newsfirstkannada.com

×

ನಾರಾಯಣ ಮೂರ್ತಿ ಮೇಲೆ ಮತ್ತೆ ಕೋಪಿಸಿಕೊಂಡ ಜನ.. ಈ ಸಲ ಕೊಟ್ಟ ಸಲಹೆ ಏನು..?

Share :

Published September 13, 2024 at 10:39am

    ನಾರಾಯಣ ಮೂರ್ತಿಯನ್ನು ಮತ್ತೆ ಟ್ರೋಲ್ ಮಾಡಿದ ಜನ

    ಸೋಶಿಯಲ್ ಮೀಡಿಯಾದಲ್ಲಿ ಕೇಳ್ತಿರುವ ಪ್ರಶ್ನೆ ಏನು?

    ಈ ಹಿಂದೆ 72 ಗಂಟೆಗಳ ಕೆಲಸ ಮಾಡುವಂತೆ ಸಲಹೆ ನೀಡಿದ್ದರು

2023ರಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮಾತನಾಡಿ.. ಭಾರತದ ಉತ್ಪಾದಕತೆ ವಿಶ್ವದಲ್ಲಿ ಕಡಿಮೆ ಆಗಿದೆ. ಚೀನಾದಂಥ ದೇಶಗಳೊಂದಿಗೆ ಸ್ಪರ್ಧಿಸಲು ಯುವಕರು ವಾರದಲ್ಲಿ 72 ಗಂಟೆಗಳ ಕಾಲ ದುಡಿಯಬೇಕು. ಇದನ್ನು ಜಪಾನ್, ಜರ್ಮನಿ ದೇಶ ಮಾಡಿವೆ ಎಂದಿದ್ದರು.

ಅವರ ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ನಾರಾಯಣ ಮೂರ್ತಿ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಟ್ರೋಲ್ ಆಗ್ತಿದ್ದಾರೆ. ಬೆಂಗಳೂರಿನ ಪಾಲ್‌ ಹೆವಿಟ್‌ ಅವರ ಕಾನ್ಷೆಪ್ಚುವೆಲ್‌ ಫಿಸಿಕ್ಸ್‌ನ 13ನೇ ಆವೃತ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿರುವ ಅವರು.. ಮಕ್ಕಳಾದ ಅಕ್ಷತಾ ಮತ್ತು ರೋಹನ್‌ ವಿದ್ಯಾಭ್ಯಾಸದ ಅವಧಿಯಲ್ಲಿ ಪ್ರತಿ ದಿನ ಅವರೊಂದಿಗೆ ಮೂರೂವರೆ ಗಂಟೆಗಳ ಕಾಲ ಪತ್ನಿ ಸುಧಾಮೂರ್ತಿ ಓದುತ್ತಿದ್ದರು. ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಟಿವಿ ಬಂದ್ ಮಾಡಿ ಈ ಸಮಯದಲ್ಲಿ ಕುಟುಂಬ ಅಧ್ಯಯನಕ್ಕೆ ಮೀಸಲಿಟ್ಟಿದ್ದರು. ಊಟದ ಬಳಿಕ 9ರಿಂದ 11 ಗಂಟೆವರೆಗೆ ಅಧ್ಯಯನ ಅವಧಿಯನ್ನು ವಿಸ್ತರಿಸಿದ್ದರು. ಹೀಗೆ ಶಿಸ್ತಿನ ಸಂಸ್ಕೃತಿಯನ್ನು ಬೆಳೆಸುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

ಮಕ್ಕಳ ಶಿಕ್ಷಣಕ್ಕೆ ಮನೆಯಲ್ಲಿ ಶಿಸ್ತಿನ ವಾತಾವರಣ ನಿರ್ಮಿಸುವುದು ಪೋಷಕರ ಜವಾಬ್ದಾರಿ. ಮಕ್ಕಳು ಓದಿನತ್ತ ಗಮನ ಹರಿಸಬೇಕು. ಪೋಷಕರು ಆ ಅವಧಿಯಲ್ಲಿ ಟಿವಿ ನೋಡಬಾರದು. ಪೋಷಕರು ಸಿನಿಮಾ ನೋಡಲು ಹೋಗಿ, ಮಕ್ಕಳೇ ನೀವು ಓದಿಕೊಳ್ಳಿ ಅಂದರೆ ಅರ್ಥವಿಲ್ಲ. ಮಕ್ಕಳ ಶಾಲಾ ನಾವು ಮೂರೂವರೆ ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯುತ್ತಿದ್ದೇವು. ಹೀಗೆ ಮಾಡಿದರೆ ಮನೆಯಲ್ಲಿ ಶಿಸ್ತಿನ ವಾತಾವರಣ ನಿರ್ಮಾಣ ಆಗಲಿದೆ ಎಂದರು.

ಇದನ್ನೂ ಓದಿ:ವಾರಕ್ಕೆ 70 ಗಂಟೆಗಳ ಕೆಲಸ; ನನ್ನ ಹೇಳಿಕೆಯಲ್ಲಿ ಯಾವುದೇ ವಿಷಾದ ಇಲ್ಲ -ನಾರಾಯಣ ಮೂರ್ತಿ

ಮಕ್ಕಳಿಗಿಂತ ಹೆಚ್ಚು ಪಾಲಕರು ಅಧ್ಯಯನ ಮಾಡಬೇಕಿದೆ. ಜತೆಗೆ ಕಲಿಕೆಯಲ್ಲಿ ಶಿಸ್ತಿನ ವಾತಾವರಣ ಸೃಷ್ಟಿಸುವುದು ಮುಖ್ಯ. ಪಾಲಕರೇ ಇದರ ಮುಂದಾಳತ್ವ ವಹಿಸಬೇಕು. ನನಗೆ ಕೋಚಿಂಗ್‌ ತರಬೇತಿಗಳಲ್ಲಿ ನಂಬಿಕೆ ಇಲ್ಲ, ತರಗತಿಯಲ್ಲಿ ಶಿಕ್ಷಕರ ಪಾಠ ಕೇಳದ ವಿದ್ಯಾರ್ಥಿಗಳಿಗೆ ಮಾತ್ರ ಇದರ ಅಗತ್ಯವಿದೆ. ಕೋಚಿಂಗ್‌ ತರಗತಿಗಳು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವ ತಪ್ಪು ಮಾರ್ಗ. ಕೋಚಿಂಗ್‌ ತರಗತಿಗಳನ್ನು ನಾನು ನಂಬುವುದಿಲ್ಲ ಎಂದಿದ್ದಾರೆ. ನಾರಾಯಣಮೂರ್ತಿ ಅವರ ಈ ಹೇಳಿಕೆ ಇದೀಗ ಟೀಕೆಗೆ ಕಾರಣವಾಗಿದೆ.

ಇದನ್ನೂ ಓದಿ:ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾರಾಯಣ ಮೂರ್ತಿ ಮೇಲೆ ಮತ್ತೆ ಕೋಪಿಸಿಕೊಂಡ ಜನ.. ಈ ಸಲ ಕೊಟ್ಟ ಸಲಹೆ ಏನು..?

https://newsfirstlive.com/wp-content/uploads/2024/09/NARAYANA-MURTHY.jpg

Load More