/newsfirstlive-kannada/media/media_files/2025/11/01/jemimah_rodrigues-1-2025-11-01-13-26-50.jpg)
ಜೆಮಿಮಾ ರೋಡ್ರಿಗಸ್​​ ಕ್ರಿಕೆಟ್​ ಲೋಕದಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದಾರೆ. ಆಸಿಸ್​ ವಿರುದ್ಧದ ಎಂಟರ್​ಟೈನಿಂಗ್​ ಇನ್ನಿಂಗ್ಸ್​ಗೆ ಕ್ರಿಕೆಟ್​​ ಲೋಕ ಫಿದಾ ಆಗಿದೆ. ಅಸಲಿಗೆ ಜೆಮಿಮಾ ರೋಡ್ರಿಗಸ್​​ ಎಂಟರ್​ಟೈನ್​ಮೆಂಟ್​ನ ಕಂಪ್ಲೀಟ್​ ಪ್ಯಾಕೇಜ್​. ರಿಯಲ್​ ಆಲ್​​ರೌಂಡರ್​ ಅಂದ್ರೆ ಈಕೆನೇ. ಬ್ಯಾಟಿಂಗ್​ ಮಾಡ್ತಾಳೆ, ಫೀಲ್ಡಿಂಗ್​ ಮಾಡ್ತಾಳೆ, ಹಾಡ್ತಾಳೆ, ಕುಣೀತಾಳೆ, ಗಿಟಾರ್​ ನುಡಿಸಿ ರಂಜಿಸ್ತಾಳೆ.
ಜೆಮಿಮಾ ರೋಡ್ರಿಗಸ್​, ಕ್ರಿಕೆಟ್​ ಲೋಕದ ಸೆನ್ಸೇಷನ್​. ಕ್ರಿಕೆಟ್​ ಜಗತ್ತಿನಲ್ಲಿ ಸದ್ಯ ಸೆಂಚುರಿ ಸ್ಟಾರ್ ಜೆಮಿಮಾ ಆರಾಧನೆ ನಡೀತಿದೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಸ್​ ಕದನದ ಶತಕದ ಇನ್ನಿಂಗ್ಸ್​ಗೆ ಕ್ರಿಕೆಟರ್ಸ್​, ಕ್ರಿಕೆಟ್​ ಎಕ್ಸ್​ಪರ್ಟ್ಸ್​, ಫ್ಯಾನ್ಸ್​ ಎಲ್ಲರೂ ಫಿದಾ ಆಗಿದ್ದಾರೆ.
/filters:format(webp)/newsfirstlive-kannada/media/media_files/2025/11/01/jemimah_rodrigues_new-2025-11-01-13-28-33.jpg)
ಜೆಮಿಮಾ ಇದ್ದಲ್ಲಿ ಎಂಟರ್​ಟೈನ್​ಮೆಂಟ್​​​ಗಿಲ್ಲ ಕೊರತೆ.!
ಎಂಟರ್​​ಟೈನ್​​ಮೆಂಟ್​ ವಿಚಾರಕ್ಕೆ ಬಂದ್ರೆ ಟೀಮ್​ ಇಂಡಿಯಾದ ಈ ಯುವ ಆಟಗಾರ್ತಿ ಕಂಪ್ಲೀಟ್ ಪ್ಯಾಕೇಜ್​.​ ಆನ್​​ಫೀಲ್ಡ್​​ನಲ್ಲಿ ಆಡೋದಕ್ಕೂ ಸೈ, ಆಫ್​ ದ ಫೀಲ್ಡ್​ನಲ್ಲಿ ಮಸ್ತಿ ಮಾಡೋಕೂ ಜೈ.ನೋಡೋಕೆ ಸಣ್ಣ ದೇಹ. ಆದ್ರೆ, ಸಲೀಸಾಗಿ ಬಿಗ್​ ಬೌಂಡರಿಗಳನ್ನ ಕ್ಲೀಯರ್​ ಮಾಡೋ ಕಲೆ ಈಕೆಗಿದೆ. ಪ್ರೆಶರ್​ ಸಿಚ್ಯುವೇಶನ್​​​ನಲ್ಲಿ ಕೂಲ್​ & ಕಾಮ್​ ದಿಟ್ಟ ಇನ್ನಿಂಗ್ಸ್​ ಕಟ್ಟೋ ಸ್ಕಿಲ್​ ಇದೆ. ಆಸಿಸ್​ ವಿರುದ್ಧದ ಸೆಮಿಸ್​ ಪಂದ್ಯದಲ್ಲಿ ಸಿಡಿಸಿದ ಒಂದು ಶತಕ ಸಾಕು ಈಕೆಯ ಬ್ಯಾಟಿಂಗ್​​ನ ತಾಕತ್ತಿನ ಬಗ್ಗೆ ಹೇಳೋದಕ್ಕೆ..
