ಬಳ್ಳಾರಿಯ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರೋ ದರ್ಶನ್
ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ನಲ್ಲಿ ಸಪರೇಟ್ ವಾರ್ಡ್ ಇಲ್ಲ
ದರ್ಶನ್‌ಗೆ ಎಷ್ಟು ದಿನ ಚಿಕಿತ್ಸೆ, ಯಾವ ಅಪರೇಷನ್ ಮಾಡಬೇಕು?
ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ತಿಂಗಳಾಯ್ತು ದರ್ಶನ್ ಜೈಲು ಹಕ್ಕಿಯಾಗಿ. ಪಂಜರದಿಂದ ಹಾರೋಕೆ ದಾಸ ಎದುರು ನೋಡುತ್ತಿದ್ದಾರೆ. ಹೈಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಯಾಗಿದ್ದು, ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದಾರೆ.
ಇದನ್ನೂ ಓದಿ: ದರ್ಶನ್‌ಗೆ ಆಪರೇಷನ್ ಮಾಡದಿದ್ರೆ ಪ್ಯಾರಾಲಿಸಿಸ್ ಸಾಧ್ಯತೆ; ಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ
ಆರೋಪಿಯ ಆರೋಗ್ಯ ಸ್ಥಿತಿ ಬಗ್ಗೆ, ಚಿಕಿತ್ಸೆಯ ಅಗತ್ಯತೆ ಬಗ್ಗೆ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಇದಕ್ಕೆ ಎಸ್ಪಿಪಿ ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಜಡ್ಜ್ ವಿಶ್ವಜಿತ್ ಶೆಟ್ಟಿ ಆದೇಶ ಮುಂದೂಡಿದ್ದಾರೆ. ಹೈಕೋರ್ಟ್ನಲ್ಲಿ ನಡೆದ ಈ ವಾದ ಪ್ರತಿವಾದ ಮಹತ್ವದ ಪಾತ್ರ ವಹಿಸಿದೆ.
ಕೋರ್ಟ್‌ನಲ್ಲಿ ನಡೆದ ವಾದವೇನು?
ಸಿ.ವಿ. ನಾಗೇಶ್, ದರ್ಶನ್ ಪರ ವಕೀಲರು: ದರ್ಶನ್‌ಗೆ MRI, ಸ್ಕ್ಯಾನ್ ಮಾಡಲಾಗಿದೆ. ಬೆನ್ನಿನ ನರದ L5 – S1 ಡಿಸ್ಕ್ ಸಮಸ್ಸೆ ಇದೆ. ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಅಗತ್ಯ ವಿವರಿಸಲಾಗಿದೆ. ಇದನ್ನ ಮಾಡದಿದ್ರೆ, ಮುಂದೆ ಕಾಲುಗಳು ಸ್ಪರ್ಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಮೂತ್ರ ವಿಸರ್ಜನೆ ಕಂಟ್ರೋಲ್ ಮಾಡುವ ಸಾಮರ್ಥ್ಯ ಕಳೆದುಕೊಳ್ಳಬಹುದು. ಹೀಗಾಗಿ ಅವ್ರು ಬೆಂಗಳೂರು ಅಥವಾ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಬಹುದು. ಆದ್ರೆ, ಬಳ್ಳಾರಿಯಲ್ಲಿ ನ್ಯೂರೋ ಚಿಕಿತ್ಸೆ ಯಂತ್ರಗಳಿಲ್ಲ.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಬೆಂಗಳೂರಿನ ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಇದೆ?
ಪ್ರಸನ್ನ ಕುಮಾರ್, ಎಸ್ಪಿಪಿ: ವಿಕ್ಟೋರಿಯಾ , ಬೌರಿಂಗ್ ಆಸ್ಪತ್ರೆಯಲ್ಲಿ ಇದೆ
ಸಿ.ವಿ. ನಾಗೇಶ್, ದರ್ಶನ್ ಪರ ವಕೀಲರು: ಆರೋಪಿ ತನಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಪ್ರಾಸಿಕ್ಯೂಷನ್ ಇಂತಹ ಆಸ್ಪತ್ರೆಯಲ್ಲಿ ತಗೋಬೇಕು ಅಂತಾ ಹೇಳಲು ಸಾಧ್ಯವಿಲ್ಲ.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಿರುವ ಪ್ರಕರಣಗಳಿವೆ. ಅದರಂತೆ ಈ ಕೇಸ್ ಸಹ ಜಾಮೀನು ನೀಡಲು ಅರ್ಹ ಪ್ರಕರಣವಾಗಿದೆ.
