/newsfirstlive-kannada/media/media_files/2025/11/02/indw_rsaw-2025-11-02-09-02-41.jpg)
ಬಲಿಷ್ಠ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ ಯುವತಿಯರು ಇಂದು ಗೆಲ್ಲುವು ಫೇವರಿಟ್ ಎನಿಸಿದ್ದಾರೆ. ತವರಿನಲ್ಲಿ ಪಂದ್ಯ ನಡೆಯುವುದರಿಂದ ಹರ್ಮನ್ ಪ್ರೀತ್ ಪಡೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಹೈವೋಲ್ಟೇಜ್​ ಪಂದ್ಯಕ್ಕೆ ವರುಣಾರ್ಭಟ ಸಂಭವಿಸಿದರೆ ಮುಂದಿನ ಯೋಜನೆ ಹೇಗಿದೆ?.
ಫೈನಲ್ ಪಂದ್ಯವಾಗಿದ್ದರಿಂದ ಭಾರತದ ಯುವತಿಯರು ಹಾಗೂ ಸೌತ್ ಆಫ್ರಿಕಾದ ಆಟಗಾರ್ತಿಯರು ಇಬ್ಬರು ವಿಶ್ವಕಪ್​ ಮೇಲೆ ಗುರಿಯಿಟ್ಟಿದ್ದಾರೆ. ಯಾರು ಗೆಲ್ಲುತ್ತಾರೆ ಎನ್ನುವುದು ಹೆಚ್ಚು ಕುತೂಹಲ ಆಗಿದ್ದರಿಂದ ಫೈನಲ್​ ಮ್ಯಾಚ್ ಎಲ್ಲದಕ್ಕೂ ಉತ್ತರ ಕೊಡಲಿದೆ. ನವಿ ಮುಂಬೈಯ ಡಾ.ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೈದಾನ ಸುತ್ತಮುತ್ತ ವಾತಾವರಣದ ಮುನ್ಸೂಚನೆ ಬಗ್ಗೆ ಹೇಳುವುದಾದರೆ, ಶೇಕಡಾ 62 ರಷ್ಟು ಮೋಡ ಕವಿದ ವಾತಾವರಣ ಇರಲಿದೆ. ಫೈನಲ್ ಪಂದ್ಯ ನಡೆಯಬೇಕಾದರೆ ಶೇಕಡಾ 63 ರಷ್ಟು ಮಳೆ ಬರುವ ಸಾಧ್ಯತೆ ಇದೆ. ಇದು ಬಿಟ್ಟರೇ ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಶೇಕಡಾ 50 ರಷ್ಟು ಮಳೆ ಸುರಿಯುವುದು ಪಕ್ಕಾ ಎಂದು ಹೇಳಲಾಗಿದೆ.
/filters:format(webp)/newsfirstlive-kannada/media/media_files/2025/11/02/indw_rsaw_2-2025-11-02-09-02-54.jpg)
ಇಷ್ಟೇ ಅಲ್ಲ ಭಾರತ ಹವಾಮಾನ ಇಲಾಖೆ (ಐಎಂಡಿ) ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ ಎನ್ನಬಹುದು. ಏಕೆಂದರೆ ಇಂದು ಮಹಾರಾಷ್ಟ್ರದಲ್ಲಿ ವರುಣಾರ್ಭಟ ಇರಲಿದೆ ಎಂದು ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ. ಮುಂಬೈ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಜೋರಾದ ಮಳೆಯಾಗಲಿದೆ ಎಂದು ಹೇಳಿದೆ.
ಈ ಎಲ್ಲ ಕಾರಣಗಳಿಂದ ಇವತ್ತು ಭಾರತ ಹಾಗೂ ಆಫ್ರಿಕಾದ ನಡುವಿನ ಪಂದ್ಯಕ್ಕೆ ಸ್ವಲ್ಪ ಮಳೆ ಬಂದರೆ, ಓವರ್​ಗಳನ್ನು ಕಡಿಮೆ ಮಾಡಿ ಆಡಿಸಲಾಗುತ್ತದೆ. ಒಂದು ವೇಳೆ ಫೈನಲ್​ ಮ್ಯಾಚ್ ನಡೆಯದಂತೆ ಧಾರಾಕಾರವಾಗಿ ಮಳೆ ಸುರಿದರೆ ನಾಳೆ ಅಂದರೆ ನವೆಂಬರ್​ 3 ರಂದು ಮ್ಯಾಚ್ ಆಡಿಸಲಾಗುತ್ತದೆ. ಹೀಗಾಗಿ ಇಂದು ಮಳೆ ಬಂದರೂ ಯಾವುದೇ ಆತಂಕ ಪಡಬೇಕಾಗಿಲ್ಲ. ಅಪ್ಪಿತಪ್ಪಿ ನಾಳೆನೂ ಪಂದ್ಯ ನಡೆಯುವಾಗ ವರುಣನ ಆರ್ಭಟ ಮುಂದುವರೆಸಿದರೆ ಎರಡು ತಂಡಗಳಿಗೆ ವಿಶ್ವಕಪ್​ ಅನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us