/newsfirstlive-kannada/media/media_files/2025/10/24/tomato_health-2025-10-24-09-05-56.jpg)
ಪಾಕಿಸ್ತಾನ ಯಾವಾಗಲೂ ಯಾರ ಮೇಲಾದರೂ ಕಾಲು ಕೆದರಿಕೊಂಡು ಹೋಗುವ ಚಟ. ಇದರಿಂದ ಅಲ್ಲಿನ ಜನರ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ. ದೇಶದಲ್ಲಿ ಸಮಸ್ಯೆಗಳು ತಲೆದೂರಿದರೂ ಪ್ರಧಾನಿ ಶಹಬಾಜ್ ಷರೀಫ್ ನಮಗೆ ಏನು ಆಗಿಲ್ಲ ಎಂದು ಬೊಬ್ಬೆ ಹಾಕುತ್ತಾನೆ. ಸದ್ಯ ಪಾಕಿಸ್ತಾನದಲ್ಲಿ ಟೊಮೆಟೊ ರೇಟ್​ ಭಾರೀ ಏರಿಕೆಯಾಗಿದ್ದು ಚಿಕನ್​ಗಿಂತ 2 ಪಟ್ಟು ದುಪ್ಪಟ್ಟು ಆಗಿದೆ ಎನ್ನಲಾಗುತ್ತಿದೆ.
ಅಫ್ಘಾನ್​ ಜೊತೆ ಯುದ್ಧ ಮಾಡಿದ್ದೇ ತಡ ಪಾಕಿಸ್ತಾನಕ್ಕೆ ಎಲ್ಲ ರೀತಿಯಿಂದಲೂ ಬಿಸಿ ತಟ್ಟುತ್ತಿದೆ. ಇದೀಗ ಲಹೋರ್, ಕರಾಚಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಟೊಮೆಟೊ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದ್ದು ಕೇವಲ ಒಂದು ಕೆ.ಜಿಗೆ 700 ರೂಪಾಯಿ ಆಗಿದೆ. ಅಫ್ಘಾನಿಸ್ತಾನದ ಜೊತೆ ಘರ್ಷಣೆಯ ನಂತರ ಗಡಿಯನ್ನು ಬಂದ್ ಮಾಡಲಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಕೆಲವೊಂದು ದಿನಸಿಗಳ ದರದಲ್ಲಿ ಹೆಚ್ಚಳವಾಗಿದೆ ಎನ್ನಲಾಗಿದೆ.
ಟೊಮೆಟೊ ಕಳೆದ ವಾರ ಕೆ.ಜಿಗೆ 100 ರೂ ಇತ್ತು. ಯಾವಾಗ ಪಾಕಿಸ್ತಾನ, ಅಫ್ಘಾನ್​ ಜೊತೆ ಸುಖಸುಮ್ಮನೆ ಕಾಲು ಕೆದರಿ ಜಗಳ ಮಾಡಿತೋ, ಆವಾಗ ಅಫ್ಘಾನ್​ನವರು ಗಡಿ ಬಂದ್ ಮಾಡಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಶೇಕಡ 400ರಷ್ಟು ಏರಿಕೆ ಕಂಡಿದೆ. ಸಾಮಾನ್ಯ ಜನರಂತೂ ಮಾರ್ಕೆಟ್​ಗಳಲ್ಲಿ ಟೊಮೆಟೊ ಸಮೀಪವೇ ಸುಳಿಯುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ದೀಪಾವಳಿ ಸಂಭ್ರಮದಲ್ಲಿ ಬದುಕೇ ಅಂಧಕಾರ.. 130ಕ್ಕೂ ಅಧಿಕ ಜನರ ಕಣ್ಣುಗಳಿಗೆ ತೀವ್ರ ಹಾನಿ
/filters:format(webp)/newsfirstlive-kannada/media/post_attachments/wp-content/uploads/2025/05/Pakistan-pm-and-army-chief.jpg)
ಇತ್ತೀಚೆಗೆ ಭೀಕರ ಮಳೆ, ಪ್ರವಾಹದಿಂದ ಪಾಕಿಸ್ತಾನದಲ್ಲಿ ಟೊಮೆಟೊ ಬೆಳೆ ಸೇರಿ ಇತರೆ ಬೆಳೆಗಳು ಎಲ್ಲ ಹಾನಿಯಾಗಿ ಫಲ ಕೈಗೆ ಸಿಕ್ಕಿಲ್ಲ. ತರಕಾರಿಗಾಗಿ ಈವರೆಗೂ ಪಾಕಿಸ್ತಾನ, ಅಫ್ಘಾನಿಸ್ತಾನವನ್ನು ಅವಲಂಬಿಸಿತ್ತು. ಆದರೆ ಅಫ್ಘಾನ್ ಗಡಿ ಬಂದ್ ಮಾಡಿ ಎಲ್ಲ ವ್ಯಾಪಾರ-ವ್ಯವಹಾರಕ್ಕೆ ಬ್ರೇಕ್ ಹಾಕಿದೆ. ಸುಮ್ಮನೇ ಇರದೇ ಗಲಾಟೆ ಮಾಡಿದ್ದಕ್ಕೆ ಪಾಕ್​ ಈಗ ಸರಿಯಾಗಿ ಅನುಭವಿಸುತ್ತಿದೆ. ಎಲ್ಲ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆ ಆಗಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನದ ಪಂಜಾಬ್​, ಝೇಲಂನಲ್ಲಿ 1 ಕೆ.ಜಿ ಟೊಮೆಟೊ 700 ರೂಪಾಯಿ, ಗುಜ್ರಾನವಾಲಾ ನಗರದಲ್ಲಿ 575, ಫೈಸಲಾಬಾದ್ 160 ರಿಂದ 500 ರೂಪಾಯಿಗೆ ಏರಿಕೆ ಆಗಿದೆ. ಮುಲ್ತಾನ್​ನಲ್ಲಿ 450 ರೂಪಾಯಿ ಇದೆ. ಇಷ್ಟು ದಿನ ಲಾಹೋರ್​ ಹೋಲ್​ಸೆಲ್​ ಮಾರ್ಕೆಟ್​ನಲ್ಲಿ 100 ರಿಂದ 170 ರೂಪಾಯಿ ಇದ್ದ ಟೊಮೆಟೊ 400 ರೂಪಾಯಿಗೂ ಅಧಿಕ ಬೆಲೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us