ಸಿ.ವಿ. ನಾಗೇಶ್, ದರ್ಶನ್ ಪರ ವಕೀಲರು: ನಾನು ಇಲ್ಲಿ ಮಧ್ಯಂತರ ಜಾಮೀನು ಕೇಳುತ್ತಿದ್ದೇನೆ. ರೆಗ್ಯೂಲರ್ ಬೇಲ್ ಕೇಳ್ತಿಲ್ಲ. ದರ್ಶನ್, ಬಲ ಬದಿ ತುಂಬಾ ನೋವಿದ್ದು, ಓಡಾಡಲು, ಕುಳಿತುಕೊಳ್ಳಲು ಸಮಸ್ಯೆ ಆಗ್ತಿದೆ. ಆತ ತನ್ನ ಸ್ವತಂತ್ರ ಕಾರ್ಯಗಳನ್ನ ಮಾಡಲು ಆಗ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ಅನೇಕ ಸಿಕ್ಕಿದೆ. ಕೇವಲ ವೈದ್ಯಕೀಯ ಕಾರಣ ಪರಿಗಣಿಸಬೇಕು..
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಆದರೆ ಮೆಡಿಕಲ್ ಗ್ರೌಂಡ್ನಲ್ಲಿ ನೀಡಲು ಸಹ ಮೆರಿಟ್ಸ್ ನೋಡಬೇಕಲ್ವಾ?
ಸಿ.ವಿ.ನಾಗೇಶ್, ದರ್ಶನ್ ಪರ ವಕೀಲರು: ಅದರೆ ಇಂತಹ ಪ್ರಕರಣಗಳಲ್ಲಿ ಅರ್ಹತೆ ಪರಿಗಣಿಸಬಾರದು.
ಪ್ರಸನ್ನ ಕುಮಾರ್, ಎಸ್ಪಿಪಿ: ವೈದ್ಯಕೀಯ ವರದಿಯಲ್ಲಿ ಕೆಲವೊಮ್ಮೆ ಮುಂದೆ ಆದಾಗ ಅಂತಾ ಇದೆ.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಸುಪ್ರೀಂ ಕೋರ್ಟ್ ಆರೋಗ್ಯ ತುಂಬಾ ಮುಖ್ಯ ಅಂತ ಹೇಳಿದೆ.
ಪ್ರಸನ್ನ ಕುಮಾರ್, ಎಸ್ಪಿಪಿ: ಅವರಿಗೆ ನೋವಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದು.
ಸಿ.ವಿ.ನಾಗೇಶ್, ದರ್ಶನ್ ಪರ ವಕೀಲರು: ಎಷ್ಟು ದಿನ ಚಿಕಿತ್ಸೆ, ಯಾವ ಅಪರೇಷನ್ ಏನು? ಇದನ್ನ ಡಾಕ್ಟರ್ ಹೇಳಬೇಕು.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಅದಕ್ಕೆ ಉತ್ತರ ಹೇಳಿ
ಸಿ.ವಿ.ನಾಗೇಶ್, ದರ್ಶನ್ ಪರ ವಕೀಲರು: ಅವರು ಅನುಮಾನಿಸುವ ಅವಶ್ಯಕತೆ ಇಲ್ಲ, ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿ
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸ್ತಿರಾ?
ಸಿ.ವಿ.ನಾಗೇಶ್, ದರ್ಶನ್ ಪರ ವಕೀಲರು: ಈ ಹಿಂದೆ ಮೈಸೂರು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ.
ಪ್ರಸನ್ನ ಕುಮಾರ್, ಎಸ್ಪಿಪಿ: ಅವರು ಯಾವ ಚಿಕಿತ್ಸೆ, ಅಪರೇಷನ್ ಮಾಡ್ತಾರೆ ಅಂತಾ ಹೇಳಿದ ಮೇಲೆ ಬೇಲ್ ನೀಡಬೇಕು.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಅಪೋಲೋ ಆಸ್ಪತ್ರೆಯ ವೈದ್ಯರು ಪರಿಶೀಲನೆ ಮಾಡಿ ವರದಿ ನೀಡಬಹುದಲ್ವಾ?
