗ ಸೃಷ್ಟಿಯಿಂದ ಬಡತನ ನಿವಾರಣೆ ಆಗುವುದರಲ್ಲೂ ಯಾವುದೇ ಅನುಮಾನ ಇಲ್ಲ. ಆದರೆ ಉಚಿತ ಕೊಡುಗೆಗಳ ಮೂಲಕ ಬಡತನ ನಿವಾರಣೆ ಮಾಡಲಾಗಲ್ಲ. ಉಚಿತ ಕೊಡುಗೆ ನೀಡಿ ಬಡತನ ನಿವಾರಣೆ ಮಾಡವುದರಲ್ಲಿ ಯಾವುದೇ ದೇಶಗಳೂ ಯಶಸ್ಸು ಕಂಡಿಲ್ಲ. ಕಳೆದ ತಿಂಗಳು ಸುಪ್ರೀಂಕೋರ್ಟ್ ಕೂಡ ಉಚಿತ ಕೊಡುಗೆ ನೀಡುವುದರ ವಿರುದ್ಧ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