/newsfirstlive-kannada/media/media_files/2025/10/24/bng_pataki_2-2025-10-24-07-38-44.jpg)
ದೀಪಾವಳಿ ಹಬ್ಬ ಒಂದ್ಕಡೆ ಸಂಭ್ರಮ ಹೆಚ್ಚಿಸಿದ್ರೆ, ಮತ್ತೊಂದ್ಕಡೆ ಪಟಾಕಿ ಅವಘಡಗಳ ಸಂಖ್ಯೆಯನ್ನೂ ಏರಿಕೆ ಮಾಡಿದೆ. ಈ ಬಾರಿಯ ಬೆಳಕಿನ ಹಬ್ಬ 137 ಮಂದಿಯ ಪಾಲಿಗೆ ಕತ್ತಲೆಯನ್ನು ಆವರಿಸುವಂತೆ ಮಾಡಿದೆ. ಸುರಕ್ಷಿತವಾಗಿ ಪಟಾಕಿ ಸಿಡಿಸುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರ ಹುಚ್ಚಾಟದ ಮೂಲಕ ತಮ್ಮ ಬಾಳನ್ನೇ ಅಂಧಕಾರ ಮಾಡಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/10/24/bng_pataki_1-2025-10-24-07-38-54.jpg)
ಬೆಂಗಳೂರಲ್ಲಿ ಫ್ಲವರ್ ಪಾಟ್ ಪಟಾಕಿ ಜೊತೆಗೆ ಹುಚ್ಚಾಟ
ಫ್ಲವರ್ ಪಾಟ್ ಪಟಾಕಿ ಕೈಯಲ್ಲಿ ಹಿಡಿದು ಶೋ ಕೊಟ್ಟಿದ್ದ ಯುವಕ ತನ್ನ ಕಣ್ಣನ್ನೇ ಕಳೆದುಕೊಂಡಿದ್ದಾನೆ. ಬಿಹಾರ ಮೂಲದ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಿದ್ದ. ಆದ್ರೆ ದೀಪಾವಳಿ ಸಂಭ್ರಮದಲ್ಲಿ ಹುಚ್ಚಾಟವಾಡಿದ್ದಾನೆ. ರಸ್ತೆಯಲ್ಲಿ ಹಚ್ಚಿದ್ದ ಫ್ಲವರ್​ ಪಾಟ್​ ಪಟಾಕಿಯನ್ನು ಕೈಯಲ್ಲಿಡಿದು ಫೋಸ್​ ಕೊಡಲು ಹೋಗಿದ್ದಾನೆ. ಆಗ ಏಕಾಏಕಿ ಫ್ಲವರ್​ ಪಾಟ್​​ ಸಿಡಿದು, ಯುವಕನ ಕಣ್ಣಿಗೆ ತೀವ್ರ ಗಾಯವಾಗಿದೆ. ಈ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಆಘಾತಕಾರಿಯಾಗಿದೆ. ಸದ್ಯ ಗಾಯಗೊಂಡ ಬಿಹಾರದ ಯುವಕ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ:ಕಾಲು ಮುರಿದರೂ ಕುಂಟುತ್ತ ಗುರಿ ಮುಟ್ಟಿದ ಕೊಬ್ಬರಿ ಹೋರಿ.. ಸ್ಪರ್ಧೆಯಲ್ಲಿ ಉಸಿರು ನಿಲ್ಲಿಸಿದ ಮೂವರು
/filters:format(webp)/newsfirstlive-kannada/media/media_files/2025/10/24/bng_pataki-2025-10-24-07-39-06.jpg)
ಪಟಾಕಿ ಅವಘಡದಲ್ಲಿ ಗಾಯಗೊಂಡವರ ಸಂಖ್ಯೆ 137ಕ್ಕೇರಿಕೆ
ಈ ಬಾರಿಯ ಬೆಳಕಿನ ಹಬ್ಬದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡವ್ರ ಸಂಖ್ಯೆ ಬರೋಬ್ಬರಿ 137ಕ್ಕೆ ಏರಿಕೆ ಆಗಿದೆ. ಕಳೆದ 5 ದಿನಗಳಿಂದ ಪಟಾಕಿಯಿಂದ 137 ಮಂದಿಯ ಕಣ್ಣಿಗೆ ಪೆಟ್ಟಾಗಿ ಮಿಂಟೋ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ 44 ಪ್ರಕರಣ ದಾಖಲಾದ್ರೆ, ನಾರಾಯಣ ನೇತ್ರಾಲಯದಲ್ಲಿ 93 ಕೇಸ್ ದಾಖಲಾಗಿದೆ. ಇದರಿಂದ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ.
ಕೆಲವರ ಹುಚ್ಚಾಟ, ಇನ್ಯಾರೋಮಾಡಿದ ತಪ್ಪಿಗೆ ಬೆಳಕಿನ ಹಬ್ಬ ಹಲವರ ಬದುಕಲ್ಲಿ ನೋವಿನ ಕತ್ತಲೆ ಕವಿಯುವಂತೆ ಮಾಡಿದ್ದು ಮಾತ್ರ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us