/newsfirstlive-kannada/media/media_files/2025/10/24/hvr_bull-2025-10-24-06-53-40.jpg)
ಕರ್ನಾಟಕದ ಹೋರಿ ಹಬ್ಬ, ಹಟ್ಟಿ ಹಬ್ಬ ಎಂದೂ ಕರೆಯಲ್ಪಡುವ ಈ ಹೋರಿ ಸ್ಪರ್ಧೆ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯಾಗಿದೆ. ಬೆಳಕಿನ ಹಬ್ಬದ ಸಮಯದಲ್ಲಿ ಅಲಂಕರಿಸಿದ ಹೋರಿಗಳಿಗೆ ಕಟ್ಟಿದ ಬಹುಮಾನಗಳನ್ನು ಪಡೆಯಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರ ಪ್ರಾಣಪಕ್ಷಿಯೇ ಹಾರಿ ಹೋಗಿದೆ.
/filters:format(webp)/newsfirstlive-kannada/media/media_files/2025/10/24/hvr_bull_1-2025-10-24-06-53-51.jpg)
ಹೋರಿ ಬೆದರಿಸುವ ಸ್ಪರ್ಧೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಸಾಲು ಸಾಲು ಅನಾಹುತಗಳು ಸಂಭವಿಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಯುವಕ ಸೇರಿ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೊನ್ನೆ ದಾನೇಶ್ವರಿ ನಗರದ ನಿವಾಸಿ, ಹೆಸ್ಕಾಂ ನಿವೃತ್ತ ನೌಕರ ಚಂದ್ರಶೇಖರ್​ ಅವರು ಮನೆಗೆ ಹೊರಟಿದ್ದ ವೇಳೆ ಹಿಂದಿನಿಂದ ಬಂದು ಹೋರಿ ಗುದ್ದಿ ಮೃತಪಟ್ಟಿದ್ದರು.
ನಿನ್ನೆ ನಡೆದಿರುವ ಅನಾಹುತದಲ್ಲಿ ಮತ್ತೊಬ್ಬ ಯುವಕನ ಪ್ರಾಣಪಕ್ಷಿ ಹಾರಿಹೋಗಿದೆ. ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬ ನೋಡಲು ಹೋಗಿದ್ದಾಗ ಹೋರಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಭರತ್​ ಎಂಬ ಯುವಕ ಮೃತಪಟ್ಟಿದ್ದಾನೆ.
ಮಲ್ಲೂರು ಗ್ರಾಮದಲ್ಲಿ ಮನೆಗೆ ನುಗ್ಗಿದ ಹೋರಿ, ಹಲವರಿಗೆ ಗಾಯ
ಮತ್ತೊಂದೆಡೆ ಬ್ಯಾಡಗಿ ತಾಲೂಕಿನ ಮಲ್ಲೂರಲ್ಲಿ ಸ್ಪರ್ಧೆ ವೇಳೆ ಕೊಬ್ಬರಿ ಹೋರಿ ಮನೆಗೆ ನುಗ್ಗಿ ಹಲ್​ಚಲ್​ ಸೃಷ್ಟಿಸಿದೆ. ಈ ವೇಳೆ ಮನೆಯಲ್ಲಿದ್ದವರು, ಸುತ್ತಲಿದ್ದವರು ಎದ್ನೋ ಬಿದ್ನೋ ಅಂತ ಕಾಲ್ಕಿತ್ತಿದ್ದಾರೆ. ಕೊಬ್ಬರಿ ಹೋರಿ ಮನೆಗೆ ನುಗ್ಗಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:500ಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಕೋರ್ಸ್ ಮಾಡಿದ್ರೆ ನಿಮಗೂ ಚಾನ್ಸ್​
/filters:format(webp)/newsfirstlive-kannada/media/media_files/2025/10/24/hvr_bull_2-2025-10-24-06-54-01.jpg)
ಕಾಲು ಮುರಿದ್ರೂ, ಗುರಿ ಮುಟ್ಟಿದ ಕೊಬ್ಬರಿ ಹೋರಿ
ಹಾನಗಲ್​ನ ಅಕ್ಕಿಆಲೂರಿನಲ್ಲಿ ನಡೆದಿರುವ ಈ ಘಟನೆ ಜನ ಮನಗೆದ್ದಿದೆ. ಹಾನಗಲ್​ನ ಅಕ್ಕಿಆಲೂರಿನಲ್ಲಿ ಕೊಬ್ಬರಿ ಹೋರಿ ಸ್ಪರ್ಧೆ ವೇಳೆ ಅಖಾಡದಿಂದ ಜಿಗಿದ ಹೋರಿಗೆ ಕಾಲು ಮುರಿದುಕೊಂಡಿತ್ತು. ಆದ್ರೂ ಕೂಡ ಹೋರಿ, ಕುಂಟುತ್ತಲೇ ಮೂರು ಕಾಲಿನಲ್ಲಿ ಜಿಂಕೆಯಂತೆ ಓಡಿ ಗುರಿಮುಟ್ಟಿದೆ. ಇದನ್ನು ಕಂಡು ಮಾಲೀಕ ಹೋರಿಯನ್ನ ತಂಬಿಕೊಂಡು ಕಣ್ಣೀರಾಕಿದ್ದಾರೆ. ದೀಪಾವಳಿ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಹಲವು ಅನಾಹುತಗಳಿಗೆ ಕಾರಣವಾಗಿದ್ದು ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us