/newsfirstlive-kannada/media/media_files/2025/09/05/ceo_indians-2025-09-05-07-56-26.jpg)
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಟ್ ಹೌಸ್ನಲ್ಲಿ ಆಯೋಜನೆ ಮಾಡಿದ್ದ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಲು ಉನ್ನತ ಮಟ್ಟದ ತಂತ್ರಜ್ಞಾನ ಸಿಇಒಗಳ ಪಟ್ಟಿಯನ್ನು ಸಿದ್ಧ ಪಡಿಸಲಾಗಿದೆ. ವಿಶೇಷ ಎಂದರೆ ಈ ಡಿನ್ನರ್ ಪಾರ್ಟಿಯಲ್ಲಿ ಭಾರತೀಯ ಮೂಲದ ಐವರು ಸಿಇಒಗಳು ಭಾಗಿಯಾಗಿದ್ದರು.
ವೈಟ್ ಹೌಸ್ನ ರೋಸ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಡಿನ್ನರ್ನಲ್ಲಿ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್, ಆ್ಯಪಲ್ ಸಿಇಒ ಟಿಮ್ ಕುಕ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಸೇರಿದಂತೆ ಡಜನ್ ಲೆಕ್ಕದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಹಾಗೂ ಟೆಕ್ ಸಂಸ್ಥೆಗಳಿಗೆ ಸೇರಿದ ಇತರೆ ಕಾರ್ಯನಿರ್ವಾಹ ಅಧಿಕಾರಿಗಳು ಭಾಗಿಯಾಗಿದ್ದರು. ಇನ್ನೊಂದು ಮುಖ್ಯ ಸಂಗತಿ ಎಂದರೆ ಟ್ರಂಪ್ ಆಪ್ತ ಎನ್ನಲಾಗಿದ್ದ ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾದ ಬಾಸ್ ಎಲಾನ್ ಮಸ್ಕ್ ಈ ಲಿಸ್ಟ್ನಲ್ಲಿ ಇರಲಿಲ್ಲ.
ಇದನ್ನೂ ಓದಿ: ಸಮೀರ್ MD ಮೇಲೆ ಕೇಸ್ಗೆ ಕಾರಣವೇನು.. ಧರ್ಮಸ್ಥಳ ಸಂಬಂಧ ಅಲ್ಲವೇ ಅಲ್ಲ- ಗಿರೀಶ್ ಮಟ್ಟಣ್ಣನವರ್
ಈ ಡಿನ್ನರ್ ಪಾರ್ಟಿ ಆಯೋಜನೆ ಮಾಡಿರುವ ಉದ್ದೇಶ ಅಮೆರಿಕಾದಲ್ಲೇ ಟೆಕ್ ಕಂಪನಿಗಳನ್ನು ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತೆ ತಿಳಿ ಹೇಳುವುದಾಗಿತ್ತು. ರೋಸ್ ಗಾರ್ಡನ್ ಕ್ಲಬ್ ಇದು ವಾಷಿಂಗ್ಟನ್ನ ಅಥವಾ ವಿಶ್ವದ ಅತ್ಯಂತ ಪವರ್ಫುಲ್ ಸ್ಥಳ ಎಂದು ಹೇಳಬಹುದು. ಏಕೆಂದರೆ ಅಮೆರಿಕದ ಅಧ್ಯಕ್ಷರು ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಬ್ಯುಸಿನೆಸ್ಮ್ಯಾನ್ಗಳ ಜೊತೆ ಇಲ್ಲಿ ಔತಣ ಕೂಟ ಆಯೋಜಿಸುತ್ತಾರೆ. ಇದೇ ರೀತಿ ಇಲ್ಲಿ ಡಿನ್ನರ್ಗಳು ನಡೆಯಲಿವೆ.
ವೈಟ್ ಹೌಸ್ ಗೆಸ್ಟ್ಗಳ ಪಟ್ಟಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ (ಭಾರತೀಯ), ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (ಭಾರತೀಯ), OpenAI ಸಿಇಒ ಸ್ಯಾಮ್ ಆಲ್ಟ್ಮನ್, ಒರಾಕಲ್ ಸಿಇಒ ಸಫ್ರಾ ಕ್ಯಾಟ್ಜ್, ಬ್ಲೂ ಆರಿಜಿನ್ ಸಿಇಒ ಡೇವಿಡ್ ಲಿಂಪ್, ಸಿಇಒ ಸಂಜಯ್ ಮೆಹ್ರೋತ್ರಾ (ಭಾರತೀಯ), TIBCO ಸಾಫ್ಟ್‌ವೇರ್ ಅಧ್ಯಕ್ಷ ವಿವೇಕ್ ರಣದಿವ್ (ಭಾರತೀಯ), ಪಳಂತಿರ್ ಕಾರ್ಯನಿರ್ವಾಹಕ ಶ್ಯಾಮ್ ಶಂಕರ್ (ಭಾರತೀಯ), ಸ್ಕೇಲ್ AI ಸಂಸ್ಥಾಪಕ ಮತ್ತು CEO ಅಲೆಕ್ಸಾಂಡರ್ ವಾಂಗ್ ಮತ್ತು Shift4 ಪೇಮೆಂಟ್ಸ್ CEO ಜೇರೆಡ್ ಐಸಾಕ್ಮನ್ ಅವರು ಈ ಲಿಸ್ಟ್ನಲ್ಲಿ ಇದ್ದರು.
ಇವರೆಲ್ಲರೂ ಡೋನಾಲ್ಡ್ ಟ್ರಂಪ್ ಕಳೆದ ರಾತ್ರಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ಆ್ಯಪಲ್ ಕಂಪನಿಯ ಸಿಇಓ ಟೀಮ್ ಕುಕ್‌ಗೆ ನೀವು ಮತ್ತೆ ಅಮೆರಿಕಾದಲ್ಲಿ ದೊಡ್ಡ ಹೂಡಿಕೆ ಮಾಡುತ್ತಿರುವುದಕ್ಕೆ ಸ್ವಾಗತ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದರು .
ಇನ್ನೂ ಟೀಮ್ ಕುಕ್ ಕೂಡ ಡೋನಾಲ್ಡ್ ಟ್ರಂಪ್ ಅವರನ್ನು ಹೊಗಳಿದ್ದರು. ಆ್ಯಪಲ್ ಕಂಪನಿಯು ಭಾರತದಲ್ಲಿ ಐಪೋನ್ ಉತ್ಪಾದನೆಗೆ ಹೂಡಿಕೆ ಮಾಡಿದ್ದಕ್ಕೆ ಡೋನಾಲ್ಡ್ ಟ್ರಂಪ್ ಕೋಪಗೊಂಡಿದ್ದರು. ಹೀಗಾಗ ಈಗ ಅಮೆರಿಕಾದಲ್ಲೇ 600 ಬಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಲು ಆ್ಯಪಲ್ ಕಂಪನಿಯು ನಿರ್ಧರಿಸಿದೆ ಎಂದು ಆ್ಯಪಲ್ ಕಂಪನಿಯ ಸಿಇಓ ಟೀಮ್ ಕುಕ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