ಬೆಳ್ಳಂಬೆಳಗ್ಗೇ ಭಾರೀ ಭೂಕಂಪ.. ಜೀವ ಬಿಟ್ಟ 7 ಜನರು, 150 ಮಂದಿ ಗಂಭೀರ!

ಶರೀಫ್ ನಗರದಲ್ಲಿ ಇವತ್ತು ಬೆಳಗ್ಗೆಯೇ ಭಾರೀ ಭೂಕಂಪ ಸಂಭವಿಸಿದ್ದು ಇದರಿಂದ ಏಳು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ನಗರದಲ್ಲಿನ ಕಟ್ಟಡಗಳಿಗೆ ಹೆಚ್ಚು ಹಾನಿಯಾಗಿದ್ದು

author-image
Bhimappa
Afghanistan_Earthquake_1
Advertisment

ಇಂದು ಬೆಳಗಿನ ಜಾವ ಅಫ್ಘಾನಿಸ್ತಾನದ ಮಜರ್ ಎ ಶರೀಫ್ ನಗರದಲ್ಲಿ 6.3 ತೀವ್ರತೆಯ ಭೂಕಂಪ ಉಂಟಾಗಿ 7 ಜನರು ಜೀವ ಕಳೆದುಕೊಂಡಿದ್ದು 150 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. 

ಮಜರ್ ಎ ಶರೀಫ್ ನಗರದಲ್ಲಿ ಇವತ್ತು ಬೆಳಗ್ಗೆಯೇ ಭಾರೀ ಭೂಕಂಪ ಸಂಭವಿಸಿದ್ದು ಇದರಿಂದ ಏಳು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ನಗರದಲ್ಲಿನ ಕಟ್ಟಡಗಳಿಗೆ ಹೆಚ್ಚು ಹಾನಿಯಾಗಿದ್ದು ಕಟ್ಟಡಗಳ ಅವಶೇಷಗಳು ಬಿದ್ದಿದ್ದರಿಂದ ಸುಮಾರು 150 ಜನರು ಗಂಭೀರವಾದ ಗಾಯಕ್ಕೆ ಒಳಗಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:World Cup Final; ಯುವತಿಯರು ವಿಶ್ವಕಪ್ ಗೆಲ್ಲುತ್ತಿದ್ದಂತೆ ರೋಹಿತ್ ಶರ್ಮಾ ಕಣ್ಣೀರು..!

Afghanistan_Earthquake

ಇನ್ನು ಅಫ್ಘಾನಿಸ್ತಾನದ ಮಜರ್ ಎ ಶರೀಫ್​ನಲ್ಲಿ ನಡೆದ ಘಟನೆ ಬಗ್ಗೆ ಅಮೆರಿಕ ಮಾಹಿತಿ ನೀಡಿದೆ. 5 ಲಕ್ಷಕ್ಕೂ ಅಧಿಕ ಜನರು ಇರುವ ಶರೀಫ್ ನಗರಕ್ಕೆ ಭೂಕಂಪ ಸಂಭವಿಸಿದೆ. ಇದು ಸುಮಾರು 28 ಕಿಲೋ ಮೀಟರ್ ಭೂಮಿಯ ಆಳದೊಳಗೆ ಭೂಮಿ ಕಂಪನವಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.

ಇನ್ನು ಭೂಕಂಪ ಆಗಬೇಕಾದರೆ ಆಗ ತಾನೇ ನಿದ್ದೆಯಿಂದ ಎದ್ದಿದ್ದ ಜನರು ಮನೆಯಿಂದ ಓಡೋಡಿ ಹೊರಗೆ ಬಂದಿದ್ದಾರೆ. ತೀವ್ರ ಆತಂಕಕ್ಕೆ ಒಳಗಾದ ಜನರು, ಬಯಲು ಪ್ರದೇಶಕ್ಕೆ ಬಂದು ನಿಂತಿದ್ದಾರೆ. ಮನೆಗಳು ಅಂತೂ ಹಾನಿಯಾಗಿವೆ. ಪಾಕಿಸ್ತಾನದ ಜೊತೆ ಘರ್ಷಣೆಯ ನಡುವೆ ಇದೊಂದು ಘಟನೆ ಅಫ್ಘಾನ್​ಗೆ ನಷ್ಟ ಉಂಟು ಮಾಡಿದೆ ಎಂದು ಹೇಳಬಹುದು.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AFGHANISTAN EARTHQUAKE Afghanistan border
Advertisment