/newsfirstlive-kannada/media/media_files/2025/11/02/smriti_mandhana_new-2025-11-02-10-15-16.jpg)
13ನೇ ಐಸಿಸಿ ಮಹಿಳಾ ವಿಶ್ವಕಪ್ 2025 ಇದೇ ಸೆಪ್ಟೆಂಬರ್​ 30 ರಂದು ಆರಂಭವಾಗಿತ್ತು. ಸದ್ಯ ಮುಗಿಯುವ ಹಂತಕ್ಕೆ ಬಂದಿದ್ದು ಇಂದು ಫೈನಲ್​ ಫೈಟ್​ನಲ್ಲಿ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮಹಾಕದನ ನಡೆಯಲಿದೆ. ಈ ಮಹತ್ವದ ಟೂರ್ನಿಯನ್ನು ಭಾರತ ಹಾಗೂ ಶ್ರೀಲಂಕಾದಲ್ಲಿ ಆಯೋಜನೆ ಮಾಡಲಾಗಿತ್ತು. ಇದು ಈಗಿರುವಾಗ ಈ ವಿಶ್ವಕಪ್​ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಯಾರು?.
ಈ ಬಾರಿಯ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಆಸ್ಟ್ರೇಲಿಯಾದ ಬ್ಯಾಟರ್​ ಆಶ್ಲೀ ಗಾರ್ಡ್ನರ್ ಮೊದಲ ಸೆಂಚುರಿ ಬಾರಿಸಿದರು. ಇದೇ ಪಂದ್ಯದಲ್ಲಿ ನ್ಯೂಜಿಲೆಂಡ್​ ಆಲ್​ರೌಂಡರ್ ಕೂಡ ಸಿಡಿಲಬ್ಬರದ ಶತಕ ಬಾರಿಸಿದ್ದರು. ಕಳೆದ ಬಾರಿ, 2022ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ ಅವರು 56.55 ಸರಾಸರಿಯಲ್ಲಿ 509 ರನ್​ ಗಳಿಸಿದ್ದರು.
/filters:format(webp)/newsfirstlive-kannada/media/media_files/2025/11/02/smriti_mandhana_100-2025-11-02-10-15-06.jpg)
ಈ ಬಾರಿಯು ಪಂದ್ಯದ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ಮಾಡಿಕೊಂಡು ಬಂದ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಡ್ ಹೆಚ್ಚು ರನ್ ಬಾರಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಸ್ಮೃತಿ ಮಂದಾನ ಅವರು ಇದ್ದಾರೆ. ಈ ಇಬ್ಬರಿಗೂ 81 ರನ್​ಗಳ ಅಂತರವಿದೆ. ಒಂದು ವೇಳೆ ಇಂದಿನ ಫೈನಲ್​ ಕಾದಾಟದಲ್ಲಿ ಲಾರಾ ವೋಲ್ವಾರ್ಡ್ ಹೆಚ್ಚು ರನ್​ ಗಳಿಸದೇ ಔಟ್ ಆಗಿ, ಸ್ಮೃತಿ ಮಂದಾನ ಅವರು ಶತಕ ಬಾರಿಸಿದರೆ ಇಡೀ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಪ್ರತಿಕಾ ರಾವಲ್ ಕೂಡ ಟಾಪ್​ 5 ಪಟ್ಟಿಯಲ್ಲಿ ಇದ್ದರು. ಆದರೆ ಅವರು ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಂಭೀರವಾದ ಕಾಲಿನ ಗಾಯಕ್ಕೆ ಒಳಗಾಗಿದ್ದರಿಂದ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. 308 ರನ್ ಗಳಿಸಿರುವ ಪ್ರತಿಕಾ ರಾವಲ್ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಆದರೆ ದುರದೃಷ್ಟವಶಾತ್ ಇಂಜುರಿಯಿಂದ ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/24/smriti_mandhana_pratika_rawal-2025-10-24-08-13-39.jpg)
​ವಿಶ್ವಕಪ್​ ಪಂದ್ಯಗಳಲ್ಲಿ ತಂಡಗಳ ಜೊತೆ ಕಾದಾಡಿ ಭಾರತ ಹಾಗೂ ಆಫ್ರಿಕಾ ಫೈನಲ್​ಗೆ ಬಂದಿವೆ. ಇವತ್ತು ಯಾವ ಟೀಮ್ ಗೆಲ್ಲುತ್ತದೆಯೋ ಅದು ಮೊದಲ ಬಾರಿಗೆ ವಿಶ್ವಕಪ್​ ಅನ್ನು ಮುಡಿಗೇರಿಸಿಕೊಳ್ಳಲಿದೆ. ಏಕೆಂದರೆ ಈವರೆಗೂ ಈ ಎರಡು ತಂಡಗಳು ವಿಶ್ವಕಪ್​ ಗೆದ್ದುಕೊಂಡಿಲ್ಲ. ಹೀಗಾಗಿ ಇಂದು ನಡೆಯುವ ಫೈನಲ್ ಮ್ಯಾಚ್ ಎರಡು ತಂಡಗಳಿಗೂ ಅತ್ಯಂತ ಮುಖ್ಯವಾಗಿದೆ.
ಸದ್ಯ ವಿಶ್ವಕಪ್​ನಲ್ಲಿ ಹೆಚ್ಚು ರನ್​ ಗಳಿಸಿದ ಆಟಗಾರ್ತಿಯರು
- ಲಾರಾ ವೋಲ್ವಾರ್ಡ್ (ಆಫ್ರಿಕಾ)- 470 ರನ್​ಗಳು
- ಸ್ಮೃತಿ ಮಂದಾನ (ಭಾರತ)- 389
- ಆಶ್ಲೀ ಗಾರ್ಡ್ನರ್ (ಆಸ್ಟ್ರೇಲಿಯಾ)- 328
- ಪ್ರತೀಕಾ ರಾವಲ್ (ಭಾರತ)- 308
- ಫೋಬೆ ಲಿಚ್‌ಫೀಲ್ಡ್ (AUS) 304
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us