ಬ್ಯಾಟಿಂಗ್​ ಸ್ಕಿಲ್​ ಮಾತ್ರವಲ್ಲ, ಫೀಲ್ಡಿಂಗ್​ನಲ್ಲೂ ಜೆಮಿಮಾ ರೋಡ್ರಿಗಸ್​ ವಂಡರ್​ ಸೃಷ್ಟಿಸೋ ಕಲೆಗಾತಿ. ಸ್ಟನ್ನಿಂಗ್​​ ಫೀಲ್ಡಿಂಗ್​ನಿಂದಲೇ ಎಲ್ಲರನ್ನೂ ನಿಬ್ಬೆರಗಾಗಿಸಿ ಬಿಡ್ತಾರೆ. ಆನ್​​ಫೀಲ್ಡ್​ ಆಟ ಹೊರತಾಗಿ ಆಫ್​ ದ ಫೀಲ್ಡ್​ನಲ್ಲೂ ಜೆಮಿಮಾಗೆ ಹಲವು ಕಲೆಗಳಿವೆ. ಅದ್ರಲ್ಲೊ ಒಂದು ಸಿಂಗಿಂಗ್​. ಕೈಗೊಂದು ಮೈಕ್​ ಸಿಕ್ರೆ ಸಾಕು ಹಾಡು ಹಾಡಿ ಜಮಾಯಿಸ್ತಾರೆ. ಈಕೆಯ ಗಾನಸುದೆಗೆ ತಲೆ ಭಾಗದವರಿಲ್ಲ.
ಇದನ್ನೂ ಓದಿ: ಜೆಮಿಮಾ ಅನುಭವಿಸಿದ್ದು ನೋವು, ಹತಾಶೆ, ಅಳು.. ಕೊಹ್ಲಿಯ ಹೃದಯ ತುಂಬಿ ಮಾತುಗಳೇ ಶಕ್ತಿ!
/filters:format(webp)/newsfirstlive-kannada/media/media_files/2025/11/01/jemimah_rodrigues_news-2025-11-01-13-26-40.jpg)
ಜೆಮಿಮಾ ಪ್ರೋಫೆಶನಲ್​ ಗಿಟಾರಿಸ್ಟ್
ಹಾಡು ಹಾಡೋದು ಮಾತ್ರವಲ್ಲ, ಗಿಟಾರ್​​ ಬಾರಿಸೋದ್ರಲ್ಲೂ ಪಂಟರ್​. ಚಿಕ್ಕಂದಿನಿಂದಲೇ ಗಿಟಾರ್​ ನುಡಿಸೋದನ್ನ ಜೆಮಿಮಾ ಕಲಿತಿದ್ದಾರೆ. ಪ್ರೋಫೆಶನಲ್​ ಗಿಟಾರಿಸ್ಟ್​​ಗಳನ್ನ ಮಿರಿಸೋ ಮಟ್ಟಿಗೆ ಸ್ಕಿಲ್ ಜೆಮಿಮಾಗಿದೆ. ಹಾಡು, ಮ್ಯೂಸಿಕ್ಕಿನ ಜೊತೆಗೆ ಡಾನ್ಸ್​ ಕೂಡ ಜೆಮಿಮಾ ಫ್ಯಾಷನ್​​. ಜೆಮಿಮಾ ತನ್ನ ಯುನಿಕ್​ ಸ್ಟೆಪ್ಸ್​​ನಿಂದಲೇ ಸಖತ್​ ಫೇಮಸ್​​ ಆಗಿದ್ದಾರೆ. ಆಗಾಗ ಆನ್​ಫೀಲ್ಡ್​ನಲ್ಲಿ ಜೆಮಿಮಾ ಹಾಕೋ ಈ ಸ್ಟೆಪ್ಸ್​ ಇಂಟರ್​​ನೆಟ್​​ನಲ್ಲಿ ಸದ್ದು ಮಾಡ್ತಾನೆ ಇರುತ್ವೆ.
ಇದೆಲ್ಲದರ ಹೊರತಾಗಿ ಜೆಮಿಮಾ ರೋಡ್ರಿಗಸ್​​ಗೆ ಒಂದು ವಿಶೇಷವಾದ ಹವ್ಯಾಸವಿದೆ. ಪೆಟ್ಸ್​ ಅಂದ್ರೆ ಜೆಮಿಮಾಗೆ ಪ್ರಾಣ. ಅದ್ರಲ್ಲೂ ಶ್ವಾನಗಳ ಮೇಲೆ ವಿಶೇಷವಾದ ಪ್ರೀತಿಯಿದೆ. ಶ್ವಾನವೊಂದನ್ನ ಸಾಕಿರೋ ಜೆಮಿಮಾ ಅದಕ್ಕೆ ಜೇಡ್​ ಎಂದು ಹೆಸರಿಟ್ಟಿದ್ದಾರೆ. ಮೊನ್ನೆ ಅಭ್ಯಾಸದ ವೇಳೆ ಸ್ಟೇಡಿಯಂಗೂ ತಮ್ಮ ಶ್ವಾನ ಕರೆದುಕೊಂಡು ಬಂದಿದ್ರು. ಬ್ಯಾಟಿಂಗ್​, ಫೀಲ್ಡಿಂಗ್​, ಸಿಂಗಿಂಗ್, ಡಾನ್ಸಿಂಗ್​, ಗಿಟಾರಿಸ್ಟ್​.. ಜೆಮಿಮಾ ಒಂತಾರಾ ಸಕಲಕಲಾವಲ್ಲಭೆ. ಅದಕ್ಕೆ ಹೇಳಿದ್ದು ಈಕೆ ರಿಯಲ್​ ಆಲ್​​ರೌಂಡರ್​, ಕಂಪ್ಲೀಟ್​​ ಎಂಟರ್​ಟೈನರ್​ ಅಂತಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us