Advertisment

IND vs RSA; ಇವತ್ತು ಹೈವೋಲ್ಟೇಜ್ ಫೈನಲ್​ ಮ್ಯಾಚ್​.. ಗೆದ್ದವರ ಮುಡಿಗೆ ವಿಶ್ವಕಪ್​​

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಯುವತಿಯರು ಇಂಗ್ಲೆಂಡ್​ ತಂಡವನ್ನು ಸೋಲಿಸಿ ಫೈನಲ್​ಗೆ ಬಂದಿದೆ. ಇತ್ತ ಹರ್ಮನ್​ಪ್ರೀತ್ ಕೌರ್ ಪಡೆ, ಹಾಲಿ ಚಾಂಪಿಯನ್ ಬಲಿಷ್ಠ​ ಆಸ್ಟ್ರೇಲಿಯಾ ಟೀಮ್ ಅನ್ನು ಸೆಮಿಸ್​ನಲ್ಲಿ ಸದೆ ಬಡಿದು ಫೈನಲ್​ಗೆ ಬಂದಿದೆ.

author-image
Bhimappa
IND_VS_RSA
Advertisment

ಇಂದು 2025ರ ಐಸಿಸಿ ಮಹಿಳಾ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವತಿಯರು ಹಾಗೂ ದಕ್ಷಿಣ ಆಫ್ರಿಕಾದ ವುಮೆನ್ಸ್​ ನಡುವೆ ಬಿಗ್ ಫೈಟ್​ ನಡೆಯಲಿದೆ. ಈ ಎರಡೂ ತಂಡಗಳಲ್ಲಿ ಯಾರು ವಿಜಯ ಸಾಧಿಸಿದರೂ ಮೊದಲ ವರ್ಲ್ಡ್​​ಕಪ್​ಗೆ ಮುತ್ತಿಡಲಿದ್ದಾರೆ. 

Advertisment

ನವಿ ಮುಂಬೈಯ ಡಾ.ಡಿವೈ ಪಾಟೀಲ್​ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಭಾರತದ ಯುವತಿಯರು ಹಾಗೂ ಆಫ್ರಿಕಾದ ವುಮೆನ್ಸ್​ ತಂಡದ ನಡುವೆ ವಿಶ್ವಕಪ್​ ಫೈನಲ್​ ಹಣಾಹಣಿ ನಡೆಯಲಿದೆ. ಟೀಮ್ ಇಂಡಿಯಾವನ್ನು ಹರ್ಮನ್​ಪ್ರೀತ್ ಕೌರ್ ಮುನ್ನಡೆಸುತ್ತಿದ್ರೆ, ಅತ್ತ ಆಫ್ರಿಕಾ ತಂಡವನ್ನು ಲಾರಾ ವೋಲ್ವಾರ್ಡ್ ಸಾರಥ್ಯದಲ್ಲಿ ಮೈದಾನಕ್ಕೆ ಇಳಿಯಲಿದೆ. ಎರಡು ತಂಡಗಳು ಬಲಿಷ್ಠವಾಗಿದ್ದು ಮದಗಜಗಳಂತೆ ಕಾದಾಡುವುದು ಮಾತ್ರ ಫೀಕ್ಸ್​. 

Smriti_Mandhana

ಡಾ.ಡಿವೈ ಪಾಟೀಲ್​ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಪಂದ್ಯವೂ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಫೈನಲ್ ಪಂದ್ಯವಾಗಿದ್ದರಿಂದ ಎರಡು ತಂಡದಲ್ಲಿ ಕುತೂಹಲ, ನಿರೀಕ್ಷೆ ದುಪ್ಪಟ್ಟು ಆಗಿದೆ. ಅದರಂತೆ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಕೂಡ ದೊಡ್ಡ ಪ್ರಮಾಣದಲ್ಲೇ ಸ್ಟೇಡಿಯಂಗೆ ಆಗಮಿಸಲಿದ್ದಾರೆ. ಟೀಮ್ ಇಂಡಿಯಾದ ವಿಶ್ವಕಪ್​ ಗೆಲ್ಲುವ ಫೆವರೀಟ್​ ತಂಡ ಎನಿಸಿದೆ. ಏಕೆಂದರೆ ತವರಿನ ಅಂಗಳವಾಗಿದ್ದರಿಂದ ಸಾಮಾನ್ಯವಾಗಿ ಭಾರತದ ಆಟಗಾರ್ತಿಯರೇ ಹೆಚ್ಚು ಸಾಮಾರ್ಥ್ಯ ಪ್ರದರ್ಶಿಸಬಲ್ಲರು. 

