Advertisment

ವಿಶ್ವಕಪ್​​ ಫೈನಲ್​ ಮಹಾಸಮರ; ಸೇಡಿಗೆ ಸೇಡು ತೀರಿಸಿ, ಮೊದಲ ಕಪ್​ಗೆ ಮುತ್ತಿಕ್ಕುತ್ತ ಟೀಮ್ ಇಂಡಿಯಾ?

ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಫೀಲ್ಡಿಂಗ್​ ಅತ್ಯಂತ ಕಳಪೆಯಾಗಿದೆ. ಮಿಸ್​​​​ಫೀಲ್ಡ್​ಗಳು, ಕ್ಯಾಚ್​ ಡ್ರಾಪ್​ಗಳನ್ನ ಮಾಡಿ ಕೈ ಸುಟ್ಟುಕೊಂಡಿದ್ದಾಗಿದೆ. ಇಂದು ಫೀಲ್ಡಿಂಗ್​ ವಿಭಾಗ ಸುಧಾರಿಸಿಕೊಳ್ಳಬೇಕಿದೆ.

author-image
Bhimappa
IND_WOLRD_CUP
Advertisment

ಮಹಿಳಾ ಏಕದಿನ ವಿಶ್ವಕಪ್​​ ಟೂರ್ನಿಯ ಮಹಾಸಮರಕ್ಕೆ ಕೆಲವೇ ಗಂಟೆಗಳು ಬಾಕಿ. ಕನಸಿನ ನಗರಿ ಮುಂಬೈನಲ್ಲಿ ವಿಶ್ವಕಪ್​ ಫೈನಲ್​ ಫೈಟ್​​ಗೆ ವೇದಿಕೆ ಸಜ್ಜಾಗಿದೆ. ಮೊದಲ ಬಾರಿ ಒನ್​ ಡೇ ವಿಶ್ವಕಪ್​ನ ಫೈನಲ್​ಗೆ ಎಂಟ್ರ ಕೊಟ್ಟಿರೋ ಸೌತ್​ ಆಫ್ರಿಕಾ, 3ನೇ ಬಾರಿ ಫೈನಲ್​ ಪ್ರವೇಶಿಸಿರೋ ಟೀಮ್​ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್​ ಗೆಲುವಿನ ಕನವರಿಕೆಯಲ್ಲಿವೆ. ಅಸಂಖ್ಯ ಕ್ರಿಕೆಟ್​ ಅಭಿಮಾನಿಗಳ ಕುತೂಹಲದ ಕಣ್ಣು ಫೈನಲ್​ ಫೈಟ್​​ ಮೇಲೆ ನೆಟ್ಟಿದೆ. 

Advertisment

ಇಂಡಿಯಾ.. ಇಂಡಿಯಾ.. ಈ ಘೋಷವಾಕ್ಯ ಇಂದು ನವಿ ಮುಂಬೈನ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಮೊಳಗಲಿದೆ. ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಗರ್ವದಿಂದ ಹಾರಾಡಲಿದೆ. ಬ್ಲ್ಯೂ ಜೆರ್ಸಿ ಸ್ಟೇಡಿಯಂನ ತುಂಬೆಲ್ಲಾ ರಾರಾಜಿಸಲಿದೆ. ಭಾರತದ ವೀರ ವನಿತೆಯರಿಗೆ ಚಿಯರ್​ ಮಾಡಲು ಅಭಿಮಾನಿಗಳ ಬಳಗ ಸಾಗರದಂತೆ ಸ್ಟೇಡಿಯಂಗೆ ಹರಿದು ಬರಲಿದೆ.

