Advertisment

ಮೆಕ್ಸಿಕೋ ಸೂಪರ್ ಮಾರ್ಕೆಟ್​​ನಲ್ಲಿ ಭಯಾನಕ ಸ್ಫೋಟ.. ಕಣ್ಮುಚ್ಚಿದ 23 ಜನ

ಸ್ಫೋಟ ಸಂಭವಿಸಿದಾಗ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೂಪರ್ ಮಾರ್ಕೆಟ್​ನಲ್ಲಿದ್ದವರು ಪ್ರಾಣ ಬಿಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ 40 ಸಿಬ್ಬಂದಿ, 10 ಆ್ಯಂಬುಲೆನ್ಸ್​ಗಳು ರಕ್ಷಣಾಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿವೆ.

author-image
Bhimappa
Mexico_Fire
Advertisment

ಸೂಪರ್ ಮಾರ್ಕೆಟ್​​ನಲ್ಲಿ ಭಯಾನಕವಾದ ಸ್ಫೋಟ ಸಂಭವಿಸಿ ಬೆಂಕಿಯಿಂದ ಮಕ್ಕಳು ಸೇರಿದಂತೆ 23 ಜನರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. 17 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಯುವ್ಯ ಮೆಕ್ಸಿಕೋದ ಹೆರ್ಮೊಸಿಲ್ಲೊ ನಗರದ ಸಿಟಿ ಸೆಂಟರ್​ನಲ್ಲಿನ ರಿಯಾಯತಿ ದರದ ಅಂಗಡಿ ವಾಲ್ಡೋ ಸ್ಟೋರ್​ನಲ್ಲಿ ಈ ಘಟನೆ ನಡೆದಿದೆ. 

Advertisment

ವಾರದ ಕೊನೆ ದಿನವಾಗಿದ್ದರಿಂದ ಮೆಕ್ಸಿಕೋದಲ್ಲಿ ಜನರು ತಮ್ಮ ಕುಟುಂಬಸ್ಥರಲ್ಲಿ ಮೃತಪಟ್ಟವರನ್ನು ನೆನೆಯುವಂತಹ ದಿನವನ್ನು ಆಚರಣೆ ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದರು. ಹೀಗಾಗಿ ವಸ್ತುಗಳನ್ನು ಖರೀದಿ ಮಾಡಲೆಂದು ನಗರದ ಸಿಟಿ ಸೆಂಟರ್​ನಲ್ಲಿನ ರಿಯಾಯತಿ ದರದ ಅಂಗಡಿ ವಾಲ್ಡೋ ಸ್ಟೋರ್​ನಲ್ಲಿ ಹೆಚ್ಚಿನ ಜನ ಸೇರಿದ್ದರು. ಇದೇ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಮಕ್ಕಳು ಸೇರಿ 23 ಮಂದಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​​ ಫೈನಲ್​ ಮಹಾಸಮರ; ಸೇಡಿಗೆ ಸೇಡು ತೀರಿಸಿ, ಮೊದಲ ಕಪ್​ಗೆ ಮುತ್ತಿಕ್ಕುತ್ತ ಟೀಮ್ ಇಂಡಿಯಾ?

Mexico_Fire_1

ಇನ್ನು ಈ ಘಟನೆಯಲ್ಲಿ ಹೆಚ್ಚಿನ ಜನರು ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ಅಟಾರ್ನಿ ಜನರಲ್ ಗುಸ್ತಾವೊ ಸಲಾಸ್ ಹೇಳಿದ್ದಾರೆ. ಈ ಸಂಬಂಧ ಪಾರದರ್ಶಕ ತನಿಖೆ ಆಗಬೇಕು ಎಂದಿದ್ದಾರೆ. ಪ್ರಾಣ ಕಳೆದುಕೊಂಡ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು ಸಲ್ಲಿಸುತ್ತೇನೆ ಎಂದು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಹೇಳಿದ್ದಾರೆ ಎನ್ನಲಾಗಿದೆ. 

Advertisment

ಭಯಾನಕವಾದ ಸ್ಫೋಟ ಸಂಭವಿಸಿದಾಗ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೂಪರ್ ಮಾರ್ಕೆಟ್​ನಲ್ಲಿದ್ದವರು ಪ್ರಾಣ ಬಿಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ 40 ಸಿಬ್ಬಂದಿ, 10 ಆ್ಯಂಬುಲೆನ್ಸ್​ಗಳು ರಕ್ಷಣಾಕಾರ್ಯ ನಡೆಸಿ 17 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿವೆ. ಆದರೆ ಸ್ಫೋಟ ಹೇಗೆ ಸಂಭವಿಸಿದೆ ಎನ್ನುವುದು ಈಗಲೂ ನಿಗೂಢವಾಗಿ ಇದೆ ಎಂದು ಹೇಳಲಾಗುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

lorry fire Mexico
Advertisment
Advertisment
Advertisment