ಭಾರತದ ಮಹಿಳಾ ತಂಡದಲ್ಲಿ ಸ್ಟಾರ್​ ಆಟಗಾರ್ತಿಯರಾದ ಸ್ಮೃತಿ ಮಂದಾನ, ಜೆಮಿಮಾ ರೋಡ್ರಿಗಸ್, ನಾಯಕಿ ಹರ್ಮನ್​ಪ್ರೀತ್ ಕೌರ್ ಅವರ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಯುವತಿಯರು ಇಂಗ್ಲೆಂಡ್​ ತಂಡವನ್ನು ಸೋಲಿಸಿ ಫೈನಲ್​ಗೆ ಬಂದಿದೆ. ಇತ್ತ ಹರ್ಮನ್​ಪ್ರೀತ್ ಕೌರ್ ಪಡೆ, ಹಾಲಿ ಚಾಂಪಿಯನ್ ಬಲಿಷ್ಠ​ ಆಸ್ಟ್ರೇಲಿಯಾ ಟೀಮ್ ಅನ್ನು ಸೆಮಿಸ್​ನಲ್ಲಿ ಸದೆ ಬಡಿದು ಫೈನಲ್​ಗೆ ಬಂದಿದೆ. 

Advertisment

ಇದನ್ನೂ ಓದಿ: ಕ್ರಿಕೆಟ್​ ಲೋಕದ ಸೆನ್ಸೇಷನ್ ಜೆಮಿಮಾ ರೋಡ್ರಿಗಸ್.. ಸಕಲಕಲಾವಲ್ಲಭೆ ಈ ಸ್ಟಾರ್​​ ಆಟಗಾರ್ತಿ!

IND_VS_RSA_1

ಇದುವರೆಗೆ ಆಸ್ಟ್ರೇಲಿಯಾ ತಂಡ 7 ಬಾರಿ ವಿಶ್ವಕಪ್​ಗೆ ಮುತ್ತಿಕ್ಕಿದೆ. ಹಾಗೇ ಇಂಗ್ಲೆಂಡ್ ಮಹಿಳೆಯರು ಕೂಡ ನಾವೇನು ಕಮ್ಮಿ ಇಲ್ಲ ಎನ್ನುವಂತೆ 4 ಬಾರಿ ವರ್ಲ್ಡ್​ಕಪ್​ ಗೆದ್ದುಕೊಂಡಿದ್ದಾರೆ. ಈ ಮೊದಲು ಟೀಮ್ ಇಂಡಿಯಾ ಎರಡು ಬಾರಿ ಫೈನಲ್​ಗೆ ಹೋದರೂ ಕಪ್​ ಗೆಲ್ಲದೇ ನಿರಾಸೆ ಅನುಭವಿಸಿತ್ತು. ಈ ಬಾರಿ ಮತ್ತೆ ಅವಕಾಶ ಒಲಿದು ಬಂದಿದ್ದು ದೊಡ್ಡ ಪ್ರಯತ್ನ ಮಾಡಿ ಮೊದಲ ವಿಶ್ವಕಪ್​ ಅನ್ನು ಮುಡಿಗೇರಿಸಿಕೊಳ್ಳಬೇಕಿದೆ. 

ಗ್ರೂಪ್ ಹಂತದಲ್ಲಿ ಟೀಮ್ ಇಂಡಿಯಾ 7 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಮೂರು ಮ್ಯಾಚ್ ಸೋತರೇ ಉಳಿದ ಮೂರರಲ್ಲಿ ಜಯ ಸಾಧಿಸಿದೆ. 7 ಪಾಯಿಂಟ್​ಗಳೊಂದಿಗೆ +0.628 ನೆಟ್​ ರನ್ ರೇಟ್ ಹೊಂದಿದೆ. ಹಾಗೇ ಸೌತ್ ಆಫ್ರಿಕಾದ್ದು ನೋಡುವುದಾದರೆ, 7 ಮ್ಯಾಚ್​ಗಳಲ್ಲಿ 3 ಸೋತು 5 ರಲ್ಲಿ ಗೆಲುವು ಸಾಧಿಸಿದೆ. 10 ಅಂಕಗಳ ಜೊತೆಗೆ -0.379 ರನ್​ ರೇಟ್ ಹೊಂದಿದೆ. ​  

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Women’s ODI World Cup 2025 Women's World Cup
Advertisment
Advertisment
Advertisment