INDW_RSAW_2

2005ರ ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಫಸ್ಟ್​ ಟೈಂ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು. ಆಸ್ಟ್ರೇಲಿಯಾ ಎದುರು 98 ರನ್​ಗಳಿಂದ ಸೋತು ರನ್ನರ್​​ಅಪ್​ ಪಟ್ಟಕ್ಕೆ ತೃಪ್ತಿ ಪಟ್ಟುಕೊಂಡಿತ್ತು. 2017ರ ವಿಶ್ವಕಪ್​ನಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿ ಫೈನಲ್​ ತಲುಪಿದ್ದ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲೋ ಹಾಟ್​ ಫೇವರಿಟ್​ ಎನಿಸಿತ್ತು.

ಆದ್ರೆ, ಕ್ರಿಕೆಟ್​ ಕಾಶಿ ಲಾರ್ಡ್​ನಲ್ಲಿ ಕ್ಲೋಸ್​ ಮಾರ್ಜಿನ್​ನಲ್ಲಿ, ಕೇವಲ 9 ರನ್ ಅಂತರದಲ್ಲಿ ಸೋತು ಹೊರಬಿದ್ದಿತ್ತು. ಆದ್ರೆ, ಈ ಸೋಲು ಟೀಮ್​ ಇಂಡಿಯಾದಲ್ಲಿ ಹೊಸ ಎರಾ ಆರಂಭಕ್ಕೆ ಮುನ್ನುಡಿ ಬರೆದಿತ್ತು. ಅಂದು ತಂಡಕ್ಕೆ ಎಂಟ್ರಿ ಕೊಟ್ಟ ಯುವ ಪಡೆ ಇಂದು ಮತ್ತೊಮ್ಮೆ ತಂಡವನ್ನ ಫೈನಲ್​ಗೆ ಕೊಂಡೊಯ್ದಿದೆ. ತವರಿನಲ್ಲಿ ಚೊಚ್ಚಲ ಕಪ್​ ಗೆದ್ದು ಇತಿಹಾಸ ಸೃಷ್ಟಿಸೋ ತವಕದಲ್ಲಿದೆ. 

Advertisment

ವೈಜಾಗ್​ನಲ್ಲಿ ಸೋಲು.. ಮುಂಬೈನಲ್ಲಿ ಸೇಡು.!

ಯೆಸ್​.. ಟೀಮ್​ ಇಂಡಿಯಾ ಪಾಲಿಗಿದು ಪ್ರತಿಷ್ಟೆಯ ಸಮರ ಮಾತ್ರವಲ್ಲ, ಸೇಡಿನ ಸಮರವೂ ಹೌದು. ವೈಜಾಗ್​ನಲ್ಲಿ ನಡೆದಿದ್ದ ಇದೇ ಟೂರ್ನಿಯ ಲೀಗ್​ ಫೈಟ್​ನಲ್ಲಿ ಸೌತ್​ ಆಫ್ರಿಕಾ ಸೋಲಿನ ರುಚಿ ತೊರಿಸಿತ್ತು. 252 ರನ್​ಗಳ ಟಾರ್ಗೆಟ್​ನ ಜಸ್ಟ್​ 48.5 ಓವರ್​ಗಳಲ್ಲೇ ಸೌತ್​ ಆಫ್ರಿಕಾ ವನಿತೆಯರು ಚೇಸ್​ ಮಾಡಿದ್ರು. ಆ ಹೀನಾಯ ಸೋಲಿನ ಅಪಮಾನ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಕಿಚ್ಚು ಹಚ್ಚಿದೆ. 

INDW_RSAW_1

ಆರಂಭಿಕರಿಂದ ಬೇಕಿದೆ ಗುಡ್​ ಸ್ಟಾರ್ಟ್​, ಶೆಫಾಲಿ ಮೇಲೆ ಕಣ್ಣು.!

ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ರೂ ಆರಂಭಿಕರಿಂದ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಇಂದು ಓಪನರ್ಸ್​ ಉತ್ತಮ ಆರಂಭ ನೀಡಬೇಕಿದೆ. ಮುಖ್ಯವಾಗಿ ಸ್ಮೃತಿ ಮಂದಾನ ಸಿಡಿದೆದ್ರೆ ಉಳಿದ ಬ್ಯಾಟರ್ಸ್​ ಮೇಲೆ ಒತ್ತಡ ಕಡಿಮೆಯಾಗಲಿದೆ. ಪ್ರತಿಕಾ ರಾವಲ್​ ಇಂಜುರಿಯಿಂದ ಅದೃಷ್ಟದ ಅವಕಾಶ ಪಡೆದ ಶೆಫಾಲಿ ವರ್ಮಾ ಒಂದು ವರ್ಷದ ಬಳಿಕ ಒನ್​ ಡೇ ಟೀಮ್​ಗೆ ಕಮ್​ಬ್ಯಾಕ್​ ಮಾಡಿದ್ರು. ಆದ್ರೆ, ಕಮ್​​ಬ್ಯಾಕ್​ ಪಂದ್ಯದಲ್ಲಿ ವೈಫಲ್ಯ ಕಂಡಿರೋ ಶೆಫಾಲಿ ಇಂದು ಪರ್ಫಾಮ್​ ಮಾಡಲೇಬೇಕಿದೆ. 

ಮಿಡಲ್ ಆರ್ಡರ್ ಬ್ಯಾಟರ್ಸ್​​ ಪರ್ಫಾಮೆನ್ಸ್​ ನಿರ್ಣಾಯಕ.!

ಸೆಮಿಸ್​ ಸಮರದ ಗೆಲುವಿನ ರೂವಾರಿಗಳಾದ ಜೆಮಿಮಾ ರೋಡ್ರಿಗಸ್​, ನಾಯಕಿ ಹರ್ಮನ್​ ಪ್ರೀತ್​ ಕೌರ್​​ ಮೇಲೆ ನಿರೀಕ್ಷೆ ಹೆಚ್ಚಿದೆ. ಗುಡ್​​ ಟಚ್​ನಲ್ಲಿರೋ ಇಬ್ಬರೂ ಫೈನಲ್​ ಫೈಟ್​ನಲ್ಲೀ ಅದೇ ಆಟ ಮುಂದುವರೆಸಬೇಕಿದೆ. ಆಲ್​​ರೌಂಡರ್​ ದೀಪ್ತಿ ಶರ್ಮಾ, ವಿಕೆಟ್​ ಕೀಪರ್​ ರಿಚಾ ಘೋಷ್​ ಹಾಗೂ ಅಮನ್​ಜೋತ್​​ ಕೌರ್​​ ಬ್ಯಾಟ್​ನಿಂದ ಕೊಡುಗೆ ನೀಡಬೇಕಿದೆ. 

Advertisment

ಫೀಲ್ಡಿಂಗ್,  ಬೌಲಿಂಗ್​ ವಿಭಾಗವೇ ತಂಡಕ್ಕಿರೋ ಬಿಗ್​ ಟೆನ್ಶನ್​.!

ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಫೀಲ್ಡಿಂಗ್​ ಅತ್ಯಂತ ಕಳಪೆಯಾಗಿದೆ. ಮಿಸ್​​​​ಫೀಲ್ಡ್​ಗಳು, ಕ್ಯಾಚ್​ ಡ್ರಾಪ್​ಗಳನ್ನ ಮಾಡಿ ಕೈ ಸುಟ್ಟುಕೊಂಡಿದ್ದಾಗಿದೆ. ಇಂದು ಫೀಲ್ಡಿಂಗ್​ ವಿಭಾಗ ಸುಧಾರಿಸಿಕೊಳ್ಳಬೇಕಿದೆ. ಟೀಮ್​ ಇಂಡಿಯಾ ಬೌಲರ್ಸ್​ ಕೂಡ​ ಈ ಟೂರ್ನಿಯೂದ್ದಕ್ಕೂ ಇನ್​​​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಸೆಮಿಸ್​ ಸಮರದಲ್ಲೂ ದುಬಾರಿಯಾದ್ರು. ಸ್ಪಿನ್​ ಮ್ಯಾಜಿಕ್​ ಮಾಡ್ತಿರೋ ಶ್ರೀ ಚರಣಿ, ದೀಪ್ತಿ ಶರ್ಮಾಗೆ ಉಳಿದ ಬೌಲರ್ಸ್​ಗಳು ಸಾಥ್​ ನೀಡಬೇಕಿದೆ.

