/newsfirstlive-kannada/media/media_files/2025/10/18/11-2025-10-18-13-06-00.png)
ಮಾಪುಟೊ:ದೋಣಿ ಮಗುಚಿಬಿದ್ದ ಪರಿಣಾಮ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಪೂರ್ವ ಆಫ್ರಿಕಾದ ಮೊಜಾಂಬಿಕ್​ನ (mozambique) ಬೀರಾ ಬಂದರಿನ ಕರಾವಳಿ ಪ್ರದೇಶದಲ್ಲಿ ನಡೆದಿದೆ. ಕಡಲಾಚೆಯಲ್ಲಿ ಲಂಗರು ಹಾಕಲಾದ ಹಡಗಿಗೆ (vessel anchored offshore) ಸಿಬ್ಬಂದಿಯನ್ನು ದಿನನಿತ್ಯದಂತೆ ವರ್ಗಾಯಿಸಲಾಗ್ತಿತ್ತು. ಆದ್ರೆ ಏಕಾಏಕಿ ದೋಣಿ ಮಗುಚಿಬಿದ್ದ ಪರಿಣಾಮ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ.
ದೋಣಿಯಲ್ಲಿ ಒಟ್ಟು 14 ಮಂದಿ ಭಾರತೀಯರು ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಇತ್ತ 14 ಭಾರತೀಯರ ಪೈಕಿ ಮೂವರು ನಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಸದ್ಯ ಕಾಣೆಯಾದ ಐವರು ಭಾರತೀಯರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳೀಯ ಅಧಿಕಾರಿಗಳು, ಕಡಲ ಸಂಸ್ಥೆಗಳು ಮತ್ತು ಭಾರತೀಯ ರಾಯಭಾರ ಕಚೇರಿ ಜಂಟಿಯಾಗಿ ಐವರ ಪತ್ತೆಗೆ ಶೋಧಕಾರ್ಯ ಮುಂದುವರೆಸಿದೆ.