ಪ್ರಸನ್ನ ಕುಮಾರ್, ಎಸ್ಪಿಪಿ: ಇಲ್ಲ ಮೆಡಿಕಲ್ ಬೋರ್ಡ್ ಅಭಿಪ್ರಾಯ ಮುಖ್ಯ.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಈಗ ಎರಡನೇ ಒಪಿನಿಯನ್ ಬಗ್ಗೆ ಏನ್ ಹೇಳ್ತಿರಾ?
ಸಿ.ವಿ.ನಾಗೇಶ್, ದರ್ಶನ್ ಪರ ವಕೀಲರು: ಯಾಕೆ ಎರಡನೇ ಒಪಿನಿಯನ್ ಬೇಕು?
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ : ಹಿಂದಿನ ವರದಿಯಲ್ಲಿ ಮತ್ತು ಈಗಿನ ವರದಿಯ ಬಗ್ಗೆ ವ್ಯತ್ಯಾಸ ಇದೆಯಲ್ಲ. ಅದರಲ್ಲಿ ಯಾವುದೇ ಎಕ್ಸಪರ್ಟ್ ಓಪಿನಿಯನ್ ಇಲ್ಲ ಅಲ್ವಾ.
ಸಿ.ವಿ. ನಾಗೇಶ್, ದರ್ಶನ್ ಪರ ವಕೀಲರು: ದರ್ಶನ್ ಊತ, ನೋವು, ಮರಗಟ್ಟುವಿಕೆಯಿಂದ ಬಳಲುತ್ತಿದ್ದಾರೆ. ಹೀಗಿದ್ದಾಗ ಅಪರೇಷನ್ ಯಾವಾಗ ಬೇಕು ಅಂತ ಡಾಕ್ಟರ್ ಹೇಳಬೇಕು. ನೀವು ಜಡ್ಜ್ ಮತ್ತು ನಾನು ಹೇಳಲು ಸಾಧ್ಯವಿಲ್ಲ. ಮೈಸೂರಲ್ಲಿ ಅಡ್ಮಿಟ್ ಆಗಲು ಅವಕಾಶ ನೀಡಿ.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಬೆಂಗಳೂರಲ್ಲಿ ಮಾಡಬಹುದು. ಮೈಸೂರು ಏಕೆ ಬೇಕು.?
ಸಿ.ವಿ.ನಾಗೇಶ್, ದರ್ಶನ್ ಪರ ವಕೀಲರು: ಮೈಸೂರಿನಲ್ಲಿ ರಿಪೋರ್ಟ್ ಕೊಟ್ಟರೆ ಏನಾಗುತ್ತೆ.
ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ: ಖಾಸಗಿ ಆಸ್ಪತ್ರೆಯ ರಿಪೋರ್ಟ್ ಪಡೆಯುವುದಾದ್ರೆ, ಬೆಂಗಳೂರು ಆಸ್ಪತ್ರೆಯಲ್ಲಿ ಪಡೆಯಬಹುದು.
ಪ್ರಸನ್ನ ಕುಮಾರ್, ಎಸ್ಪಿಪಿ: ಸರ್ಕಾರಿ ಆಸ್ಪತ್ರೆಯಲ್ಲಿ ರಿಪೋರ್ಟ್ ಪಡೆಯಬಹುದು. ಖಾಸಗಿ ಆಸ್ಪತ್ರೆ ಯಾಕೆ ಬೇಕು. ಅರೋಪಿಗೆ ಚಿಕಿತ್ಸೆ ಅವಶ್ಯಕತೆ ಇದೆ. ಜಾಮೀನಿನ ಅವಶ್ಯಕತೆ ಇಲ್ಲ.
ಎರಡು ಕಡೆಯ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಜಾಮೀನು ಆದೇಶವನ್ನ ಇಂದಿಗೆ ಮುಂದೂಡಿದ್ದಾರೆ. ದರ್ಶನ್ ಬೇಲ್ ಭವಿಷ್ಯದ ಬಗ್ಗೆ ಕುತೂಹಲ ಮೂಡಿದ್ದು, ಇಂದಿನ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