ಇದನ್ನೂ ಓದಿ:2025ರ ಮಹಿಳಾ ವಿಶ್ವಕಪ್; ಅತಿ ಹೆಚ್ಚು ರನ್​ ಗಳಿಸಿದವರು ಯಾರು.. ಸ್ಮೃತಿ ಮಂದಾನ ಸ್ಥಾನ?

IND_VS_RSA

ಸೌತ್​ ಆಫ್ರಿಕಾ ತಂಡದಲ್ಲಿದ್ದಾರೆ ‘ಸೈಲೆಂಟ್​ ಕಿಲ್ಲರ್ಸ್​’.!

ಸೌತ್​ ಆಫ್ರಿಕಾ ಆಟಗಾರರು ಸೈಲೆಂಟ್​ ಆಗಿದ್ರೂ ಪರ್ಫಾಮೆನ್ಸ್​ ವೈಲೆಂಟ್​ ಆಗಿರುತ್ತೆ. ಟೂರ್ನಿಯ ಹೈಯೆಸ್ಟ್​ ರನ್​ ಸ್ಕೋರರ್ ನಾಯಕಿ ಲಾರಾ ವೋಲ್ವಾರ್ಟ್​, ತಜ್ಮಿನ್​ ಬ್ರಿಟ್ಸ್​, ಮಾರಿಝಾನ್​ ಕಾಪ್​ ಹಾಗೂ ನದಿನ್​​ ಡಿ ಕ್ಲೆರ್ಕ್. ಈ ನಾಲ್ವರೇ ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಬಿಗ್​ಥ್ರೆಟ್​ ಎನಿಸಿದ್ದಾರೆ. ಹೋಮ್​ ಪಿಚ್​ನ ಅಡ್ವಾಂಟೇಜ್​ ಇದ್ರೂ ಟೀಮ್​ ಇಂಡಿಯಾ ಆಟಗಾರ್ತಿಯರು ಯಾಮಾರುವಂತೆ ಇಲ್ಲ. 

Advertisment

ಏಕದಿನ ವಿಶ್ವಕಪ್​ಗೆ ನೂತನ ಅಧಿಪತಿಯಾಗೋಕೆ ಟೀಮ್​ ಇಂಡಿಯಾ ಹಾಗೂ ಸೌತ್​ ಆಫ್ರಿಕಾ ರೆಡಿಯಾಗಿವೆ. ಅಭಿಮಾನಿಗಳು ಫೈನಲ್​ ಫೈಟ್​ಗಾಗಿ ಕಾತುರದಿಂದ ಕಾಯ್ತಿದ್ದಾರೆ. ಆದ್ರೆ, ಈ ಮಹತ್ವದ ಪಂದ್ಯಕ್ಕೆ ಮಳೆ ಟ್ವಿಸ್ಟ್​ ಕೊಡೋ ಸಾಧ್ಯತೆ ದಟ್ಟವಾಗಿದೆ. ಮಳೆ ಬಂದು ಪಂದ್ಯ ನಿಂತ್ರೂ ಟೆನ್ಶನ್​ ಆಗುವಂತೇನಿಲ್ಲ. ಇಂದು ಪಂದ್ಯ ರದ್ದಾದ್ರೂ ರಿಸರ್ವ್​ ಡೇ ಆಪ್ಶನ್​ ಇರೋದ್ರಿಂದ ನಾಳೆ ಮ್ಯಾಚ್​ ನಡೆಯಲಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Women's World Cup Ind vs SA
Advertisment
Advertisment
Advertisment